Advertisement

District-in-charge-minister ಹೆಸರನ್ನು ಕೈ ಬಿಟ್ಟ ತೀರ್ಥಹಳ್ಳಿ ಪಟ್ಟಣ ಪಂಚಾಯತಿ..!

05:29 PM Jan 10, 2024 | Shreeram Nayak |

ತೀರ್ಥಹಳ್ಳಿ: ಪುರಾಣ ಪ್ರಸಿದ್ಧ ಐತಿಹಾಸಿಕ ಹಿನ್ನೆಲೆಯಿರುವ ಪರಶುರಾಮ ಕ್ಷೇತ್ರವಾದ ತೀರ್ಥಹಳ್ಳಿಯ ರಾಮೇಶ್ವರ ಜಾತ್ರಾ ಮಹೋತ್ಸವವು ಬಹಳ ವಿಜೃಂಭಣೆಯಿಂದ ಈ ಬಾರಿ ನಡೆಯಲಿದೆ.

Advertisement

ಜಾತ್ರಾ ಸಮಿತಿ, ತೆಪ್ಪೋತ್ಸವ ಸಮಿತಿ, ಪಟ್ಟಣ ಪಂಚಾಯತಿಯವರು ಈಗಾಗಲೇ ಜಾತ್ರೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಜಾತ್ರೆಗೆ ಲಕ್ಷಾಂತರ ಜನರು ಸೇರುವ ನಿರೀಕ್ಷೆಯೂ ಇದೆ.

ಪಟ್ಟಣ ಪಂಚಾಯತಿ ವತಿಯಿಂದ ರಥಬೀದಿಯಲ್ಲಿ ಆಡಳಿತ ಮಂಡಳಿಯವರ ಶುಭಾಶಯ ನಾಮ ನಾಮಫಲಕಗಳು (ಫ್ಲೆಕ್ಸ್) ಬ್ಯಾನರ್ ಅಲ್ಲಲ್ಲಿ ರಾರಾಜಿಸುತ್ತಿದೆ. ಆ ಫ್ಲೆಕ್ಸ್‌ನಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಆಡಳಿಯ ಮಂಡಳಿಯ ಪೋಟೋ ಹಾಗೂ ಹೆಸರು ಮಾತ್ರ ಎದ್ದು ಕಾಣುತ್ತಿದೆ. ಆದರೆ ತೀರ್ಥಹಳ್ಳಿ ಪಟ್ಟಣ ಪಂಚಾಯತಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪರವರ ಪೋಟೋ ಮತ್ತು ಹೆಸರು ಯಾವ ಬ್ಯಾನರ್‌ನಲ್ಲಿಯೂ ಕಾಣುತ್ತಿಲ್ಲ.

ಫ್ರೋಟೋಕಾಲ್ ಪ್ರಕಾರ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರವರ ಫೋಟೋವನ್ನು ಈ ಬ್ಯಾನರ್‌ನಲ್ಲಿ ಹಾಕಲೇಬೇಕು . ಆದರೆ ಎಲ್ಲಿಯೂ ಸಚಿವರ ಹೆಸರಾಗಲಿ ಫೋಟೋವಾಗಲಿ ಕಾಣುತ್ತಿಲ್ಲ ಎಂಬ ಮಾತು ಸಾರ್ವಜನಿಕರ ವಲಯದಿಂದ ಕೇಳಿ ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next