Advertisement
*ಯೋಗ ಅತ್ಯಂತ ಸುಲಭ ಮತ್ತು ಖುಷಿ ಕೊಡುವಂಥದ್ದು. ಹೀಗಾಗಿ ಯೋಗ ಗುರುವನ್ನು ಮೊದಲು ಹುಡುಕಬೇಕು. ಅದು ಯೂಟ್ಯೂಬ್, ಆ್ಯಪ್ ಆಗಿರಬಹುದು ಅಥವಾ ಯೋಗ ತರಗತಿಗಳಿಗೂ ಹೋಗಬಹುದು.
ಮಾಡಬಹುದಾದ ಯೋಗಾಸನಗಳ ಬಗ್ಗೆ ತಿಳಿದುಕೊಳ್ಳಿ. *ಯೋಗದಿಂದ ನಮ್ಮ ದೇಹ ಮತ್ತು ಮನಸ್ಸಿನ ನಡುವೆ ಆರೋಗ್ಯಕರ ಸಾಮಾರಸ್ಯ ಉಂಟುಮಾಡಲು ಉಸಿರಾಟ ಪ್ರಮುಖವಾಗಿರುತ್ತದೆ. ಹೀಗಾಗಿ ಉಸಿರಾಟದ ಬಗ್ಗೆ ತಿಳಿದುಕೊಳ್ಳಿ.
Related Articles
Advertisement
*ಯೋಗ ಮಾಡುವಾಗ ನಿಮ್ಮ ಪ್ರಗತಿಯ ಬಗ್ಗೆ ಮಾತ್ರ ತಿಳಿದುಕೊಳ್ಳಿ. ಇನ್ನೊಬ್ಬರಿಗೆ ನಿಮ್ಮನ್ನು ಹೋಲಿಸಿಕೊಳ್ಳಬೇಡಿ. ಯೋಗ ಎನ್ನುವಂಥದ್ದು ಆರೋಗ್ಯಕರ ಹವ್ಯಾಸ ಅದು ಕ್ರೀಡೆ ಅಥವಾ ಸ್ಪರ್ಧೆಯಲ್ಲ ಎಂಬ ಅರಿವಿರಲಿ.
*ಯೋಗ ಮಾಡುವಾಗ ಹಾಸ್ಯ ಪ್ರಜ್ಞೆ ಇರಲಿ. ಗಂಭೀರವಾಗಿ ಯೋಗ ಮಾಡುವುದರಿಂದ ಮನಸ್ಸಿನ ಮೇಲೆ ಒತ್ತಡ ಬೀರು ತ್ತದೆ. ಹೀಗಾಗಿ ರಿಲ್ಯಾಕ್ಸ್ ಆಗಿ ಯೋಗ ಆರಂಭಿಸಿ. ಆದರೆ ಮಾಡುವ ಭಂಗಿಗಳ ಮೇಲೆ ಹೆಚ್ಚು ಏಕಾಗ್ರತೆ ಇರಲಿ.
*ಯೋಗ ಮಾಡುವ ಮೊದಲು ಅಥವಾ ಅನಂತರದ ಒಂದೆ ರಡು ಗಂಟೆ ಆಹಾರ, ನೀರು ಸೇವನೆ ಒಳ್ಳೆಯದಲ್ಲ. ಅಗತ್ಯ ವಿದ್ದರಷ್ಟೇ ಸ್ವಲ್ಪ ನೀರು ಕುಡಿಯಬಹುದು. ಆದರೆ ಯೋಗ ಮಾಡುತ್ತಿರುವಾಗ ಬೇಡ. ಅಲ್ಕೋ ಹಾಲ್, ಸಕ್ಕರೆ, ಕೇನ್‌ಯುಕ್ತ ಆಹಾರವನ್ನು ಯೋಗ ಮಾಡುವ ಮುಂಚೆ ಸೇವಿಸಲೇಬಾರದು.
ಇದನ್ನೂ ಓದಿ:“ಈ” ದೇಶದ ಗಡಿಯಲ್ಲಿ 2 ಸಾವಿರ ಕಿಲೋ ಮೀಟರ್ ಉದ್ದದ ಗೋಡೆ…ಚೀನಾದ ಮಾಸ್ಟರ್ ಪ್ಲಾನ್ ಏನು?
*ಯೋಗ ಮಾಡಲು ಬೇಕಾದ ಸರಿಯಾದ ಉಡುಗೆಯನ್ನು ಆಯ್ದುಕೊಳ್ಳಿ. ದಿನದಲ್ಲಿ ಒಂದು ಗಂಟೆಯಾದರೂ ಯೋಗಕ್ಕೆ ಮೀಸಲಿಡಿ. ಮಧ್ಯೆ ಯಾವಾಗಲಾದರೂ ಸಮಯವಿಲ್ಲ ವೆಂದಾದರೆ 15 ನಿಮಿಷದ ಸುಲಭ ಯೋಗಗಳನ್ನಾದರೂ ಮಾಡಿ.
*ಭಂಗಿಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ನಿಮ್ಮ ದೇಹ ವನ್ನು ಅದಕ್ಕೆ ತಕ್ಕಂತೆ ರೂಪಿಸಲು ನಿರಂತರ ಪ್ರಯತ್ನಿಸಿ. ಯೋಗದ ಕೊನೆಗೆ 15 ನಿಮಿಷ ವಿಶ್ರಾಂತಿ ಮಾಡಲು ಮರೆ ಯದಿರಿ. ಏಳುವಾಗ ಎಡಗಡೆ ತಿರುಗಿ ನಿಧಾನವಾಗಿ ಏಳಿ. ಇದಕ್ಕೆ ಬೇಕಾದರೆ ಸಾಕಷ್ಟು ಸಮಯ ಪಡೆಯಿರಿ. ಆದರೆ ಒತ್ತಾಯ ಪೂರ್ವಕವಾಗಿ, ವೇಗವಾಗಿ ಏಳಬೇಡಿ.
*ಯೋಗ ಮಾಡಲು ಬೇಕಾದ ಸ್ಥಳವನ್ನು ಗುರುತಿಸಿ. ಜತೆಗೆ ಮ್ಯಾಟ್, ಅಗ ತ್ಯಕ್ಕೆ ಬೇಕಾ ದರೆ ಹಗ್ಗ, ಬೆಡ್ ಶೀಟ್ ಸಿದ್ಧವಾಗಿಟ್ಟುಕೊಳ್ಳಿ.