Advertisement

ಏಶ್ಯನ್‌ ಯೂತ್‌ ಗೇಮ್ಸ್‌ಗೆ ಚೀನ ಆತಿಥ್ಯ

01:22 AM Apr 02, 2020 | Hari Prasad |

ಹೊಸದಿಲ್ಲಿ: ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್ 19 ವೈರಸ್ ನ ಮೂಲ ಕೇಂದ್ರವಾದ ಚೀನದ ಶಂಟೋ ನಗರದಲ್ಲಿ ಮುಂದಿನ ವರ್ಷದ ನವೆಂಬರ್‌ನಲ್ಲಿ ಮೂರನೇ ಆವೃತ್ತಿಯ ಏಶ್ಯನ್‌ ಯೂತ್‌ ಗೇಮ್ಸ್‌ ನಡೆಯಲಿದೆ ಎಂದು ಒಲಿಂಪಿಕ್‌ ಕೌನ್ಸಿಲ್‌ ಆಫ್ ಏಶ್ಯ (ಒಸಿಎ) ತಿಳಿಸಿದೆ.

Advertisement

ಚೀನದ ವುಹಾನ್‌ ಕೊರೊನಾ ವೈರಸ್‌ನ ಕೇಂದ್ರಸ್ಥಾನವಾಗಿತ್ತು. ಇಲ್ಲಿ ಆರಂಭವಾದ ಈ ಮಹಾಮಾರಿ ವಿಶ್ವವನ್ನೇ ದಂಗುಬಡಿಸಿದೆ. ವೆಸ್ಟರ್ನ್ ಯುರೋಪ್‌ ಮತ್ತು ಅಮೆರಿಕದಲ್ಲಿ ಈ ವೈರಸ್‌ ವಿಪರೀತ ಹಾನಿ ಮಾಡಿದೆ. ಈ ಕಾರಣದಿಂದಾಗಿ ಟೋಕಿಯೊ ಒಲಿಂಪಿಕ್ಸ್‌ ಕೂಟ ಮುಂದೂಡಲ್ಪಟ್ಟಿತ್ತು.

ಏಶ್ಯನ್‌ ಯೂತ್‌ ಗೇಮ್ಸ್‌ ಕೂಟವನ್ನು ನ. 20ರಿಂದ 28ರ ವರೆಗೆ ನಡೆಸಲು ಒಸಿಎ ನಿರ್ಧರಿಸಿದೆ. ಆತಿಥ್ಯ ನಗರವನ್ನು 2019ರಲ್ಲಿ ನಡೆದ ಒಸಿಎ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ ಬಹು ಕ್ರೀಡಾಸ್ಪರ್ಧೆಗಳ ದಿನಾಂಕವನ್ನು ಬುಧವಾರ ಪ್ರಕಟಿಸಲಾಗಿದೆ. ಏಶ್ಯನ್‌ ಯೂತ್‌ ಗೇಮ್ಸ್‌ನಲ್ಲಿ 18 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಶಂಟೋ ನಗರದ ಸಂಘಟನಾ ಸಮಿತಿ ಜತೆ ನಡೆಸಿದ ಚರ್ಚೆಯ ಬಳಿಕ ದಿನಾಂಕವನ್ನು ನಿರ್ಧರಿಸಲಾಯಿತು ಎಂದು ಒಸಿಎ ಪ್ರಧಾನ ನಿರ್ದೇಶಕ ಹುಸೈನ್‌ ಆಲ್‌ ಮುಸಲ್ಲಾಮ್‌ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next