Advertisement

Thirthahalli; ಹಾಡಹಗಲೇ 1 ಲಕ್ಷ ರೂ.ಕಳ್ಳತನ!

07:50 PM Aug 07, 2023 | Vishnudas Patil |

ತೀರ್ಥಹಳ್ಳಿ : ಪಟ್ಟಣದ ಗಾಂಧಿ ಚೌಕದಲ್ಲಿರುವ ಮಾರಿಕಾಂಬಾ ದೇವಸ್ಥಾನದ ಬಳಿ ಕಾರಿನಲ್ಲಿ ಇಟ್ಟಿದ್ದ ಲಕ್ಷ ರೂ ಹಣವನ್ನು ಹಾಡಹಗಲೇ ಕಳ್ಳತನ ಮಾಡಿರುವ ಘಟನೆ ಸೋಮವಾರ ನೆಡೆದಿದೆ.

Advertisement

ಮುಂಡಿಗೆಮನೆಯ ದೇವರಾಜ್ ಎಂಬುವರು ಕರ್ನಾಟಕ ಬ್ಯಾಂಕ್ ನಲ್ಲಿ 1 ಲಕ್ಷ ರೂ ಹಣವನ್ನು ಡ್ರಾ ಮಾಡಿಕೊಂಡು ಬಂದು ಕಾರಿನಲ್ಲಿ ಇಟ್ಟಿದ್ದಾರೆ. ನಂತರ ಪುನಃ ಬ್ಯಾಂಕ್ ಗೆ ಹೋಗಿ ಪಾಸ್ ಬುಕ್ ಎಂಟ್ರಿ ಮಾಡಿಸಿ ವಾಪಾಸ್ ಬರುವುದರೊಳಗೆ ಕಾರಿನ ಲಾಕ್ ತೆಗೆದು ಹಣವನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.

ಪಟ್ಟಣದ ಮದ್ಯ ಭಾಗದಲ್ಲಿಯೇ ಅದರಲ್ಲೂ ಹಾಡಹಗಲೇ ಈ ರೀತಿ ಘಟನೆ ನೆಡೆದಿದೆ. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು ಸ್ಥಳದಲ್ಲಿ ಇರುವ ಸಿಸಿ ಕ್ಯಾಮರಾ ಪರಿಶೀಲನೆ ನೆಡೆಸುತ್ತಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Advertisement

Udayavani is now on Telegram. Click here to join our channel and stay updated with the latest news.

Next