Advertisement
ಜ. 5ರಂದು ತಿರುವನಂತಪುರದಲ್ಲಿ ಸಿಲ್ವರ್ ಲೈನ್ ಅಲೈನ್‌ಮೆಂಟ್ ನಿರ್ಣಯಿಸುವ ಸರ್ವೇ ಪೂರ್ತಿಗೊಂಡಿದ್ದು, ಪ್ರಥಮ ಹಂತದ ಪ್ರಕ್ರಿಯೆ ಯಶಸ್ವಿಯಾಯಿತು. ಸಿಲ್ವರ್ ಲೈನ್ 531.45 ಕಿಲೋ ಮೀಟರ್ ದೀರ್ಘವಿದ್ದು, ಇದರ ಸರ್ವೇಗೆ ನೌಕಾದಳದ ಪಿ.68 ಎಂಬ ವಿಮಾನವನ್ನು ಮತ್ತು ಅದರಲ್ಲಿ ಘಟಿಸಿದ ಲ್ಯಾಡರ್ ವ್ಯವಸ್ಥೆಯನ್ನು ಬಳಸಲಾಗಿದೆ. ಇದಲ್ಲದೆ ಈ ಯೋಜನೆಯಲ್ಲಿ ಕಾರ್ಯರೂಪಕ್ಕೆ ಬರುವ ರೈಲು ನಿಲ್ದಾಣಗಳ ಸರ್ವೆಯೂ ಪೂರ್ಣಗೊಂಡಿತು.
Related Articles
Advertisement
ಯೋಜನೆಗೆ ಅಗತ್ಯದ ಮೊತ್ತವನ್ನು ಸರಿದೂಗಿಸಲು ಹೂಡಿಕೆ ಸಂಗ್ರಹಿಸಲು ಕೇರಳ ರೈಲ್ವೇ ಅಭಿವೃದ್ಧಿ ನಿಗಮಕ್ಕೆ (ಕೆ.ಆರ್. ಡಿ.ಸಿ.ಎಲ್) ಕೇಂದ್ರ ರೈಲ್ವೇ ಸಚಿವಾಲಯ ಅನುಮತಿ ನೀಡಿದೆ. ಪ್ರಾಥಮಿಕ ಹಂತದಲ್ಲಿ 100 ಕೋಟಿ ರೂ. ವೆಚ್ಚ ಮಾಡಲು ಅನುಮತಿ ನೀಡಲಾಗಿದೆ.
ರೈಲು ಹಳಿ ನಿರ್ಮಾಣ ಸಂದರ್ಭದಲ್ಲಿ ಸುಮಾರು 50 ಸಾವಿರ ಉದ್ಯೋಗ ಅವಕಾಶ ಲಭಿಸಲಿದೆ. ಯೋಜನೆ ಪೂರ್ತಿಯಾದ ಬಳಿಕ 11,000 ಮಂದಿಗೆ ಉದ್ಯೋಗ ಲಭಿಸಲಿದೆ. ಯೋಜನೆ ಶೇ. 100 ಪರಿಸರ ಸೌಹಾರ್ದವಾಗಿರುವುದು. ಇದಕ್ಕಾಗಿ ಗುಜರಾತ್‌ನ ಅಹ್ಮದಾಬಾದ್‌ನ ಐ.ಐ.ಎಂ. ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು. ಸೌರ ಶಕ್ತಿಯನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಲಾಗುವುದು. ಸ್ಟೀಲ್ ಹಾಗೂ ಕಾಂಕ್ರೀಟ್ ಪುನರ್ ಸಂಸ್ಕರಿಸಿ ಬಳಸುವಂತೆ ಮಾಡಲಾಗುವುದು. ನಿರ್ಮಾಣ ಸಂದರ್ಭದಲ್ಲಿ ಉಂಟಾ ಗುವ ಸಾಮಗ್ರಿ ಉಳಿಕೆಯನ್ನು ಸಂಸ್ಕರಿಸಲಾ ಗುವುದು. ಪ್ಯಾರಿಸ್‌ನ ಸಿಸ್ಟ್ರಾ ಎಂಬ ಸಂಸ್ಥೆ ಸೆಮಿ ಹೈಸ್ಪೀಡ್ ರೈಲು ಹಳಿ ನಿರ್ಮಾಣದ ಬಗ್ಗೆ ಸಾಧ್ಯತೆ ಅಧ್ಯಯನ ನಡೆಸಿತ್ತು.
66,405 ಕೋ.ರೂ. ಯೋಜನೆ
ಮಹತ್ವಾಕಾಂಕ್ಷೆಯ ತಿರುವನಂತಪುರ- ಕಾಸರಗೋಡು ಸೆಮಿ ಹೈಸ್ಪೀಡ್ ಟ್ರೈನ್ ಹಳಿ ಯೋಜನೆಯಾದ “ಸಿಲ್ವರ್ ಲೈನ್’ಗೆ ರೈಲ್ವೇ ಸಚಿವಾಲಯ ಅನುಮತಿ ನೀಡಿದ್ದು, ಈ ರೈಲುಗಾಡಿ ಯೋಜನೆ ಸಾಕಾರಗೊಂಡಲ್ಲಿ ಕೇರಳದ ರಾಜಧಾನಿ ತಿರುವನಂತಪುರದಿಂದ ಕಾಸರಗೋಡಿಗೆ 4 ಗಂಟೆಗಳಲ್ಲಿ ರೈಲು ತಲುಪಲಿದೆ. ಈ ಯೋಜನೆಗೆ 66,405 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಸ್ಥಳ ಸರ್ವೆ ಶೀಘ್ರ
ಈ ಸಮಗ್ರ ಯೋಜನೆ ವರದಿ (ಡಿ.ಪಿ.ಆರ್)ಯ ಆಧಾರದಲ್ಲಿ ಅಲೈನ್‌ಮೆಂಟ್ ನಿರ್ಣಯಿಸಲಾಗುವುದು. ಸರ್ವೇಯನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ತಿಗೊಳಿಸಲು ಸಾಧ್ಯವಾಗಿರುವುದರಿಂದ ಡಿ.ಪಿ.ಆರ್. ಮತ್ತು ಲೊಕೇಶನ್ ಸರ್ವೆಯೂ ಶೀಘ್ರಗತಿಯಲ್ಲಿ ನಡೆಸಿ ಕಾಮಗಾರಿ ಆರಂಭಿಸಲು ಸಾಧ್ಯವಾಗಲಿದೆ.
-ವಿ.ಅಜಿತ್ ಕುಮಾರ್,
ಎಂ.ಡಿ, ಕೆ.ಆರ್.ಡಿ.ಸಿ.