Advertisement

ಕೋವಿಡ್ ಮೂರನೇ ಅಲೆಯನ್ನು ಹೊಡೆದುರುಳಿಸಲಿದೆ ಜರ್ಮನ್ :  ಜೆನ್ಸ್ ಸ್ಪಾನ್  

04:23 PM May 07, 2021 | Team Udayavani |

ಬರ್ಲಿನ್ : ಕೋವಿಡ್ ಸೋಂಕಿನ ಮೂರನೇ  ಅಲೆ ಜರ್ಮನ್ ನಲ್ಲಿ ಶೀಘ್ರದಲ್ಲಿ ಕೊನೆಗೊಳ್ಳುವ ಸಾದ್ಯತೆ ಇದೆ ಎಂದು ಜರ್ಮನ್ ಆರೋಗ್ಯ ಸಚಿವ ಜೆನ್ಸ್ ಸ್ಪಾನ್  ಹೇಳಿದ್ದಾರೆ.

Advertisement

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸ್ಪಾನ್,  ಸಾಮಾಜಿಕ ಅಂತರ ಕ್ರಮಗಳು ಮತ್ತು ಲಸಿಕಾಅಭಿಯಾನವನ್ನು ಹೆಚ್ಚಿಸಿಕೊಳ್ಳುವುದರಿಂದ ಸೋಂಕಿನ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಆಗಬಹುದು. ಜರ್ಮನ್ ಕೋವಿಡ್ ಸೋಂಕನ್ನು ಶೀಘ್ರದಲ್ಲಿ ಮೆಟ್ಟಿ ನಿಲ್ಲಲಿದೆ ಎಂದು ಅವರು ಹೇಳಿದ್ದಾರೆ.

ಓದಿ : ಪ್ರಾಥಮಿಕ ಆರೋಗ್ಯ ಕೇಂದ್ರ, ಕೋವಿಡ್‌ ಸೆಂಟರ್‌ಗಳಿಗೆ ಸಚಿವ ಭೇಟಿ

ಮೊದಲ ಲಸಿಕೆ ಡೋಸ್ ನನ್ನು ಪಡೆದ ಜನಸಂಖ್ಯೆಯ ಪಾಲು  ಶೇಕಡಾ 31.5 ತಲುಪಿದೆ,  900,000 ಜನರು ಡೋಸೇಜ್ ಪಡೆದಿದ್ದಾರೆ, “ವೇಗ ಗತಿಯಲ್ಲಿ” ಜರ್ಮನಿ ಚೇತರಿಸಿಕೊಳ್ಳುವ ಭರವಸೆ ಇದೆ ಎಂದು ಅವರು ಹೇಳಿದ್ದಾರೆ.

ಜರ್ಮನಿಯ ವ್ಯಾಕ್ಸಿನೇಷನ್ ಡ್ರೈವ್ ಅನ್ನು ವೇಗಗೊಳಿಸುವ ಪ್ರಯತ್ನದಲ್ಲಿ, ಸ್ಪಾನ್ ಗುರುವಾರ ಅಸ್ಟ್ರಾಜೆನೆಕಾದಿಂದ ಎಲ್ಲಾ ವಯಸ್ಕರಿಗೆ ಲಸಿಕೆ ನೀಡಲು ಅನುಮೋದಿಸಿದ್ದಾರೆ.

Advertisement

ಇನ್ನು,  ರಕ್ತ ಹೆಪ್ಪುಗಟ್ಟುವಿಕೆಯ ಅಪರೂಪದ ಪ್ರಕರಣಗಳ ವರದಿಗಳ ನಂತರ ಅದಕ್ಕೆ ಬೇಕಾದ  ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಸಾಂಕ್ರಾಮಿಕ ಕಾಯಿಲೆಗಳ ರಾಬರ್ಟ್ ಕೋಚ್ ಇನ್ಸ್ಟಿಟ್ಯೂಟ್ ಮುಖ್ಯಸ್ಥ ಲೋಥರ್ ವೈಲರ್, ಕೋವಿಡ್ 19 ಸೋಂಕಿನ ಸಂಭವವು ಎಲ್ಲಾ ವಯೋಮಾನದವರಲ್ಲಿ ಕಡಿಮೆಯಾಗುತ್ತಿದೆ. ಶೀಘ್ರದಲ್ಲೇ ಜರ್ಮನಿಯಲ್ಲಿ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಭರವಸೆ ಇದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಓದಿ : ಸಿಟಿ ಸ್ಕ್ಯಾನಿಂಗ್ ದುಬಾರಿ ದರಕ್ಕೆ ಕಡಿವಾಣ; ಹೆಚ್ಚು ವಸೂಲಿ ಮಾಡಿದರೆ ಕ್ರಮ: ಸಚಿವ ಸುಧಾಕರ್

Advertisement

Udayavani is now on Telegram. Click here to join our channel and stay updated with the latest news.

Next