Advertisement
ಸದ್ಯ ರಾಜ್ಯದಲ್ಲಿ ಹತ್ತು ಜಿಲ್ಲೆಗಳಲ್ಲಿ ನೂರಕ್ಕೂ ಹೆಚ್ಚು ಸೋಂಕಿತರಿದ್ದಾರೆ. ಅದರಲ್ಲೂ ಈ ಜಿಲ್ಲೆಗಳಲ್ಲೇ ಹೆಚ್ಚಿನ ಪ್ರಮಾಣ ಸೋಂಕು ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ. ಎರಡು ವಾರಗಳ ಹಿಂದೆ ಗ್ರೀನ್ ಜೋನ್ ನಲ್ಲಿದ್ದ ಹಾಸನ, ಉಡುಪಿಯಲ್ಲಿ ಈಗ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದೆ.
Related Articles
Advertisement
ಯಾದಗಿರಿ: ಈ ಜಿಲ್ಲೆಯಲ್ಲಿ 163 ಮಂದಿ ಸೋಂಕಿತರಿದ್ದಾರೆ. ಒಂಬತ್ತು ಮಂದಿ ಸೋಂಕಿತರು ಗುಣಮುಖವಾಗಿದ್ದರೆ ಓರ್ವ ಸಾವನ್ನಪ್ಪಿದ್ದಾನ.
ಉಡುಪಿ: ಮಹಾರಾಷ್ಟ್ರದ ಪ್ರಯಾಣಿಕರ ಹೊಡೆತಕ್ಕೆ ಸಿಲುಕಿದ ಉಡುಪಿಯಲ್ಲಿ ಸೋಂಕಿತರ ಸಂಖ್ಯೆ 149ಕ್ಕೆ ಏರಿಕೆಯಾಗಿದೆ. 145 ಮಂದಿ ಸಕ್ರಿಯ ಸೋಂಕಿತರಿದ್ದು, ಓರ್ವ ಸಾವನ್ನಪ್ಪಿದ್ದಾರೆ.
ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯ ಒಟ್ಟು ಸೋಂಕಿತರ ಸಂಖ್ಯೆ 146. ಒಟ್ಟಯ 92 ಮಂದಿ ಬಿಡುಗಡೆಯಾಗಿದ್ದಾರೆ. ಓರ್ವ ಸೋಂಕಿತ ಸಾವನ್ನಪ್ಪಿದ್ದಾನೆ.
ದಾವಣಗೆರೆ: ಇಲ್ಲಿ 142 ಜನರಿಗೆ ಸೋಂಕು ದೃಢವಾಗಿದ್ದು, 79 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ನಾಲ್ವರು ಸಾವನ್ನಪ್ಪಿದ್ದು, 59 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾಸನ: ಈ ಜಿಲ್ಲೆಯಲ್ಲಿ 140 ಮಂದಿ ಸೋಂಕಿತರಿದ್ದು, ಯಾರೂ ಗುಣಮುಖರಾಗಿಲ್ಲ. ಎಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿಕ್ಕಬಳ್ಳಾಪುರ: ಆಂಧ್ರ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 131ಕ್ಕೆ ಏರಿಕೆಯಾಗಿದೆ. ಇಬ್ಬರು ಸಾವನ್ನಪ್ಪಿದ್ದು, 19 ಮಂದಿ ಬಿಡುಗಡೆಯಾಗಿದ್ದಾರೆ. ಇನ್ನೂ 110 ಸಕ್ರಿಯ ಪ್ರಕರಣಗಳಿವೆ,
ಬೀದರ್: ಈ ಜಿಲ್ಲೆಯಲ್ಲಿ 120 ಜನರಿಗೆ ಸೋಂಕು ದೃಢವಾಗಿದೆ. 24 ಮಂದಿ ಬಿಡುಗಡೆಯಾಗಿದ್ದರೆ, 93 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರು ಸೋಂಕಿತರು ಸಾವನ್ನಪ್ಪಿದ್ದಾರೆ.
ಉಳಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 97 ಸೋಂಕಿತರಿದ್ದು, ಮೈಸೂರಿನ ಒಟ್ಟು ಸೋಂಕು ಪ್ರಕರಣ 90.
( ಮೇ 28ರ ಸಂಜೆಯ ಆರೋಗ್ಯ ಇಲಾಖೆ ವರದಿ ಆಧಾರಿತ)