Advertisement

Thirthahalli: ವಿಮೆ ಇಲ್ಲದೆ ಓಡಾಡುತ್ತಿರುವ ಸರ್ಕಾರಿ ವಾಹನ !

02:52 PM Aug 14, 2024 | Kavyashree |

ತೀರ್ಥಹಳ್ಳಿ: ವಾಹನ ಓಡಿಸುವಾಗ ಸರಿಯಾದ ದಾಖಲೆಗಳನ್ನು ಇಟ್ಟುಕೊಂಡು ಹೋಗಬೇಕು ಎಂಬುದು ಕಾನೂನು. ಆ ಕಾನೂನನ್ನು ಪ್ರತಿಯೊಬ್ಬರು ಚಾಚೂ ತಪ್ಪದೆ ಮಾಡಲೇಬೇಕು. ವಾಹನಗಳಲ್ಲಿ ಸರಿಯಾದ ದಾಖಲಾತಿ ಇಟ್ಟುಕೊಳ್ಳದೆ ಹೋದರೆ ದಂಡ ಕಟ್ಟಬೇಕಾಗುತ್ತದೆ.

Advertisement

ಹೀಗೆ ಸಾರ್ವಜನಿಕರ ವಾಹನಗಳನ್ನು ತಡೆದು ದಾಖಲಾತಿಗಳನ್ನು ಪರಿಶೀಲನೆ ಮಾಡುವುದು ಸರಿ. ಆದರೆ, ಸರ್ಕಾರಿ ವಾಹನಗಳಲ್ಲೇ ದಾಖಲೆ ಇಲ್ಲದಿರುವುದಕ್ಕೆ ಹೊಣೆ ಯಾರು? ದಂಡ ಯಾರಿಗೆ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಹೌದು ತೀರ್ಥಹಳ್ಳಿಯ ತಾಲೂಕು ದಂಡಧಿಕಾರಿಗಳ ವಾಹನದ ವಿಮೆ (ಇನ್ಶೂರೆನ್ಸ್) 2023 ರ ನವೆಂಬರ್ ನಲ್ಲೆ ಮುಗಿದಿದೆ (ಲ್ಯಾಪ್ಸ್ ಆಗಿದೆ). ಇಲ್ಲಿಯವರೆಗೆ ಯಾರು ಕೂಡ ಈ ಬಗ್ಗೆ ಪ್ರಶ್ನೆ ಮಾಡಿಲ್ಲವೇ? ಅಥವಾ ಅದರ ಬಗ್ಗೆ ಯಾರು ಪರಿಶೀಲನೆ ಮಾಡಲಿಲ್ಲವೇ ಎಂಬ ಅನುಮಾನ ಮೂಡಿದೆ.

ಪ್ರತಿನಿತ್ಯ ರಸ್ತೆಗಳಲ್ಲಿ ಓಡಾಡುವ ವಾಹನಗಳನ್ನು ತಡೆದು ದಾಖಲೆಗಳನ್ನು ಪರಿಶೀಲನೆ ನಡೆಸುವ ಅಧಿಕಾರಿಗಳು ಸರ್ಕಾರಿ ವಾಹನದ ಬಗ್ಗೆ ಗಮನ ಹರಿಸಲಿಲ್ಲವೇ? ಅಥವಾ ಸರ್ಕಾರಿ ವಾಹನಗಳಲ್ಲಿ ದಾಖಲಾತಿ ಇರದಿದ್ದರೆ ಪರವಾಗಿಲ್ಲವೇ? ರಸ್ತೆಯಲ್ಲಿ ಏನಾದರು ಅವಘಡ ಸಂಭವಿಸಿದರೆ ಯಾರು ಹೊಣೆ? ಎಂಬುದಾಗಿ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ವಿಷಯ ತಿಳಿದು ತಾಲೂಕು ಕಚೇರಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಬಳಿ ವಿಮೆ ನವೀಕರಿಸದಿರುವ ಬಗ್ಗೆ ಕೇಳಿದಾಗ ಇನ್ಶೂರೆನ್ಸ್ ಹಣವನ್ನು ಈಗಾಗಲೇ ಕಟ್ಟಿದ್ದೇವೆ. ಆದರೆ ಬಾಂಡ್ ಇನ್ನೂ ನಮಗೆ ಬಂದಿಲ್ಲ ಎಂದು ಸಂಬಂಧ ಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಅದೇನೇ ಆಗಲಿ ಸರ್ಕಾರಿ ವಾಹನಗಳಿಗೆ ಒಂದು ನ್ಯಾಯ, ಸಾರ್ವಜನಿಕರ ವಾಹನಗಳಿಗೆ ಒಂದು ನ್ಯಾಯವೇ? ಅದಕ್ಕೆ ದಂಡ ಇಲ್ಲವೇ? ಹೀಗೆ ಮಾಡುವುದು ಸರಿಯೇ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next