Advertisement

Thirthahalli: ವಸತಿ ಶಾಲೆ ಶಿಕ್ಷಕನ ವಿರುದ್ಧ ಪೋಕ್ಸೋ ಕೇಸ್ ದಾಖಲು; ಶಿಕ್ಷಕನ ಬಂಧನ

05:30 PM Aug 21, 2024 | Kavyashree |

ತೀರ್ಥಹಳ್ಳಿ: ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ ತೋರಿದ ಹಿನ್ನಲೆ ಸರ್ಕಾರಿ ವಸತಿ ಶಾಲೆಯೊಂದರಲ್ಲಿ ಶಿಕ್ಷಕನ ಮೇಲೆ ಪೋಕ್ಸೋ ಕೇಸ್ ದಾಖಲಾಗಿದೆ.

Advertisement

ಸಂಗೀತ ಶಿಕ್ಷಕ ಇಮ್ತಿಯಾಜ್ (45) ಎಂಬವರ ವಿರುದ್ಧ ಪೋಕ್ಸೋ ಆರೋಪ ಮಾಡಲಾಗಿದೆ.

ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ಹಾಗೂ ಅನುಚಿತ ರೀತಿಯಲ್ಲಿ ಶಾಲೆಯಲ್ಲಿ ಹಾಗೂ ಪ್ರವಾಸದ ವೇಳೆ ವರ್ತಿಸಿದ್ದ ಎಂಬುದಾಗಿ ವಿದ್ಯಾರ್ಥಿಗಳಿಂದ ವಸತಿ ಶಾಲಾ ಪ್ರಾಂಶುಪಾಲರಿಗೆ ದೂರು ನೀಡಲಾಗಿದೆ.

ವಸತಿ ಶಾಲಾ ಪ್ರಾಂಶುಪಾಲರಿಂದ ಪೊಲೀಸರಿಗೆ ದೂರು ನೀಡಿದ್ದು, ತೀರ್ಥಹಳ್ಳಿ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಪೋಕ್ಸೋ ಪ್ರಕರಣದ ಆರೋಪಿ ಇಮ್ತಿಯಾಜ್ ನನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next