Advertisement

ಭಾರತವನ್ನು ಮತ್ತೆ ಕಾಡಲಿದೆ ಕೋವಿಡ್ ಮೂರನೇ ಅಲೆ : ಆರೋಗ್ಯ ಸಚಿವಾಲಯ ಹೇಳಿದ್ದೇನು..?

06:46 PM May 05, 2021 | Team Udayavani |

ನವದೆಹಲಿ: ಕೋವಿಡ್ ಸೋಂಕಿನಿಂದ ಇಡೀ ದೇಶ ತತ್ತರಿಸಿ ಹೋಗಿದೆ.  ಸೋಂಕಿನ ಎರಡನೇ ಅಲೆಯ ದವಡೆಗೆ ಸಿಲುಕಿ ದೇಶ ನಲುಗುತ್ತಿದೆ. ಈ ನಡುವೆ ಕೇಂದ್ರ ಸರ್ಕಾರ ಮೂರನೇ ಅಲೆಯ ಬಗ್ಗೆ ಎಚ್ಚರಿಕೆಯನ್ನು ನೀಡಿರುವುದು ಮತ್ತಷ್ಟು ಆತಂಕಕಾರಿಯಾಗಿದೆ.

Advertisement

ಮಾರಕ ವೈರಸ್  ಈಗಾಗಲೇ ತನ್ನ ಭಿಕರ ಸ್ವರೂಪವನ್ನು ತೋರಿಸಿದ್ದು, ಮೂರನೇ ಅಲೆಯನ್ನು ಕೂಡ ದೇಶ ಎದುರಿಸಬೇಕಾದದ್ದು ಅನಿವಾರ್ಯವೆಂದು ಸರ್ಕಾರ ಹೇಳಿದೆ.

ಓದಿ : ಅಧಿಕಾರಿಗಳನ್ನು ಅಮಾನತು ಮಾಡಿ, ಸಚಿವರು ರಾಜೀನಾಮೆ ನೀಡಲಿ : ಅಭಯಚಂದ್ರ

ಕೋವಿಡ್ ಸೋಂಕಿನ ಮೂರನೇ ಅಲೆ ಎಲ್ಲಿ ಯಾವಾಗ ಬರುತ್ತದೆ ಎನ್ನುವುದರ ಬಗ್ಗೆ ಗೊತ್ತಿಲ್ಲ. ಎರಡನೇ ಅಲೆಯಲ್ಲಿ ದೇಶ ಸಂಕಷ್ಟದಲ್ಲಿದೆ. ಎರಡನೇ ಅಲೆಯ ಕಾರಣದಿಂದಾಗಿ ದೇಶದ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಮೂರನೇ ಅಲೆಯ ಬಗ್ಗೆ ನಾವು ಜಾಗೃತವಹಿಸಬೇಕಾಗಿದೆ. ಮೂರನೇ ಅಲೆಯನ್ನು ಎದುರಿಸುವುದಕ್ಕೆ ಸರ್ವ ರೀತಿಯಲ್ಲೂ ನಾವು ಸನ್ನದ್ಧರಾಗಬೇಕಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕೋವಿಡ್ ಸೋಂಕಿನ ಹೊಸ ಅಲೆಗಳ ಕುರಿತು ಮಾತನಾಡಿದ ಕೇಂದ್ರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ ವಿಜಯರಾಘವನ್, ವೈರಸ್‌ ನ ಹೊಸ ರೂಪಾಂತರಗಳು ಹೆಚ್ಚು ಹರಡುತ್ತವೆ. ಆರೋಗ್ಯ ಸಚಿವಾಲಯವು ಪ್ರಸ್ತುತ ಕೋವಿಡ್ -19 ಪರಿಸ್ಥಿತಿ ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಲಸಿಕೆ ಅಭಿಯನದ  ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದೆ ಎಂದಿದ್ದಾರೆ.

Advertisement

ಇನ್ನು, ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್, ಪ್ರಕರಣಗಳ ಕುಸಿತದ ಆರಂಭಿಕ ಹಂತ ಕಂಡುಬಂದಿದೆ, ಪ್ರಸ್ತುತ,  ಮಹಾರಾಷ್ಟ್ರ, ಕೇರಳ, ಕರ್ನಾಟಕ, ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶಗಳಲ್ಲಿ ಸುಮಾರು 1.5 ಲಕ್ಷ ಸಕ್ರಿಯ ಪ್ರಕರಣಗಳಿವೆ. ದೇಶದ 12 ರಾಜ್ಯಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ, ಏಳು ರಾಜ್ಯಗಳಲ್ಲಿ 50,000 ರಿಂದ 1 ಲಕ್ಷ ಸಕ್ರಿಯ ಪ್ರಕರಣಗಳಿವೆ ಮತ್ತು 17 ರಾಜ್ಯಗಳಲ್ಲಿ 50,000 ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳಿವೆ. ಪ್ರಕರಣಗಳಲ್ಲಿ ದೈನಂದಿನ ಬೆಳವಣಿಗೆ 2.4 ರಷ್ಟಿದೆ. ಎಂದು ಮಾಹಿತಿ ನೀಡಿದ್ದಾರೆ.

ಓದಿ : ಚಾ.ನಗರ ದುರಂತ ನ್ಯಾಯಾಂಗ ತನಿಖೆಗೆ ಸರ್ಕಾರ ಆದೇಶ: ನಿವೃತ್ತ ನ್ಯಾ. ಬಿ.ಎ ಪಾಟೀಲ್ ನೇಮಕ

Advertisement

Udayavani is now on Telegram. Click here to join our channel and stay updated with the latest news.

Next