Advertisement

Kashi ವಿಶ್ವನಾಥ ದೇವಸ್ಥಾನದಲ್ಲಿ ಅರ್ಚಕರ ಧಿರಿಸಿನಲ್ಲಿ ಪೊಲೀಸರು… ಅಖಿಲೇಶ್ ಯಾದವ್ ಕಿಡಿ

01:45 PM Apr 13, 2024 | Team Udayavani |

ಲಕ್ನೋ: ವಾರಣಾಸಿಯ ಕಾಶಿ ವಿಶ್ವನಾಥ ದೇಗುಲದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡ ಪೊಲೀಸರಿಗೆ ಅರ್ಚಕರು ಧರಿಸುವಂತಹ ಧೋತಿ, ಕುರ್ತಾ ಧಿರಿಸ್ಸನ್ನು ಧರಿಸಿ ನಿಯೋಜಿಸಲಾಗಿದ್ದು ಇದೀಗ ಈ ವಿಚಾರ ವಿವಾದಕ್ಕೆ ಕಾರಣವಾಗಿದೆ.

Advertisement

ಅಲ್ಲದೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ವಾರಣಾಸಿ ಪೊಲೀಸ್ ಕಮಿಷನರ್ ಮೋಹಿತ್ ಅಗರ್‌ವಾಲ್ ದೇವಸ್ಥಾನದಲ್ಲಿ ಹೆಚ್ಚುತ್ತಿರುವ ಭಕ್ತರನ್ನು ನಿಯಂತ್ರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು ಆದರೆ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪೊಲೀಸರು ಸರಿಯಾಗಿ ದೇವರ ದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂಬುದು ಭಕ್ತರ ದೂರು ಯಾಕೆಂದರೆ ದೇವಸ್ಥಾನದೊಳಗೆ ನಿಯೋಜನೆಗೊಂಡ ಪೊಲೀಸರು ಭಕ್ತರನ್ನು ಬೇಗ ಬೇಗ ದರ್ಶನ ಪಡೆಯುವಂತೆ ಹೆಚ್ಚು ಕಾಲ ದೇವಳದೊಳಗೆ ನಿಲ್ಲದಂತೆ ಕಳುಹಿಸುತ್ತಾರೆ ಹಾಗಾಗಿ ಭಕ್ತರು ಪೊಲೀಸರ ಈ ಕ್ರಮಕ್ಕೆ ಕೆಲ ಭಕ್ತರು ಕೋಪಗೊಳ್ಳುವುದು ಇದೆ ಆದರೆ ದೇವಳದ ಅರ್ಚಕರು ಹೇಳಿದ ಮಾತನ್ನು ಭಕ್ತರು ಕೇಳುತ್ತಾರೆ ಹಾಗಾಗಿ ದೇವಳದೋಳಗೆ ನಿಯೋಜನೆಗೊಂಡಿರುವ ಪೊಲೀಸರಿಗೆ ಅರ್ಚಕರು ಧರಿಸುವ ಉಡುಪನ್ನು ಹೋಲುವಂತಹ ಧಿರಿಸು ಧರಿಸುವಂತೆ ಆದೇಶ ನೀಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಅಖಿಲೇಶ್ ಯಾದವ್ ಕಿಡಿ:
ದೇವಳದಲ್ಲಿ ಅರ್ಚಕರ ಧಿರಿಸಿನಲ್ಲಿ ಕಂಡುಬರುವ ಪೊಲೀಸರ ವಿರುದ್ಧ ಸಮಾಜವಾದಿ ಪಕ್ಷದ ಮುಖ್ಯಸ್ಥ ಕಿಡಿಕಾರಿದ್ದಾರೆ ಅಲ್ಲದೆ ಈ ಆದೇಶ ನೀಡಿದವರು ಯಾರು ? ಈ ರೀತಿಯ ನಿರ್ಧಾರ ಕೈಗೊಳ್ಳುವಂತೆ ಹೇಳಿರುವ ನಿಯಮ ಪೊಲೀಸ್ ಇಲಾಖೆಯ ಯಾವ ಕೈಪಿಡಿಯಲ್ಲಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ, ಕೂಡಲೇ ಅರ್ಚಕರ ಧಿರಿಸಿನಲ್ಲಿರುವ ಪೊಲೀಸರನ್ನು ಕೆಲಸದಿಂದ ವಜಾ ಮಾಡಿ ಎಂದು ಹೇಳಿದ್ದಾರೆ. ಈ ರೀತಿಯ ನಿರ್ಧಾರ ಸರಿಯಲ್ಲ ಕೂಡಲೇ ಇದನ್ನು ಹಿಂಪಡೆಯಿರಿ ಜೊತೆಗೆ ಈ ಕಾನೂನು ತಂಡ ಅಧಿಕಾರಿಯನ್ನು ಕೆಲಸದಿಂದ ವಜಾ ಮಾಡಿ ಎಂದು ಹೇಳಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next