ಹೊಸದಿಲ್ಲಿ : ಇಲ್ಲಿನ ಫಿರೋಜ್ ಶಾ ಕೋಟ್ಲಾ ಕ್ರಿಕೆಟ್ ಅಂಗಣದಲ್ಲಿ ನಡೆಯುತ್ತಿರುವ 3ನೇ ತಥಾ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯದ ಇಂದು ಸೋಮವಾರದ ಮೂರನೇ ದಿನದಾಟ ಮುಗಿದಾಗ ಪ್ರವಾಸಿ ಶ್ರೀಲಂಕಾ 130 ಓವರಗಳ ಆಟವಾಡಿ ತನ್ನ ಮೊದಲ ಇನ್ನಿಂಗ್ಸ್ ಮೊತ್ತವನ್ನು 9 ವಿಕೆಟ್ ನಷ್ಟಕ್ಕೆ 356 ರನ್‌ಗಳ ಗೌರವಾರ್ಹ ಎತ್ತರಕ್ಕೆ ತಂದು ನಿಲ್ಲಿಸಿತು.
ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 127.5 ಓವರ್‌ಗಳ ಆಟವಾಗಿ 536 ರನ್ ಗಳ ಬೃಹತ್ ಮೊತ್ತವನ್ನು ಪೇರಿಸಿ 7 ವಿಕೆಟ್ ನಷ್ಟಕ್ಕೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ನಾಯಕ ವಿರಾಟ್ ಕೊಹ್ಲಿ ಅತ್ಯಮೋಘ ಆರನೇ ದ್ವಿಶತಕದ ಸಾಧನೆಯನ್ನು ಮಾಡಿ ಮಿಂಚಿದ್ದರು.
ಲಂಕೆಯ ಎರಡನೇ ಇನ್ನಿಂಗ್ಸ್‌ನಲ್ಲಿ ನಾಯಕ ದಿನೇಶ್ ಚಾಂಡಿಮಾಲ್ ಔಟಾಗದೆ 147 ರನ್ ತೆಗೆದಿದ್ದು ಅವರೊಂದಿಗೆ ಲಕ್ಷಣ್ ಸಂದಕನ್ ಅವರು ಕ್ರೀಸಿನಲ್ಲಿ ಉಳಿದಿದ್ದಾರೆ.
ಲಂಕೆಯ ಏಂಜಲೋ ಮ್ಯಾಥ್ಯೂಸ್ 111 ರನ್ ತೆಗೆದು ತಂಡವನ್ನು ಬಹುವಾಗಿ ಆಧರಿಸಿದರು.
ಭಾರತೀಯ ಎಸೆಗಾರರ ಪೈಕಿ ಅಶ್ವಿನ್‌ಗೆ 3 ವಿಕೆಟ್ ಸಿಕ್ಕಿದರೆ ಮೊಹಮ್ಮದ ಶಮಿ, ಇಷಾಂತ್ ಶರ್ಮಾ, ರವೀಂದ್ರ ಜಡೇಜ ತಲಾ 2 ವಿಕೆಟ್ ಪಡೆದರು.