Advertisement
ಆ್ಯಪ್ ಗಳನ್ನು ಡಿಲೀಟ್ ಮಾಡುವ ವಿಚಾರದಲ್ಲಂತೂ ಇದರ ನೇರ ಲಾಭ ಒಂದು ಆ್ಯಪ್‌ಗೆ ಆಗಿದೆ. “ರಿಮೂವ್ ಚೀನ ಆ್ಯಪ್ಸ್’ ಹೆಸರಿನ ಈ ಆ್ಯಂಡ್ರಾಯಿಡ್ ಆ್ಯಪ್‌ಗೆ ಭರ್ಜರಿ ವೈರಸ್ ಆಗಿದ್ದು, ಮೇ 17ರ ಬಳಿಕ 50 ಲಕ್ಷ ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.
ಇದು ಯಾವ ಆ್ಯಪ್ ಯಾವ ದೇಶದಿಂದ ಲಾಂಚ್ ಆಗಿದೆ ಎಂಬುದನ್ನು ಗುರುತಿಸುತ್ತದೆ. ವಿಶೇಷವಾಗಿ ಇದು ಹೆಸರೇ ಹೇಳುವಂತೆ ಚೀನದಿಂದ ಲಾಂಚ್ ಆದ ಆ್ಯಪ್ ಗಳನ್ನು ಗುರುತಿಸಿ ಡಿಲೀಟ್ ಮಾಡುತ್ತದೆ. ಆ್ಯಪ್ ಇನ್‌ಸ್ಟಾಲ್ ಮಾಡುವಾಗಲೇ ನಿರ್ದಿಷ್ಟ ಆ್ಯಪ್ ಚೀನದ್ದು ಆಗಿದ್ದರೆ ತಿಳಿಸುತ್ತದೆ ಕೂಡ. ಈ ಆ್ಯಪ್ ಭಾರತದಲ್ಲಿ ಮಾತ್ರವಲ್ಲ ಆಸ್ಟ್ರೇಲಿಯಾದಲ್ಲೂ ಪ್ರಸಿದ್ಧಿ ಹೊಂದುತ್ತಿದೆ. ಅಲ್ಲೂ ಚೀನ ವಿರೋಧಿ ಮನೋಭಾವನೆ ಹೆಚ್ಚುತ್ತಿದ್ದು, ಆ್ಯಪ್ ಹೆಚ್ಚು ಡೌನ್‌ಲೋಡ್ ಆಗಲು ಕಾರಣವಾಗಿದೆ.
Related Articles
ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯ. ಇದಕ್ಕೆ ಲಾಗಿನ್ ಆಗಬೇಕಾದ ಆವಶ್ಯಕತೆ ಇಲ್ಲ. ಬಳಕೆದಾರರು ಆ್ಯಪ್ ಇನ್‌ಸ್ಟಾಲ್ ಮಾಡಿ ಸ್ಕ್ಯಾನ್ ಕೊಟ್ಟರೆ ಸಾಕು ಇದು ಚೀನ ಮೂಲದ ಆ್ಯಪ್ ಅನ್ನು ಹುಡುಕುತ್ತದೆ. ಗಮನಿಸಬೇಕಾದ ಅಂಶವೆಂದರೆ ಬಳಕೆದಾರರು ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿದ ಆ್ಯಪ್ ಗಳನ್ನು ಮಾತ್ರವೇ ಇದು ಗುರುತಿಸುತ್ತದೆ. ಒಂದು ವೇಳೆ ಬಳಕೆದಾರರ ಫೋನ್‌ನಲ್ಲಿ ಡಿಫಾಲ್ಟ್ ಆಗಿ ಚೀನ ಆ್ಯಪ್ ಇದ್ದರೆ ಅದನ್ನು ಡಿಲೀಟ್ ಮಾಡದು.
Advertisement