ತೀರ್ಥಹಳ್ಳಿ : ರಾಷ್ಟ್ರೀಯ ಹೆದ್ದಾರಿ 169 A ಕುರುವಳ್ಳಿ – ಬಾಳೆಬೈಲು ಪರ್ಯಾಯ ರಸ್ತೆಯು ಈ ಬಾರಿಯ ವಿಪರೀತ ಮಳೆಯಿಂದಾಗಿ ಧರೆ ಕುಸಿದು ದುರಸ್ತಿ ಕಾರ್ಯ ನಡೆಯುತ್ತಿರುವ ವೇಳೆಯಲ್ಲಿ ರಸ್ತೆಗೆ ಹಾಕಿದ್ದ ಬ್ಯಾರಿಕೇಡ್ ತೆಗೆಯಲಾಗಿತ್ತು.
ವಾಹನ ಸವಾರರು ಅದೇ ರಸ್ತೆಯಲ್ಲಿ ಹೋಗಿ ದುರಸ್ತಿ ಕಾರ್ಯ ನೋಡಿ ವಾಪಾಸ್ಸಾಗುವುದು ಒಂದೆಡೆಯಾದರೆ ಇನ್ನು ಕೆಲವು ವಾಹನ ಸವಾರರು ರಾತ್ರಿ ವೇಳೆ ರಸ್ತೆ ಸರಿಯಾಗಿದೆ ಎಂದು ವೇಗವಾಗಿ ಹೋಗಿ ರಸ್ತೆಗೆ ಅಡ್ಡಲಾಗಿ ಹಾಕಿದ ಮಣ್ಣಿನ ದಿಬ್ಬಕ್ಕೆ ಗುದ್ದಿ ಕೆಲವು ವಾಹನಗಳು ಜಖಂಗೊಂಡ ನಿದರ್ಶನಗಳೂ ಇತ್ತು.
ಇದರಿಂದ ವಾಹನ ಸವಾರರು ತೊಂದರೆಗೀಡಾಗುತ್ತಿದ್ದಾರೆ ಎಂದು ಬ್ಯಾರಿಕೇಡ್ ತೆರವುಗೊಳಿಸಿರುವುದರಿಂದ ವಾಹನ ಸವಾರರ ಪರದಾಟ ಎಂಬ ಶೀರ್ಷಿಕೆ ಅಡಿಯಲ್ಲಿ ಉದಯವಾಣಿ ಪತ್ರಿಕೆಯಲ್ಲಿ ವರದಿ ಕೂಡ ಮಾಡಿತ್ತು ವರದಿ ಬಿತ್ತರವಾಗುತ್ತಿದಂತೆ ಕೆಲವೆ ಸಮಯದಲ್ಲಿ ಅಧಿಕಾರಿಗಳು ತಕ್ಷಣ ಗಮನಿಸಿ ಮತ್ತೆ ಬ್ಯಾರಿಕೇಡ್ ಅಳವಡಿಕೆ ಮಾಡಿದ್ದಾರೆ.
ಇದನ್ನೂ ಓದಿ: Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್ ಗೆ ಹೊಡೆದ ಯುವಕ!