Advertisement

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

04:23 PM Apr 25, 2024 | Team Udayavani |

ಕಾಪು : ಕುತ್ಯಾರು – ಪಾದೂರು – ಕಳತ್ತೂರು ಗ್ರಾಮಾಧಿಪತಿ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಮಾರ್ಗದರ್ಶನದೊಂದಿಗೆ ಎ. 25ರಿಂದ ಮೊದಲ್ಗೊಂಡು ಮೇ 9ರವರೆಗೆ ಮಹಾಗಣಪತಿ ದೇವರ ನೂತನ ಶಿಲಾಮಯ ಗರ್ಭಗೃಹ ಸಮರ್ಪಣೆ – ಬಿಂಬ ಪುನಃಪ್ರತಿಷ್ಠೆ, 500 ಕಲಶ ಸಹಿತ ಬ್ರಹ್ಮಕಲಶಾಭಿಷೇಕ – ಸಹಸ್ತ್ರ ನಾಲಿಕೇರ ಮಹಾಗಣಪತಿ ಯಾಗ, ಸಹಸ್ತ್ರಕಲಶ ಸಹಿತ ಬ್ರಹ್ಮಕಲಶಾಭಿಷೇಕ – ಏಕಪವಿತ್ರ ಶ್ರೀ ನಾಗಬ್ರಹ್ಮಮಂಡಲೋತ್ಸವ, ಮನ್ಮಹಾರಥೋತ್ಸವ – ಮಹಾಅನ್ನಸಂತರ್ಪಣೆಯು ನಡೆಯಲಿದೆ.

Advertisement

ಎ. 25ರಂದು ಋತ್ವಿಜರ ಸ್ವಾಗತ ಸಹಿತವಾಗಿ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭಗೊಳ್ಳಲಿದ್ದು ಮೇ 9 ರವರೆಗೆ ಪ್ರತೀ ದಿನ ವಿವಿಧ ಧಾರ್ಮಿಕ ಕಾರ್ಯಕ್ರಮ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿವೆ.

ಎ. 27ರಂದು ಕುತ್ಯಾರು, ಪಾದೂರು, ಕಳತ್ತೂರು ಗ್ರಾಮಸ್ಥರಿಂದ ಕಳತ್ತೂರು ಕೊಟ್ಟಾರಿಕಟ್ಟೆ ಅಶ್ವಥಕಟ್ಟೆಯಿಂದ ಹಸಿರು ಹೊರೆಕಾಣಿಕೆ ಶೋಭಾಯಾತ್ರೆ, ಎ.28ರಂದು ಬೆಳಿಗ್ಗೆ 10.30ಕ್ಕೆ ಮಹಾಗಣಪತಿ ದೇವರ ನೂತನ ಶಿಲಾಮಯ ಗರ್ಭಗೃಹದಲ್ಲಿ ಗಣಪತಿ ದೇವರ ಬಿಂಬ ಪುನಃಪ್ರತಿಷ್ಠೆ, ಎ.29ರಂದು ಬೆಳಿಗ್ಗೆ ಮಹಾಲಿಂಗೇಶ್ವರ ದೇವರ ಬಿಂಬಶುದ್ಧಿ ಪ್ರಕ್ರಿಯೆ, ಸಹಸ್ರ ನಾಲಿಕೇರ ಮಹಾಗಣಪತಿ ಯಾಗ ನಡೆಯಲಿದೆ.

ಮೇ 1 – 2 : ಬ್ರಹ್ಮಕಲಶಾಭಿಷೇಕ, ನಾಗಮಂಡಲೋತ್ಸವ : ಮೇ 1ರಂದು ಬೆಳಿಗ್ಗೆ ಮಹಾಗಣಪತಿ ದೇವರಿಗೆ 501 ದ್ರವ್ಯಮಿಳಿತ ಬ್ರಹ್ಮಕಲಶ ಪ್ರತಿಷ್ಠೆ, 10-18ಕ್ಕೆ ಬ್ರಹ್ಮಕಲಶಾಭಿಷೇಕ, ಅನ್ನಸಂತರ್ಪಣೆ ಸೇವೆ, ಮೇ 2ರಂದು ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವರಿಗೆ 1001 ದ್ರವ್ಯಸಹಿತ ಬ್ರಹ್ಮಕಲಶ ಪ್ರತಿಷ್ಠೆ, ಬೆಳಿಗ್ಗೆ 10-14ಕ್ಕೆ ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಅವಸ್ರುತ ಬಲಿ, ಪಲ್ಲಪೂಜೆ, ಮಹಾಅನ್ನಸಂತರ್ಪಣೆ, ಸಂಜೆ ದೇವರಿಗೆ ರಾತ್ರಿ ಪೂಜೆ, ಮಹಾರಂಗಪೂಜೆ, ವೈಭವದ ಉತ್ಸವ ಬಲಿ ಹಾಗೂ ರಾತ್ರಿ 8-30ರಿಂದ ನಾಗದೇವರ ಸನ್ನಿಧಿಯಲ್ಲಿ ಹಾಲಿಟ್ಟು ಸೇವೆ, ಪ್ರಸನ್ನ ಪೂಜೆ, ನಾಗಸಂದರ್ಶನ, ಅನ್ನಸಂತರ್ಪಣೆ ಸೇವೆ, ರಾತ್ರಿ 9-00ರಿಂದ ಬ್ರಹ್ಮಶ್ರೀ ಸಗ್ರಿ ಗೋಪಾಲಕೃಷ್ಣ ಸಾಮಗ ಹಾಗೂ ಮುದ್ದೂರು ವೈದ್ಯ ಬಳಗದವರ ಸಹಕಾರದಲ್ಲಿ ಏಕಪವಿತ್ರ ನಾಗಮಂಡಲೋತ್ಸವ ನಡೆಯಲಿದೆ.

ಧಾರ್ಮಿಕ ಸಭೆ : ಮೇ 2ರಂದು ಸಂಜೆ 4.30ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದು ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ, ಮಾಜಿ ಆಡಳಿತ ಮೊಕ್ತೇಸರ ಕುತ್ಯಾರು ಕೃಷ್ಣಮೂರ್ತಿ ಭಟ್‌ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Advertisement

ಮೇ 1-9ರವರೆಗೆ ವಾರ್ಷಿಕ ಮಹೋತ್ಸವ : ಮೇ 1ರಿಂದ ಬೈಗಿನ ಬಲಿ ಆರಂಭಗೊಳ್ಳಲಿದ್ದು ಮೇ 6ರಂದು ಬೆಳಿಗ್ಗೆ 11 ಗಂಟೆಗೆ ಧ್ವಜಾರೋಹಣ, ಶತ ರುದ್ರಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಹೂವಿನ ಪೂಜೆ, ನೃತ್ಯ ಬಲಿ, ಆಯನ ಬಲಿ ನಡೆಯಲಿದೆ. ಮೇ 8ರಂದು ಬೆಳಿಗ್ಗೆ ಶತರುದ್ರಾಭಿಷೇಕ, ಮಹಾಪೂಜೆ, ಪಲ್ಲಪೂಜೆ, ರಥಾರೋಹಣ, ಮಹಾಅನ್ನಸಂತರ್ಪಣೆ, ರಾತ್ರಿ 7-30ಕ್ಕೆ ಶ್ರೀ ಮನ್ಮಹಾರಥೋತ್ಸವ, ಕಳತ್ತೂರು ಬೆಡಿ, ನೃತ್ಯ ಬಲಿ, ರಂಗಪೂಜೆ, ಭೂತಬಲಿ, ಕವಾಟ ಬಂಧನ ನಡೆಯಲಿದೆ. ಮೇ 9ರಂದು ಕವಾಟೋದ್ಘಾಟನೆ, ತುಲಾಭಾರ, ಅವಭೃತ ಸ್ನಾನ, ನೃತ್ಯಬಲಿ, ಧ್ವಜಾವರೋಹಣ ನಡೆದು, ಸಂಜೆ 5 ಗಂಟೆಗೆ ಕಲ್ಕುಡ ದೈವದ ಸನ್ನಿಧಿಯಲ್ಲಿ ಪ್ರಸನ್ನ ಪೂಜೆ, ಭಂಡಾರ ಇಳಿಯುವುದು, 7-30ಕ್ಕೆ ಅನ್ನಸಂತರ್ಪಣೆ. ರಾತ್ರಿ ಶ್ರೀ ಕಲ್ಕುಡ ದೈವದ ವೈಭವದ ಗಗ್ಗರ ಸೇವೆ, ಹಾಲಾವಳಿ, ಪ್ರಸಾದ ವಿತರಣೆ ನಡೆಯಲಿದೆ.

ಬ್ರಹ್ಮಕಲಶೋತ್ಸವದ ಪ್ರಯುಕ್ತ ಮೇ 1ರವರೆಗೆ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇಗುಲದ ವ್ಯವಸ್ಥಾಪನಾ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವೇ| ಮೂ| ಕುತ್ಯಾರು ಕೇಂಜ ಶ್ರೀಧರ ತಂತ್ರಿ, ಗೌರವಾಧ್ಯಕ್ಷ ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪೈಯ್ನಾರು ಶಿವರಾಮ ಶೆಟ್ಟಿ, ಕೋಶಾಧಿಕಾರಿ ಅರುಣಾಕರ ಶೆಟ್ಟಿ ಕಳತ್ತೂರು ಮತ್ತು ಸಮಿತಿ ಸದಸ್ಯರು ಹಾಗೂ ಕುತ್ಯಾರು – ಪಾದೂರು – ಕಳತ್ತೂರು ಗ್ರಾಮಸ್ಥರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next