Advertisement
ಈ ರಥೋತ್ಸವದಲ್ಲಿ ಸಾವಿರಾರು ಭಕ್ತಾದಿಗಳು ರಥಕ್ಕೆ ಹಣ್ಣುಕಾಯಿ ಮಾಡಿಸುವುದರ ಮುಖಾಂತರ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದರು. ಮಧ್ಯಾಹ್ನ ಅನ್ನ ದಾಸೋಹ ಮಿತ್ರವೃಂದದಿಂದ ಪಾಲ್ಗೊಂಡ ಎಲ್ಲಾ ಭಕ್ತಾದಿಗಳಿಗೆ ಅನ್ನ ಪ್ರಸಾದ ವಿತರಿಸಲಾಯಿತು. ಈ ಅನ್ನ ಪ್ರಸಾದವನ್ನು ಭಕ್ತರು ಸರದಿ ಸಾಲಿನಲ್ಲಿ ನಿಂತು ಶಿಸ್ತು ಬದ್ಧವಾಗಿ ಸ್ವೀಕರಿಸಿದರು. ಈ ಭೋಜನ ಪ್ರಸಾದ ಸ್ವೀಕರಿಸುವ ಸಂದರ್ಭದಲ್ಲಿ ಇಂದಿರಾನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಂಹಿತಾ ಎಂಬ ಪುಟ್ಟ ವಿದ್ಯಾರ್ಥಿನಿಯೋರ್ವಳು ಜನಸಂದಣಿಯಲ್ಲಿ ಕೈತಪ್ಪಿ ಬಿದ್ದ ಅನ್ನ ಪ್ರಸಾದವನ್ನು ಅಲ್ಲೇ ಬಿಡದೆ ಅಷ್ಟೊಂದು ಜನರ ನಡುವೆಯೂ ಸ್ವಚ್ಛತೆಯೆಡೆಗೆ ವಿಶೇಷ ಗಮನಹರಿಸಿ ಸಂಪೂರ್ಣವಾಗಿ ತೆಗೆದು ಸ್ವಚ್ಛ ಮಾಡಿದಳು.ಈ ದೃಶ್ಯವನ್ನು ನೋಡಿದಂತಹ ಅಲ್ಲಿ ನೆರೆದಂತ ಅನೇಕ ಭಕ್ತಾದಿಗಳು ಆಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಆಕೆಯ ಉತ್ತಮ ಸಂಸ್ಕಾರಯುತ ನಡತೆಯನ್ನು ನೋಡಿ ಸಂತಸ ವ್ಯಕ್ತಪಡಿಸಿದರು.