Advertisement

Abu Dhabi: ಅಬುಧಾಬಿಯ ಹಿಂದೂ ದೇಗುಲಕ್ಕೆ ತಿಂಗಳಲ್ಲಿ 3.5 ಲಕ್ಷ ಮಂದಿ ಭೇಟಿ

08:54 PM Apr 03, 2024 | Team Udayavani |

ಅಬುಧಾಬಿ: ನೂತನವಾಗಿ ನಿರ್ಮಾಣವಾಗಿರುವ ಅಬುಧಾಬಿಯ ಮೊದಲ ಶಿಲಾದೇಗುಲಕ್ಕೆ, ಕಳೆದ ಒಂದು ತಿಂಗಳಲ್ಲಿ 3.5 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ.

Advertisement

ಫೆ.14ರಂದು ಮೋದಿಯಿಂದ ಉದ್ಘಾಟನೆಗೊಂಡ ಬ್ಯಾಪ್ಸ್‌ ಸ್ವಾಮಿನಾರಾಯಣ ಮಂದಿರ; ಮಾ.1ರಿಂದ ಜನರ ದರ್ಶನಕ್ಕೆ ತೆರೆಯಲ್ಪಟ್ಟಿದೆ. ಅಲ್ಲಿಂದ ಇಲ್ಲಿಯವರೆಗೆ ಪ್ರತೀ ಶನಿವಾರ-ಭಾನುವಾರಗಳಲ್ಲಿ ತಲಾ 50,000 ಮಂದಿ ಭೇಟಿ ನೀಡಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ ಪ್ರತೀ ಸೋಮವಾರ ಮಂದಿರಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಹೀಗೆ ನೋಡಿದರೆ ಒಟ್ಟು 31 ದಿನಗಳ ಪೈಕಿ, 27 ದಿನಗಳಲ್ಲಿ 3.5 ಲಕ್ಷ ಮಂದಿ ಭೇಟಿ ನೀಡಿದ್ದಾರೆ.

ಇನ್ನು ದೇಗುಲದಲ್ಲಿ ಮಂಗಳವಾರದಿಂದ ಭಾನುವಾರದವರೆಗೆ ಪ್ರತೀದಿನ ರಾ.7.30ರವರೆಗೆ ಸ್ವಾಮಿ ನಾರಾಯಣ ಘಟ್ಟದಲ್ಲಿ ಗಂಗಾರತಿ ನೆರವೇರಿಸಲಾಗುತ್ತದೆ. ಭಾರತದಿಂದಲೇ ಗಂಗಾ, ಯಮುನಾ ನದಿಯಿಂದ ನೀರು ತಂದು ಆರತಿ ಮಾಡಲೆಂದೇ ಘಟ್ಟವನ್ನು ನಿರ್ಮಿಸಲಾಗಿದೆ.

ಇದನ್ನೂ ಓದಿ: ನರೇಗಾ ಯೋಜನೆಯಲ್ಲಿ ಕೊರಟಗೆರೆಗೆ ಕೊನೆ ಸ್ಥಾನ… ಪಿಡಿಓಗೆ ಎಚ್ಚರಿಕೆ ನೀಡಿದ ಜಿ.ಪಂ ಸಿಇಓ

Advertisement

Udayavani is now on Telegram. Click here to join our channel and stay updated with the latest news.

Next