Advertisement
ವಯಸ್ಕರಿಗೆ ಹೋಲಿಕೆ ಮಾಡಿದರೆ, ಮಕ್ಕಳಲ್ಲಿ ಸೀರೋ ಪಾಸಿಟಿವಿಟಿ ಪ್ರಮಾಣ ಹೆಚ್ಚಾಗಿರುತ್ತದೆ. ಐದು ರಾಜ್ಯಗಳಲ್ಲಿನ 10 ಸಾವಿರ ಮಾದರಿಗಳ ಪೈಕಿ 4,500 ಮಾದರಿಗಳ ಅಧ್ಯಯನ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಹೊಸದಿಲ್ಲಿ ಏಮ್ಸ್‌ನ ಸಮುದಾಯ ವೈದ್ಯಕೀಯ ವಿಭಾಗದ ಡಾ|ಪುನೀತ್ ಮಿಶ್ರಾ ಹೇಳಿದ್ದಾರೆ.
Related Articles
Advertisement
ಲಸಿಕೆ ಹಾಕಿಸಿಕೊಂಡ ಸೋನಿಯಾ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೊವಿಶೀಲ್ಡ್‌ನ 2 ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ. ಅವರ ಪುತ್ರಿ ಪ್ರಿಯಾಂಕಾ ವಾದ್ರಾ ಮೊದಲ ಡೋಸ್ ಪಡೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಗುರುವಾರ ಸ್ಪಷ್ಟನೆ ನೀಡಿದೆ. ವಯನಾಡ್ ಸಂಸದ ರಾಹುಲ್ ಗಾಂಧಿ ಅವರು ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ವೈದ್ಯರ ಸಲಹೆ ಮೇರೆಗೆ ಅವರು ಶೀಘ್ರವೇ ಲಸಿಕೆ ಪಡೆದುಕೊಳ್ಳಲಿದ್ದಾರೆ ಎಂದು ಪಕ್ಷದ ವಕ್ತಾರ ರಣದೀಪ್ ಸುಜೇìವಾಲಾ ಹೇಳಿದ್ದಾರೆ. ರಾಹುಲ್ ಅವರಿಗೆ ಎ.18ರಂದು ನಡೆಸಲಾಗಿದ್ದ ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು ಎಂದಿದ್ದಾರೆ. ಬಿಜೆಪಿಯ ಪ್ರಮುಖ ನಾಯಕರು ಸೋನಿಯಾ ಗಾಂಧಿ ಮತ್ತು ಅವರ ಕುಟುಂಬ ಸದಸ್ಯರು ಲಸಿಕೆ ಹಾಕಿಸಿಕೊಂಡಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರವಾಗಿ ಈ ಸ್ಪಷ್ಟನೆ ನೀಡಲಾಗಿದೆ.
ಬಯಲಾಜಿಕಲ್ -ಇ ಶೇ. 90ರಷ್ಟು ಪರಿಣಾಮಕಾರಿಹೈದರಾಬಾದ್ನ ಬಯಲಾಜಿಕಲ್ ಇ ಸಂಸ್ಥೆಯ ಕೊರ್ಬೆವಾಕ್ಸ್ ಲಸಿಕೆ ಕೊರೊನಾ ವಿರುದ್ಧ ಶೇ.90ರಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಕೇಂದ್ರ ಸರಕಾರದ ಕೊರೊನಾ ಟಾಸ್ಕ್ಫೋರ್ಸ್‌ನ ಮುಖ್ಯಸ್ಥ ಎನ್.ಕೆ. ಅರೋರಾ ತಿಳಿಸಿದ್ದಾರೆ. ಸೋಂಕಿನ ವಿರುದ್ಧದ ಯುದ್ಧ ದಲ್ಲಿ ಇದು ಹೊಸ ಅಧ್ಯಾಯವನ್ನೇ ಆರಂಭಿಸಲಿದೆ ಎಂದಿದ್ದಾರೆ. ಸದ್ಯ ಲಸಿಕೆಯ 3ನೇ ಹಂತದ ಪ್ರಯೋಗ ನಡೆಯುತ್ತಿದೆ. ಅಕ್ಟೋಬರ್‌ನಲ್ಲಿ ಅದರ ಫಲಿತಾಂಶಗಳು ಲಭ್ಯವಾಗಲಿವೆ ಎಂದಿದ್ದಾರೆ. ಸೆಪ್ಟಂಬರ್‌ನಲ್ಲಿ ಮತ್ತೂಂದು?: ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮಕ್ಕಳಾಗಿ ಇರುವ ನೊವಾಕ್ಸ್ ಲಸಿಕೆಯ ಪ್ರಯೋಗ ಜುಲೈಯಿಂದ ಆರಂಭಿಸುವ ಸಾಧ್ಯತೆ ಇದೆ. ಪರೀಕ್ಷೆಯ ಪ್ರಯೋಗ ಮುಕ್ತಾಯಗೊಳಿಸಿ ಸೆಪ್ಟಂಬರ್‌ನಲ್ಲಿಯೇ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದರ ಜತೆಗೆ ಅಮೆರಿಕದ ನೊವಾಕ್ಸ್ ಸಂಸ್ಥೆಯ ಲಸಿಕೆಯ ಮಾದರಿಯನ್ನು ಆಧಾರವಾಗಿಸಿಕೊಂಡು ಕೊವಾವ್ಯಾಕ್ಸ್ ಅನ್ನೂ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.