ಪುರಾತತ್ವ ಇಲಾಖೆಯಿಂದಲೇ ಕಾಮಗಾರಿ ನಿರ್ವಹಣೆ ಮಾಡಲಾಗುತ್ತಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಹಂತದಲ್ಲಿದೆ ಎಂದು ತಿಳಿದು ಬಂದಿದೆ.
Advertisement
ರಾಯಚೂರನ್ನು ಪ್ರತಿನಿಧಿಸುವ ಐತಿಹಾಸಿಕ ಸ್ಮಾರಕಗಳಲ್ಲಿ ಕಲ್ಲಾನೆ ಕೂಡ ಒಂದು. ಸಮೀಪದ ಮಲಯಾಬಾದ್‌ನಲ್ಲಿರುವ ಸ್ಥಳದಲ್ಲೂ ಸಾಕಷ್ಟು ಕಲ್ಲಾನೆಗಳ ಅವಶೇಷಗಳಿವೆ. ಆದರೆ, ನಗರದ ಮಧ್ಯಭಾಗದಲ್ಲಿನ ಕಲ್ಲಾನೆ ಮಾತ್ರ ಸಂರಕ್ಷಿಸಲ್ಪಟ್ಟಿದೆ.
ಸಲ್ಲಿಸಲಾಗುತ್ತಿದೆ.
Related Articles
Advertisement
ದುರಸ್ತಿಗೂ ನಿಯಮಗಳುಂಟು: ಐತಿಹಾಸಿಕ ಸ್ಥಳಗಳ ದುರಸ್ತಿಗೆ, ಮರು ನಿರ್ಮಾಣಕ್ಕೆ ತನ್ನದೇ ಆದ ನಿಯಮಗಳಿವೆ. ಆದರೆ, ಈಚೆಗೆ ಸುಮಾರು ನಾಲ್ಕೂವರೆ ಕೋಟಿ ರೂ. ವೆಚ್ಚದಲ್ಲಿ ಟಿಪ್ಪು ಸುಲ್ತಾನ್ ಉದ್ಯಾನವನ ಬಳಿಯ ಕೋಟೆ ದುರಸ್ತಿಗೆ ಜಿಲ್ಲಾಧಿಕಾರಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಿದ್ದರು. ಆದರೆ, ಇದು ಪ್ರಾಚ್ಯವಸ್ತು ಪುರಾತತ್ವ ಇಲಾಖೆ ಗಮನಕ್ಕೆ ಇರಲಿಲ್ಲ. ಗುತ್ತಿಗೆ ಪಡೆದವರು ಸಿಮೆಂಟ್ ಬಳಸಿ ಮನಬಂದಂತೆ ಕಟ್ಟಡ ನಿರ್ಮಿಸಿದ್ದಾರೆ. ತಕ್ಷಣಕ್ಕೆ ಮಧ್ಯ ಪ್ರವೇಶಿಸಿದ ಇಲಾಖೆ ಕಾಮಗಾರಿ ನಿಲ್ಲಿಸಿದೆ. ಈಗಟೆಂಡರ್ ರದ್ದುಗೊಳಿಸಿದ್ದು, ಮಾಡಿದ ಕೆಲಸವೆಲ್ಲ ವ್ಯರ್ಥವಾಗಲಿದೆ. ಅಲ್ಲದೇ, ಕೊಟ್ಯಂತರ ಮೊತ್ತದ ಕೆಲಸಕ್ಕೆ ಗುತ್ತಿಗೆದಾರರು ಕೇವಲ 100 ಮೀಟರ್ ಗೆ ಕ್ರಿಯಾಯೋಜನೆ ರೂಪಿಸುವ ಮೂಲಕ ಜಿಲ್ಲಾಡಳಿತಕ್ಕೆ ವಂಚನೆ ಮಾಡಲು ಮುಂದಾಗಿದ್ದರು ಎಂದು ದೂರುತ್ತಾರೆ ಇಲಾಖೆ ಅಧಿಕಾರಿಗಳು. ನಗರದ ಐತಿಹಾಸಿಕ ಸ್ಮಾರಕಗಳ ರಕ್ಷಣೆಗೆ ಮುಂದಾಗಿರುವ ಪುರಾತತ್ವ ಇಲಾಖೆ ಕಾರ್ಯ ಪ್ರಶಂಸನೀಯ. ಆದರೆ, ಅದೇ ಸ್ಮಾರಕಗಳು ಹಾಳಾಗುತ್ತಿದ್ದರೂ ಕ್ರಮ ಕೈಗೊಳ್ಳದ ನಗರಾಡಳಿತ, ಜಿಲ್ಲಾಡಳಿತದ ವಿರುದ್ಧ ಜನ ಬೇಸರ
ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಸ್ಮಾರಕಗಳ ರಕ್ಷಣೆಗೆ ವಿಶೇಷ ಒತ್ತು ನೀಡಬೇಕಿದೆ. ನಗರದಲ್ಲಿ ಐದು ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗಳ ನಿರ್ವಹಣೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರಲ್ಲಿ ಕಲ್ಲಾನೆ, ಕಾಟೆ ದರವಾಜ್ ಕೂಡ ಸೇರಿವೆ. ಕಲ್ಲಾನೆಯನ್ನು ಮೇಲಕ್ಕೆತ್ತಿ ಸುತ್ತಲೂ ಫೆನ್ಸಿಂಗ್ ಮಾಡಲು ನಿರ್ಧರಿಸಿದ್ದು, 15 ಲಕ್ಷ ರೂ. ಯೋಜನೆ
ರೂಪಿಸಲಾಗಿದೆ. ಕಾಟೆ ದರವಾಜ್ ದುರಸ್ತಿಗೆ 52 ಲಕ್ಷ ರೂ. ಯೋಜನೆ ರೂಪಿಸಿದ್ದು, ಇಲಾಖೆ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದಾರೆ.
ಶೇಷೇಶ್ವರ್, ಪುರಾತತ್ವ ಇಲಾಖೆ ಮೇಲ್ವಿಚಾರಕ. ಸಿದ್ಧಯ್ಯಸ್ವಾಮಿ ಕುಕನೂರು