Advertisement
ಬದುಕನ್ನು ಒಂದು ನಿರ್ದಿಷ್ಟ ಪರಿಮಿತಿಯೊಳಗೆ ತನ್ನ ಅನುಕೂಲಕ್ಕೆ ತಕ್ಕಂತೆ ವಿನ್ಯಾಸಗೊಳಿಸಿ ನಿತ್ಯದ ದಿನಚರಿಯಲ್ಲಿ ಒಂದಷ್ಟು ವ್ಯತ್ಯಾಸ ಕಂಡು ಬಂದರೂ ಕೆಲವೊಮ್ಮೆ ನಾವು ವಿಪರೀತವಾಗಿ ಗಲಿಬಿಲಿಗೊಳಗಾಗುತ್ತೇವೆ. ಅದೆಷ್ಟೋ ಸಲ ಅಷ್ಟೊಂದು ಪ್ರಾಮುಖ್ಯವಲ್ಲದ ಸಣ್ಣ ಪುಟ್ಟ ವಿಷಯಗಳಿಗೂ ಅತಿಯಾದ ಮಹತ್ವ ಕೊಟ್ಟು ಆಕಾಶವೇ ಕಳಚಿ ಮೈ ಮೇಲೆ ಬಿದ್ದಿತೇನೋ ಎಂಬಂತೆ ವರ್ತಿಸುತ್ತೇವೆ. ಸವಾಲುಗಳಿಗೆ ಮುಖಾಮುಖೀಯಾಗಿ ಅದರಿಂದ ಹೊರಬರುವ ಬದಲು ಆ ಕ್ಷಣದಲ್ಲಿ ಕೈಗೊಳ್ಳುವ ಕೆಲವು ದುಡುಕಿನ ತಪ್ಪು ನಿರ್ಧಾರಗಳಿಂದ ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿ ನಮ್ಮ ಬದುಕಿಗೆ ನಾವೇ ಕೊಳ್ಳಿ ಇಟ್ಟು ನಮ್ಮ ಅವನತಿಗೆ ನಾವೇ ಕಾರಣರಾಗುತ್ತೇವೆ. ಕೆಲವೊಂದು ಕ್ಷಣಗಳು ಮೇಲ್ನೋಟಕ್ಕೆ ತುಂಬಾ ಕಠಿನವಾಗಿ ಕಂಡರೂ ಇಂತಹ ಸನ್ನಿವೇಶಗಳನ್ನು ಸ್ವಲ್ಪ ಸರಿಯಾಗಿ ಪರಾಮರ್ಶಿಸಿ ಅವಲೋಕಿಸಿದಾಗ ಸಮಸ್ಯೆಗೆ ಪರಿಹಾರವೊಂದು ಅಲ್ಲೇ ಸುಲಭವಾಗಿ ಗೋಚರಿಸುತ್ತದೆ.
ಕೊಂಡು ಮುನ್ನುಗಿದಾಗ ದೊರಕುವ ಶ್ರೇಯಸ್ಸು ಅನನ್ಯವಾದುದು. “ಉದ್ಧರೇ ದಾತ್ಮನಾತ್ಮಾನಂ ನಾತ್ಮಾನಮ ವಸಾದ ಯೇತ್ ಆತ್ಮೆವ ಹ್ಯಾತ್ಮನೋ ಬಂಧು ರಾತ್ಮೆವ ರಿಪುರಾತ್ಮನಃ’-ತನ್ನ ಮೂಲಕ ತನ್ನನ್ನು ಸಂಸಾರ ಸಾಗರದಿಂದ ಉದ್ಧಾರ ಮಾಡಿಕೊಳ್ಳಲಿ ಮತ್ತು ತನ್ನನ್ನು ಅಧೋಗತಿಗೆ ಕೊಂಡೊಯ್ಯದಿರಲಿ. ಏಕೆಂದರೆ ಈ ಮನುಷ್ಯನು ತನಗೆ ತಾನೇ ಮಿತ್ರನೂ ಮತ್ತು ತಾನೇ ಶತ್ರುವೂ ಆಗಿದ್ದಾನೆ ಎಂದರ್ಥ. “ಬಂಧುರಾತ್ಮಾತ್ಮನಸ್ತಸ್ಯ ಯೇನಾತ್ಮೆ ವಾತ್ಮನಾ ಜಿತಃ ಅನಾತ್ಮನಸ್ತು ಶತ್ರುತ್ಮೆ ವತೇìತಾತ್ಮೆವ ಶತ್ರುವತ್’- ಯಾವ ಜೀವಾತ್ಮನ ಮೂಲಕ ಮನಸ್ಸು ಮತ್ತು ಇಂದ್ರಿಯಗಳ ಸಹಿತವಾದ ಶರೀರವು ಗೆಲ್ಲಲ್ಪಟ್ಟಿದೆಯೋ ಅ ಜೀವಾ ತ್ಮನಿಗಾದರೋ ಅವನು ತನಗೆ ತಾನೇ ಮಿತ್ರನಾಗಿ¨ªಾನೆ ಮತ್ತು ಯಾರ ಮೂಲಕ ಮನಸ್ಸು ಮತ್ತು ಇಂದ್ರಿಯಗಳ ಸಹಿತವಾದ ಶರೀರವು ಗೆಲ್ಲಲ್ಪಟ್ಟಿಲ್ಲವೋ ಅವನಿಗೆ ಅವನು ಶತ್ರುವಿನಂತೆ ಶತ್ರುತ್ವದಲ್ಲಿ ವರ್ತಿಸುತ್ತಾನೆ ಎಂಬ ಭಗವಂತನ ಉವಾಚಗಳ ಸಾರಗಳು ಅದೆಷ್ಟೊಂದು ಅದ್ಭುತ !