Advertisement
ಸಂಸ್ಥೆಯ ವಿನ್ನರ್ ಪ್ರಶಸ್ತಿಯು ಅಂಧೇರಿಯ ಅಂಧೇರಿ ಚಾ ರಾಜ ಮಂಡಳಕ್ಕೆ ಹಾಗೂ ದ್ವಿತೀಯ ಪ್ರಶಸ್ತಿಯು ಗಣೇಶ ಗಲ್ಲಿ ಗಣೇಶೋತ್ಸವ ಮಂಡಳದ ಗಣೇಶೋತ್ಸವಕ್ಕೆ ಲಭಿಸಿದೆ. ಪ್ರಶಸ್ತಿಯ ಸ್ಪರ್ಧೆಯಲ್ಲಿ ಸುಮಾರು 250 ಗಣೇಶೋತ್ಸವ ಮಂಡಳಗಳು ಪಾಲ್ಗೊಂಡಿದ್ದವು. ಚೆಂಬೂರು ತಿಲಕ್ ನಗರದ ಸಹ್ಯಾದ್ರಿ ಮಂಡಳದ ಪ್ರಶಸ್ತಿಯನ್ನು ಮಂಡಳದ ಉಪಾಧ್ಯಕ್ಷ, ತುಳು-ಕನ್ನಡಿಗ ಛತ್ರಪತಿ ಶಿವಾಜಿ ಪ್ರಶಸ್ತಿ ಪುರಸ್ಕೃತ ಜಯ ಎ. ಶೆಟ್ಟಿ ಅವರಿಗೆ ನಗರದ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಕೃಷ್ಣ ಪ್ರಕಾಶ್ ಅವರು ಪ್ರದಾನಿಸಿದರು.
ರಿಸಿದ ದೇಶದ ವಿವಿಧ ವಾಸ್ತುಶಿಲ್ಪ, ಸಂಸ್ಕೃತಿಯನ್ನು ಇಲ್ಲಿ ಪಡಿಮೂಡಿಸಲಾಗಿತ್ತು.
ಮಂಡಲದ ಅಧ್ಯಕ್ಷ ರಾಹುಲ್ ಗಜಾನನ ವಾಳಂಜ ಅವರು ಪ್ರತೀ ವರ್ಷದಂತೆ ಈ ವರ್ಷವೂ ತನ್ನ ಕಲ್ಪನೆಯಿಂದ ದೃಶ್ಯದ ಸಂಯೋಜನೆ ಮಾಡಿದ್ದು, ಕಲಾ ಸಂಯೋಜಕ ಪ್ರಸನಜೀತ್ ಚಂದಾ ಅವರ ನೇತೃತ್ವದಲ್ಲಿ ಕಲಾಕೃತಿಯನ್ನು ನಿರ್ಮಿಸಲಾಗಿದ್ದು, ನಿಕಿಲ್ ಮೋರೆ, ಸಂತೋಷ್ ಶಿಲಾರ, ಚಿತ್ರಕಾರ ದಿಲೀಪ್ ಮೈತಿ ಅವರು ಸಹಕರಿದ್ದಾರೆ. ಮಂಡಳವು ಕಳೆದ ಹಲವು ವರ್ಷಗಳಿಂದ ವಿಭಿನ್ನ ಪೆಂಡಾಲ್‌ಗಳನ್ನು ನಿರ್ಮಿಸಿ ಹಲವಾರು ಪ್ರಶಸ್ತಿಗಳಿಗೆ ಭಾಜನವಾಗುತ್ತಿದೆ. ಪ್ರಸ್ತುತ ವರ್ಷದ ಗಣೇಶೋತ್ಸವಕ್ಕೆ ರಾಜ್ಯ, ರಾಷ್ಟ್ರೀಯ ಮಟ್ಟದ ಕ್ರಿಕೆಟ್ ದಿಗ್ಗಜರುಗಳಾದ ಅಭಿಷೇಕ್ ನಾಯರ್, ಧವಾಲ್ ಕುಲಕರ್ಣಿ, ಅದಿತ್ಯ ತಾರೆ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಿದ್ದರು. ಅವರನ್ನು ಉಪಾಧ್ಯಕ್ಷ ಜಯ ಎ. ಶೆಟ್ಟಿ, ಮಂಗೇಶ್ ಅಧಾತ್‌ರಾವ್ ಮೊದಲಾದವರು ಗೌರವಿಸಿದರು.