Advertisement

ಆಲೋಚನೆಗಳ ಹೆಜ್ಜೆ ಸದ್ದು ಮತ್ತು ಪ್ರತೀ ಕ್ಷಣದ ಎಚ್ಚರ

12:46 AM Dec 28, 2020 | sudhir |

ಇದುವರೆಗಿನ ಕಥೆಗಳಲ್ಲಿ ಇದು ಅತ್ಯಂತ ಸುಂದರವಾದುದು ಮತ್ತು ಬೋಧಪ್ರದ ವಾದದ್ದು. ಇದೂ ಜಪಾನಿನದ್ದು.
ನಾಡಿನ ದೊರೆಗೆ ವಯಸ್ಸಾಗಿತ್ತು. ಆತ ಏಕಮಾತ್ರ ಪುತ್ರನನ್ನು ಕರೆದು ಗುರುಗಳಲ್ಲಿಗೆ ಹೋಗಿ ಸಂಪೂರ್ಣ ಎಚ್ಚರವನ್ನು ಹೊಂದಿ ಬರುವಂತೆ ಆದೇಶಿಸಿದ, “ನಿನ್ನ ಪೂರ್ಣ ಸಾಮರ್ಥ್ಯ ಹಾಕಿ ಕಲಿತುಕೋ. ಜಾಗೃತಿ ಯಾಗದೆ ಈ ಸ್ಥಾನ ಸಿಗದು. ನೀನು ಕಲಿ ಯದಿದ್ದರೆ ಪಟ್ಟ ಅನ್ಯರ ಪಾಲಾಗುತ್ತದೆ…’

Advertisement

ಮಗ ಬೆಟ್ಟದ ಮೇಲಿದ್ದ ಗುರುಗಳಲ್ಲಿಗೆ ಹೊರಟ. ಅವರಿಗೆ ಬಹಳ ವಯಸ್ಸಾಗಿತ್ತು. ಅವರು, “ಬಾ, ನಿನ್ನಪ್ಪನಿಗೂ ನಾನೇ ಅರಿ ವನ್ನು ಕಲಿಸಿದ್ದು. ಈಗಿನಿಂದಲೇ ಆಶ್ರಮದ ಕೆಲಸ ಆರಂಭಿಸು. ನೆನಪಿರಲಿ, ನೀನು ಕೆಲಸದಲ್ಲಿರುವಾಗ ನಾನು ಎಷ್ಟು ಹೊತ್ತಿಗಾ ದರೂ ಬಂದು ಹೊಡೆಯ ಬಹುದು ಎಚ್ಚರದಿಂದಿರು.’

ಆರಂಭದ ಕೆಲವು ದಿನ ದೊರೆ ಮಗ ದಿನಕ್ಕೆ ಹತ್ತಾರು ಬಾರಿ ಮರದ ಕೊರಡಿನಿಂದ ಏಟು ತಿನ್ನುತ್ತಿದ್ದ. ದಿನಗಳೆ ದಂತೆ ಅದು ಇಳಿಯುತ್ತ ಹೋಯಿತು. ಕೊನೆ ಕೊನೆಗೆ ಗುರುಗಳ ಹೆಜ್ಜೆಗಳು ಹತ್ತಿರವಾದಾ ಗಲೇ ಎಚ್ಚರಗೊಂಡು ತಪ್ಪಿಸಿಕೊಳ್ಳುತ್ತಿದ್ದ. ಒಂದು ದಿನ ಇನ್ನೊಬ್ಬ ಸಹಪಾಠಿಯ ಜತೆಗೆ ಆತ ಮಾತನಾಡುತ್ತಿದ್ದ. ಗುರುಗಳು ಹಿಂದಿ ನಿಂದ ಬಂದರು. ದೊರೆ ಮಗ ಪಟ್ಟಾಂಗದಲ್ಲಿ ಎಷ್ಟು ಮಗ್ನನಾಗಿದ್ದ ಎಂದರೆ, ಮಾತನಾಡು ತ್ತಲೇ ಗುರುಗಳು ಬೀಸಿದ ಮರದ ಕೊರಡನ್ನು ತಡೆಹಿಡಿದ.

ಮರುದಿನ ಗುರುಗಳು ಅವನನ್ನು ಕರೆದು, “ಮೊದಲ ಪಾಠ ಮುಗಿಯಿತು. ನಾಳೆಯಿಂದ ನೀನು ನಿದ್ದೆಯಲ್ಲಿರುವಾಗ ಹೊಡೆಯುತ್ತೇನೆ. ನಿದ್ದೆಯಲ್ಲೂ ಜಾಗೃತಾ ವಸ್ಥೆ ರೂಢಿಯಾಗಬೇಕು’ ಎಂದರು.

ಆ ದಿನ ರಾತ್ರಿ ಅರಸುಪುತ್ರ ಆರು ಬಾರಿ ಪೆಟ್ಟು ತಿಂದ. ಆರು ತಿಂಗಳುಗಳಲ್ಲಿ ನಿದ್ದೆಯಲ್ಲೂ ಜಾಗೃತಿ ರೂಢಿಯಾಯಿತು. ಒಂದು ದಿನ ರಾತ್ರಿ ಅವನು ಮಲಗಿದ್ದಲ್ಲಿಗೆ ಬಂದ ಗುರುಗಳು ಕೊರಡು ಎತ್ತಿದರು. ದೊರೆಮಗ ಕಣ್ಣು ಮುಚ್ಚಿಕೊಂಡೇ ಹೇಳಿದ, “ನಿಮಗೆ ವಯಸ್ಸಾಯಿತು. ಇನ್ನೆಷ್ಟು ದಿನ ಕಷ್ಟ ಕೊಡಲಿ!’

Advertisement

ಮರುದಿನ ಗುರುಗಳು ಅವನನ್ನು ಕರೆದು, “ಎರಡನೆಯ ಕಲಿಕೆಯೂ ಮುಗಿ ಯಿತು. ನಾಳೆಯಿಂದ ಮರದ ಕೊರಡಲ್ಲ, ಖಡ್ಗದಿಂದಲೇ ಹೊಡೆಯುತ್ತೇನೆ. ಎಚ್ಚರ ತಪ್ಪಿದೆಯೋ, ಕಥೆ ಮುಗಿಯಿತು ಎಂದರ್ಥ’ ಎಂದರು.

ಮರುದಿನ ಬೆಳಗ್ಗೆ ಗುರುಗಳು ಆಶ್ರಮದ ಹೂದೋಟದಲ್ಲಿ ಕುಳಿತಿದ್ದರು. ದೊರೆ ಮಗ ಮಲಗಿದ್ದಲ್ಲಿಂದಲೇ ಆಲೋಚಿಸಿದ, “ಗುರು ಗಳು ಎಷ್ಟು ಜಾಗೃತರು ಎಂಬುದನ್ನು ಪರೀಕ್ಷಿಸಿದರೇನು? ಮೆಲ್ಲಗೆ ಹಿಂದಿನಿಂದ ಹೋಗಿ ಖಡ್ಗದಿಂದ ಕತ್ತರಿಸಿ ಹಾಕಿದರೇನು…’
ಹೊರಗಿನಿಂದ ಗುರು ಗಳ ಧ್ವನಿ ಕೇಳಿಸಿತು, “ಮೂರ್ಖ, ನಿನ್ನ ಆಲೋ ಚನೆಗಳ ಹೆಜ್ಜೆ ಸದ್ದುಗಳನ್ನೂ ನಾನು ಕೇಳಿಸಿ ಕೊಳ್ಳಬಲ್ಲೆ.’ ದೊರೆಮಗ ಎದ್ದು ಹೋಗಿ ಗುರುಗಳ ಕಾಲು ಹಿಡಿದು ಕ್ಷಮೆಯಾಚಿಸಿದ.

ಆ ದಿನದಿಂದ ಖಡ್ಗ ಪರೀಕ್ಷೆ ಮೊದಲಾ ಯಿತು. ಅದು ಎಚ್ಚರ ತಪ್ಪಿದರೆ ಸಾವು ಖಚಿತ ಎಂಬ ಕಲಿಕೆಯಾದ್ದರಿಂದ ಮೈಯೆಲ್ಲ ಕಣ್ಣಾಗಿರತೊಡಗಿದ. ನಿಧಾನ ವಾಗಿ ಆತನಿಗೆ ತನ್ನ ಸುತ್ತಮುತ್ತ ನಡೆಯುವ ಪ್ರತಿ ಯೊಂದರ ಬಗ್ಗೆಯೂ ಜಾಗೃತಿ ಉಂಟಾಗ ಲಾರಂಭಿಸಿತು. ತನ್ನದೇ ಉಸಿರಾಟ, ಗಾಳಿಯ ಸುಳಿಯುವಿಕೆ, ತರಗೆಲೆ ಬೀಳುವ ಸದ್ದು… ಎಲ್ಲವೂ ತಿಳಿಯತೊಡಗಿತು. ಗುರುಗಳು ಹಲವು ಬಾರಿ ಖಡ್ಗ ಹಿಡಿದು ಪ್ರಯತ್ನಿಸಿದರೂ ಎಚ್ಚರದ ಶಿಷ್ಯನನ್ನು ಕತ್ತರಿ ಸುವುದಾಗಲಿಲ್ಲ. ದೊರೆ ಮಗ ಎಚ್ಚರ
ದಲ್ಲಿ ಇಲ್ಲದ ಒಂದು ಕ್ಷಣವೂ ಇಲ್ಲ ಎಂಬಂತಾಯಿತು.

ಮೂರು ದಿನಗಳ ಬಳಿಕ ಗುರುಗಳು ಶಿಷ್ಯನನ್ನು ಕರೆದು, “ನಿನ್ನ ಕಲಿಕೆ ಮುಗಿ ಯಿತು. ಇನ್ನು ರಾಜ್ಯ ನಿನ್ನದು’ ಎಂದರು.
ಜಾಗೃತಿ ಎಂದರೆ ನಿದ್ದೆಯಲ್ಲಿಯೂ ಎಚ್ಚರದಲ್ಲಿಯೂ ಪ್ರತೀ ಕ್ಷಣ ಎಚ್ಚರ ವಾಗಿರುವುದು.

(ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next