Advertisement
ದರ್ಶನ ಟಿಕೆಟ್ ಕೌಂಟರ್ ಬಳಿಯಲ್ಲಿ ಬುಧವಾರ ಮುಂಜಾನೆ 5 ಗಂಟೆಯಿಂದಲೇ ಬಹು ದೂರದವರೆಗೆ ಕ್ಯೂ ಇತ್ತು. ಕ್ಯೂನಲ್ಲಿ ಇದ್ದವರಿಗೆ ಸುಮಾರು 7 ಗಂಟೆಯ ಕಾಯುವಿಕೆ ಅನಂತರ ದರ್ಶನದ ಟಿಕೆಟ್ ಸಿಕ್ಕಿದೆ. ಹಲವಾರು ಜನರಿಗೆ ಜೂ. 11ರ ದರ್ಶನದ ಕೋಟಾ ಮುಗಿದ ಹಿನ್ನೆಲೆಯಲ್ಲಿ ಜೂ. 12ರ ಕೋಟಾದಡಿ ದರ್ಶನಕ್ಕೆ ಅವಕಾಶ ಸಿಕ್ಕಿದೆ. ಪ್ರತಿಯೊಬ್ಬ ಭಕ್ತರ ನಡುವೆ 6 ಅಡಿ ಅಂತರ, ಮಾಸ್ಕ್ ಕಡ್ಡಾಯ ಮುಂತಾದ ಕೊರೊನಾ ಮುನ್ನೆಚ್ಚರಿಕೆಗಳನ್ನು ಪಾಲಿಸಲಾಗುತ್ತಿದೆ ಎಂದು ಮಂಡಳಿ ತಿಳಿಸಿದೆ.
ಜೂ.14ರ ಸಂಜೆ ಶಬರಿಮಲೆ ದೇವಸ್ಥಾನವನ್ನು ಮಾಸಿಕ ಪೂಜೆಗಾಗಿ ತೆರೆಯಲಾಗುವುದು ಎಂದು ತಿರುವಾಂಕೂರು ದೇವಸ್ವಂ ಮಡಳಿ ಅಧ್ಯಕ್ಷ ಎನ್. ವಾಸು ತಿಳಿಸಿದ್ದಾರೆ. ನಾವು ದೇವಸ್ಥಾನದ ಅರ್ಚಕರ ಜತೆ ಚರ್ಚಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಜೂ. 19ರಂದು ದೇವಸ್ಥಾನದ ಉತ್ಸವವನ್ನೂ ಆಚರಿಸಲಾಗುತ್ತದೆ. ಸರದಿಯಲ್ಲಿ ನಿಂತು ದರ್ಶನ ಪಡೆಯಲು ಹೆಸರುಗಳನ್ನು ನೋಂದಾಯಿಸಿದವರಿಗೆ ಸನ್ನಿಧಿಗೆ ಹೋಗಲು ಅವಕಾಶ ನೀಡಲಾಗುವುದು. ಹೊರ ರಾಜ್ಯಗಳಿಂದ ಬರುವ ಭಕ್ತರು ತಮಗೆ ಕೋವಿಡ್-19 ಸೋಂಕು ಇಲ್ಲ ಎಂಬ ಅಧಿಕೃತ ವರದಿಯನ್ನು ಐಸಿಎಂಆರ್ ಮಾನ್ಯತೆ ಪಡೆದಿರುವ ಪ್ರಯೋಗಾಲಯಗಳಿಂದ ಪಡೆದಿರಬೇಕು ಎಂದಿದ್ದಾರೆ.
Related Articles
Advertisement