Advertisement

Thirthahalli ವಾಣಿಜ್ಯ ಕ್ಷೇತ್ರದಲ್ಲಿ ಕು. ಅರ್ಪಿತಾಳ ಸಾಧನೆ

07:36 PM Jul 12, 2024 | Shreeram Nayak |

ತೀರ್ಥಹಳ್ಳಿ: ಭವಿಷ್ಯವನ್ನು ರೂಪಿಸಿಕೊಳ್ಳಲು ವಿಜ್ಞಾನ ಕ್ಷೇತ್ರದಲ್ಲಿ ಮಾತ್ರ ಸಾಧ್ಯ ಎನ್ನುವುದು ಹಲವರ ಮತ ! ಆದರೆ ಇದನ್ನು ಹೊರತುಪಡಿಸಿದ ಮಾರ್ಗಗಳು ಇವೆಯೆಂದು, ಚಾರ್ಟೆಡ್ ಅಕೌಂಟೆಂಟ್ ಆಗುವ ಮೂಲಕ ಸಾಬೀತು ಪಡಿಸಿದವರು ಆರಗದ ನೇತ್ರಾವತಿ ಮತ್ತು ದತ್ತಾತ್ರಿ ಇವರ ಪುತ್ರಿ, ವಾಗ್ದೇವಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕು.ಅರ್ಪಿತಾ.

Advertisement

ವಾಗ್ದೇವಿ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ (2015-16) ಶೇ 98 ಅಂಕಗಳನ್ನು ಪಡೆಯುವುದರ ಮೂಲಕ ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸವನ್ನು ಮುಗಿಸಿದ ಇವರು, ವಿಜ್ಞಾನ ಕ್ಷೇತ್ರಕ್ಕೆ, ಹಿರಿಯರ ಮಾರ್ಗದರ್ಶನವಿದ್ದರೂ ಸಹ ಸಿ.ಎ ಆಗುವ ಕನಸನ್ನು ಹೊತ್ತು ವಾಗ್ದೇವಿ ಪಿ.ಯು ಕಾಲೇಜಿನಲ್ಲಿ ವಾಣಿಜ್ಯ ವಿಭಾಗವನ್ನು ಸೇರಿಕೊಂಡರು.

ಅತ್ಯುತ್ತಮವಾಗಿ ವ್ಯಾಸಂಗ ಮಾಡಿ 2017-18 ರಲ್ಲಿ ನಡೆದ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನವನವನ್ನು ( ಶೇ 98 ಅಂಕಗಳನ್ನು) ಪಡೆದರು.

ಭವಿಷ್ಯವನ್ನು ರೂಪಿಸಿಕೊಳ್ಳಲು ವಾಗ್ದೇವಿಯ ಮಾರ್ಗದರ್ಶನದಲ್ಲಿ ಉಡುಪಿಯ ತ್ರಿಶಾ ಕಾಲೇಜಿನಲ್ಲಿ ಅಧ್ಯಯನ ಮಾಡಿ ಚಾರ್ಟೆಡ್ ಅಕೌಂಟೆಂಟ್ (C.A) ಆಗುವಲ್ಲಿ, ಯಶಸ್ವಿಯಾಗಿದ್ದಾರೆ. ವಾಗ್ದೇವಿ ಪಿ.ಯು ಕಾಲೇಜು ವಿಜ್ಞಾನ ವಿಭಾಗಕ್ಕೆ ನೀಡಬಹುದಾದ ಪ್ರಾಶಸ್ತ್ಯ ಮತ್ತು ಉತ್ತೇಜನವನ್ನು ವಾಣಿಜ್ಯ ವಿಭಾಗಕ್ಕೂ ನೀಡುತ್ತಲೇ ಬಂದಿದೆ. ಇದಕ್ಕೆ ಉದಾಹರಣೆ ಈ ವಿದ್ಯಾರ್ಥಿನಿಯ ಅಭೂತಪೂರ್ವವಾದ ಸಾಧನೆ.

ಈ ಸಾಧನೆಯನ್ನು ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಸದಸ್ಯರು, ಉಪನ್ಯಾಸಕವೃಂದ ಹಾಗೂ ಪೋಷಕರು ಅಭಿನಂದಿಸಿ ಉತ್ತಮ ಭವಿಷ್ಯ ರೂಪುಗೊಳ್ಳಲಿ ಎಂದು ಹಾರೈಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next