Advertisement

ಹಳಿ ತಪ್ಪಿದ ತಪ್ತಿ-ಗಂಗಾ ಎಕ್ಸ್‌ ಪ್ರಸ್‌ ರೈಲು ಬೋಗಿಗಳು : ನಾಲ್ವರಿಗೆ ಗಾಯ

09:13 AM Apr 01, 2019 | Team Udayavani |

ಪಟ್ನಾ: ಬಿಹಾರದ ಛಪ್ರಾ ಎಂಬಲ್ಲಿ ತಪ್ತಿ – ಗಂಗಾ ಎಕ್ಸ್‌ಪ್ರಸ್‌ ರೈಲಿನ 13 ಬೋಗಿಗಳು ಹಳಿತಪ್ಪಿವೆ. ಈ ದುರ್ಘ‌ಟನೆಯಲ್ಲಿ ನಾಲ್ವರು ಪ್ರಯಾಣಿಕರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಇಂದು ಬೆಳಿಗ್ಗೆ 9.45ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಅವಘಡದಲ್ಲಿ ಜೀವಹಾನಿಯಾಗಿರುವ ಕುರಿತಾಗಿ ಇದುವರೆಗೂ ವರದಿಯಾಗಿಲ್ಲ. ರೈಲು ಹಳಿ ತಪ್ಪಲು ಕಾರಣಗಳೇನು ಎನ್ನುವ ಕುರಿತಾಗಿ ಇನ್ನಷ್ಟೇ ತಿಳಿದುಬರಬೇಕಾಗಿದೆ.

Advertisement

Four injured after more than 10 coaches of Tapti-Ganga express train derail near Gautam Asthan,Chhapra in Bihar pic.twitter.com/UuTDn8vD32

ಕಳೆದ ತಿಂಗಳಷ್ಟೇ ಜೋಗ್‌ ಬಾನಿ – ಆನಂದ್‌ ವಿಹಾರ್‌ ಟರ್ಮಿನಲ್‌ ಸೀಮಾಂಚಲ್‌ ಎಕ್ಸ್‌ಪ್ರಸ್‌ ಬಿಹಾರದ ಶಹದಾಯ್‌ ಬುಝುರ್ಗ್‌ನಲ್ಲಿ ಹಳಿತಪ್ಪಿದ ಪರಿಣಾಮ ಕನಿಷ್ಠ ಆರು ಜನರು ಮೃತಪಟ್ಟಿದ್ದರು ಮಾತ್ರವಲ್ಲದೇ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next