Advertisement

Thirthahalli ನಿರಂತರ ಮಳೆಯ ಆರ್ಭಟ : ಕುಸಿದು ಬಿದ್ದ ಮನೆಯ ಗೋಡೆ

08:32 PM Jul 21, 2024 | Shreeram Nayak |

ತೀರ್ಥಹಳ್ಳಿ: ತಾಲೂಕಿನ ಸುತ್ತಮುತ್ತ ಪುನರ್ವಸು ಮತ್ತು ಪುಷ್ಯ ಮಳೆ ನಿರಂತರವಾಗಿ ಧಾರಾಕಾರವಾಗಿ ಮಳೆಯಾಗಿದ್ದು ಹಲವು ಕಡೆ ಮನೆಗಳು ಕುಸಿತಗೊಂಡಿವೆ.

Advertisement

ಪಟ್ಟಣದ ಕುರುವಳ್ಳಿ ವಾರ್ಡ್ ನಂಬರ್ 14 ರ ಆನೆಗುಂಡಿ ರಸ್ತೆಯ ನಾಗರಕಟ್ಟೆ ಸಮೀಪದ ಸುನಂದಾ ಶೆಟ್ಟಿ ಅವರ ಮನೆಯ ಗೋಡೆ ಕುಸಿತಗೊಂಡಿದ್ದು ಇನ್ನೂ ಉಳಿದ ಗೋಡೆಯು ಬಿರುಕು ಬಿಟ್ಟು ಕುಸಿಯುವ ಹಂತದಲ್ಲಿದ್ದು ಅಪಾರ ನಷ್ಟ ಉಂಟಾಗಿದೆ .

ಈಗಾಗಲೇ ಘಟಾನ ಸ್ಥಳಕ್ಕೆ ಪಟ್ಟಣ ಪಂಚಾಯಿತಿ ಸದಸ್ಯರಾದ ಮಂಜುಳಾ ನಾಗೇಂದ್ರ ಕಂದಾಯ ಇಲಾಖೆ ಅಧಿಕಾರಿ ಮೋಹನೇಶ್ ಸೇರಿದಂತೆ ಸಂಬಂಧ ಪಟ್ಟ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಮನೆ ಕುಸಿತ ಗೊಂಡವರ ಕುಟುಂಬಕ್ಕೆ ಪರಿಹಾರ ಒದಗಿಸುವಲ್ಲಿ ಮುಂದಾಗಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯರಾದ ಮಂಜುಳಾ ನಾಗೇಂದ್ರ ರವರು ಆಗ್ರಹಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next