Advertisement

Thirthahalli ಅಬ್ಬರಿಸುತ್ತಿರುವ ವರುಣ ! ಸಂಬಂಧ ಪಟ್ಟ ಅಧಿಕಾರಿಗಳು ಗಮನಿಸಲಿ..!

04:59 PM Jul 17, 2024 | Shreeram Nayak |

ತೀರ್ಥಹಳ್ಳಿ:ಮಲೆನಾಡಿನಾದ್ಯಂತ ಮಳೆಯ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ತಗೊಂಡಿದೆ.ತುಂಗಾ ನದಿಯ ನೀರು ಅಪಾಯ ಮಟ್ಟ ತಲುಪಿದೆ.ತೀರ್ಥಹಳ್ಳಿ ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆ ಅನಾಹುತಗಳು ಸಂಭವಿಸುತ್ತಿವೆ. ಈ ನಡುವೆ ತಾಲೂಕು ಆಡಳಿತ ಮಳೆಗಾಗಿ ಆರಂಭಿಸುವ ಸಹಾಯವಾಣಿಯನ್ನು ಇನ್ನು ಪ್ರಾರಂಭಿಸಿಲ್ಲ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

Advertisement

ತೀರ್ಥಹಳ್ಳಿ ತಾಲೂಕಿನಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಜೊತೆಗೆ ಕಾಡು ಅರಣ್ಯಗಳಿಂದ ಕೂಡಿರುವ ಕಾರಣ ಅನಾಹುತಗಳು ಪ್ರತಿ ವರ್ಷ ನಡೆಯುತ್ತಿವೆ. ಇನ್ನೂ ಅನೇಕ ಕಡೆ ರಸ್ತೆ ಮೇಲೆ ನೀರು ನುಗ್ಗುವುದರಿಂದ ಅನಾಹುತ ಸಂಭವಿಸುತ್ತವೆ.

ಹೀಗಾಗಿ ಅಧಿಕಾರಿಗಳ ಮಟ್ಟದಲ್ಲಿ ತಾಲೂಕು ಆಡಳಿತ ಸಹಾಯವಾಣಿಯನ್ನು ರಚಿಸಬೇಕಿದೆ. ಆದರೆ ಈವರೆಗೆ ಸಹಾಯವಾಣಿ ರಚನೆ ಆಗಿಲ್ಲ, ಇದರಿಂದಾಗಿ ಅನಾಹುತದಲ್ಲಿ ಸಿಲುಕಿದ್ದವರು ಅಥವಾ ತೊಂದರೆಗೀಡಾದವರು ಯಾರಿಗೆ ಕರೆ ಮಾಡಬೇಕೆಂಬ ಪ್ರಶ್ನೆ ಕೂಡ ಈಗ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ಸ್ಥಳೀಯ ಆಡಳಿತಗಳು ಕೂಡ ಅಂದರೆ ಗ್ರಾಮ ಪಂಚಾಯತ್ ಮತ್ತು ಪಟ್ಟಣ ಪಂಚಾಯತ್ ಕೂಡ ಈ ಸಂದರ್ಭದಲ್ಲಿ ಒಂದು ಸಹಾಯವಾಣಿಯನ್ನು ತೆರೆಯಬೇಕು. ಜೊತೆಗೆ ತಾಲೂಕು ಆಡಳಿತ ಎಲ್ಲರ ದೂರನ್ನು ಕೇಳಲು 24*7 ಸಹಾಯವಾಣಿಯನ್ನು ತೆರೆಯಬೇಕು.ಈ ಮೂಲಕ ಮಳೆಗಾಲದಲ್ಲಿ ಆಗುವಂತಹ ಅನಾಹುತಗಳಿಗೆ ತಕ್ಷಣ ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next