Advertisement

Thirthahalli: ಶಿಕ್ಷಕರ ಚುನಾವಣೆಯಲ್ಲಿ ಶಿಕ್ಷಕರೇ ಸ್ಪರ್ಧೆ ಮಾಡಬೇಕು: ಅರುಣ್ ಹೊಸಕೊಪ್ಪ

02:47 PM May 03, 2024 | Kavyashree |

ತೀರ್ಥಹಳ್ಳಿ: ಜೂನ್. 3ಕ್ಕೆ ನೈಋತ್ಯ ಶಿಕ್ಷಕರ ಪದವಿ ಚುನಾವಣೆಗೆ ದಿನಾಂಕ ನಿಗದಿ ಮಾಡಲಾಗಿದೆ.

Advertisement

ಕಳೆದ ಎರಡು ಬಾರಿ ನಾನು ಸ್ಪರ್ಧೆ ಮಾಡಿ ಗೆಲುವು ಕಾಣುವಲ್ಲಿ ವಿಫಲನಾಗಿದ್ದೆ. ಈ ಬಾರಿ ನನ್ನೆಲ್ಲಾ ಶಿಕ್ಷಕ ಮಿತ್ರರು ಅವಕಾಶ ನೀಡಲು ಮನವಿ ಮಾಡುತ್ತೇನೆ ಎಂದು ಅಭ್ಯರ್ಥಿ ಅರುಣ್ ಹೊಸಕೊಪ್ಪ ಹೇಳಿದರು.

ಶುಕ್ರವಾರ ಪಟ್ಟಣದ ಅನ್ನಪೂರ್ಣ ಗ್ರಾಂಡ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಹಾಲಿ ಸದಸ್ಯರು, ಶಿಕ್ಷಕರು ಅಲ್ಲದೆ ಇದ್ದರೂ ಕೂಡ ಅವರನ್ನು ಗೆಲ್ಲಿಸಿದ್ದರು. ಆದರೆ ಅವರು ಶಿಕ್ಷಕರ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ಶಿಕ್ಷಕರ ಚುನಾವಣೆಯಲ್ಲಿ ಶಿಕ್ಷಕರೇ ಸ್ಪರ್ಧೆ ಮಾಡಬೇಕು. ಶಿಕ್ಷಕರಲ್ಲದೇ ಇರುವವರನ್ನು ಆಯ್ಕೆ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಂಡಿಲ್ಲ. ಹಾಗಾಗಿ ಈ ಬಾರಿ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಕೊಡಗು, ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು, ದಾವಣಗೆರೆ ಸೇರಿ ಹಲವು ಜಿಲ್ಲೆಯ ಶಿಕ್ಷಕರು ಚುನಾವಣೆಗೆ ಮತ ಹಾಕಲು ಅವಕಾಶ ಇದೆ. ಕ್ರಿಯಾಶೀಲವಾಗಿ ಕೆಲಸ ಮಾಡಲು ನಾನು ಸಿದ್ದನಿದ್ದೇನೆ. ಹಾಲಿ ಸದಸ್ಯರು ಒಬ್ಬ ರಾಜಕಾರಣಿ,  ಶಿಕ್ಷಕರ ಸಮಸ್ಯೆ ಪರಿಹಾರ ಮಾಡುವಲ್ಲಿ ಅವರು ಸಫಲರಾಗಿಲ್ಲ. ಖಾಸಗಿ ಹಾಗೂ ಸರ್ಕಾರಿ ಶಾಲೆಯ ಶಿಕ್ಷಕರಲ್ಲಿ ಹಲವು ರೀತಿಯಲ್ಲಿ ಸಮಸ್ಯೆ ಇದೆ. ಆ ಎಲ್ಲಾ ಸಮಸ್ಯೆಗೆ ಪರಿಹಾರ ಒದಗಿಸುವ ಕೆಲಸ ನಾನು ಮಾಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next