ಕ್ಯಾನ್ಬೆರಾ: ಆಸ್ಟ್ರೇಲಿಯಾದಲ್ಲಿ ಹಿಂದೂ ದೇಗುಲಗಳನ್ನು ಗುರಿಯಾಗಿಸಿ, ಖಲಿಸ್ತಾನ್ ಪರ ಕಿಡಿಗೇಡಿಗಳು ನಡೆಸುತ್ತಿರುವ ಕೃತ್ಯವನ್ನು ಭಾರತ ಖಂಡಿಸಿದೆ.
ಭಾರತ ಮತ್ತು ಆಸ್ಟ್ರೇಲಿಯನ್ ಸಮುದಾಯದ ನಡುವೆ ದ್ವೇಷಬಿತ್ತುವ ಕೃತ್ಯ ಇದಾಗಿದ್ದು, ಈ ಆತಂಕಕಾರಿ ಬೆಳವಣಿಗೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಸ್ಟ್ರೇಲಿಯಾ ಸರ್ಕಾರವನ್ನು ಆಗ್ರಹಿಸಿದೆ.
ಇತ್ತೀಚೆಗಿನ ಕೆಲ ವಾರಗಳಲ್ಲಿ ಆಸ್ಟ್ರೇಲಿಯಾದ ಹಲವು ಭಾಗಗಳಲ್ಲಿ ದೇಗುಲ ಧ್ವಂಸ ನಡೆದಿದ್ದು, ಸೋಮವಾರ ಕೂಡ ಹರೇ ಕೃಷ್ಣ ದೇಗುಲವನ್ನು ನಾಶ ಪಡಿಸಿ, ದೇಗುಲದ ಗೋಡೆಗಳ ಮೇಲೆ ಭಾರತ ವಿರೋಧಿ ಘೋಷಣೆಗಳನ್ನು ಬರೆಯಲಾಗಿತ್ತು. ಈ ಹಿನ್ನೆಲೆ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಹೈ ಕಮಿಷನ್ ಪ್ರತಿಕ್ರಿಯಿಸಿದೆ.ಇದು 3ನೇ ಹಿಂದೂ ದೇಗುಲದ ಧ್ವಂಸ ಕೃತ್ಯವಾಗಿದ್ದು,ಭಾರತೀಯರ ಶಾಂತಿ, ಸಮನ್ವಯದ ಮನಸ್ಥಿತಿಗೆ ಧಕ್ಕೆ ತರುತ್ತಿದೆ ಎಂದು ಆಕ್ಷೇಪಿಸಿದೆ.
ಇದನ್ನೂ ಓದಿ: ಅಂಜನಾದ್ರಿ ಅಭಿವೃದ್ಧಿ ಕಾರ್ಯಕ್ಕೆ ಅಮಿತ್ ಶಾರಿಂದ ಚಾಲನೆ : ಸಚಿವ ಆನಂದ ಸಿಂಗ್