Advertisement

3ನೇ ಟೆಸ್ಟ್‌ : ಪಂದ್ಯ, ಸರಣಿ ಗೆಲ್ಲುವತ್ತ ಭಾರತ, ಲಂಕಾ 31/3

05:06 PM Dec 05, 2017 | Team Udayavani |

ಹೊಸದಿಲ್ಲಿ : ಇಲ್ಲಿನ ಫಿರೋಜ್‌ ಶಾ ಕೋಟ್ಲಾ ಕ್ರಿಕೆಟ್‌ ಅಂಗಣದಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಕೊನೇ ಟೆಸ್ಟ್‌ ಪಂದ್ಯದ ಇಂದು ಮಂಗಳವಾರದ ನಾಲ್ಕನೇ ದಿನದಾಟ ಮುಗಿದಾಗ ಲಂಕಾ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 31ರನ್‌ ಗಳಿಸುವಷ್ಟರಲ್ಲಿ ತನ್ನ 3 ಬಹುಮೂಲ್ಯ ವಿಕೆಟ್‌ಗಳನ್ನು ಕಳೆದುಕೊಂಡು ಪಂದ್ಯ ಹಾಗೂ ಸರಣಿ ಸೋಲಿನತ್ತ ಮುಖಮಾಡಿತು.

Advertisement

3 ಟೆಸ್ಟ್‌ ಪಂದ್ಯಗಳ ಈ ಸರಣಿಯಲ್ಲಿ ಈಗಾಗಲೇ 1-0 ಮುನ್ನಡೆಯನ್ನು ಹೊಂದಿರುವ ಭಾರತ ಈ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 536 ರನ್‌ಗಳ ಬೃಹತ್‌ ಮೊತ್ತ ಕಲೆ ಹಾಕಿ (127.5 ಓವರ್‌ ಆಟದಲ್ಲಿ) 7 ವಿಕೆಟ್‌ ನಷ್ಟದಲ್ಲಿ ತನ್ನ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ 52.2 ಓವರ್‌ ಆಟವಾಡಿ ಐದು ವಿಕೆಟ್‌ ನಷ್ಟಕ್ಕೆ 246 ರನ್‌ ಬಾರಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿತ್ತು.

ಪರಿಣಾಮವಾಗಿ ಲಂಕೆಗೆ ಈ ಪಂದ್ಯ ಗೆಲ್ಲಲು 379 ರನ್‌ಗಳ ಕಷ್ಟ ಸಾಧ್ಯ ಮೊತ್ತದ ಗುರಿಯನ್ನು ಭಾರತ ನಿಗದಿಸಿತ್ತು.

ಲಂಕೆ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ  ದಿಮುತ ಕರುಣರತ್ನೆ  13 ರನ್‌, ಸದೀರ ಸಮರವಿಕ್ರಮ 5 ರನ್‌, ಸುರಂಗ ಲಕ್ಮಲ್‌ ಶೂನ್ಯ ರನ್‌ಗೆ ಔಟಾದರು. ರವೀಂದ್ರ ಜಡೇಜ 2 ವಿಕೆಟ್‌ ಪಡೆದರೆ ಮೊಹಮ್ಮದ್‌ ಶಮಿ ಒಂದು ವಿಕೆಟ್‌ ಪಡೆದರು. 

ದಿನಾಂತ್ಯಕ್ಕೆ ಏಂಜಲೋ ಮ್ಯಾಥ್ಯೂಸ್‌ (0), ಮತ್ತು ಧನಂಜಯ ಡಿ’ಸಿಲ್ವ (13) ಕ್ರೀಸಿನಲ್ಲಿ ಉಳಿದಿದ್ದರು. 

Advertisement

ನಾಳೆ ಪಂದ್ಯದ ಐದನೇ ಹಾಗೂ ಅಂತಿಮ ದಿನವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next