Advertisement

ಜಾನಪದ ಕಲೆ ಪಠ್ಯದಲ್ಲಿ ಅಳವಡಿಸಲು ತಿಮ್ಮೇಗೌಡ ಸಲಹೆ

11:29 PM Oct 05, 2019 | Sriram |

ಮಡಿಕೇರಿ: ಅತ್ಯಂತ ಶ್ರೀಮಂತ ಜಾನಪದ ಸಾಹಿತ್ಯ, ಕಲಾ ಸಂಸ್ಕೃತಿಯನ್ನು ಶಾಲಾ ಪಠ್ಯ ಕ್ರಮದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಆಗಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಜಾನಪದ ಪರಿಷತ್‌ ಅಧ್ಯಕ್ಷ ಟಿ.ತಿಮ್ಮೇಗೌಡ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

Advertisement

ಕರ್ನಾಟಕ ಜಾನಪದ ಪರಿಷತ್ತಿನ ಕೊಡಗು ಜಿಲ್ಲಾ ಘಟಕ ಹಾಗೂ ಮಡಿಕೇರಿ ನಗರ ದಸರಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿ ದಸರಾ ಜನೋತ್ಸವದ ಪ್ರಯುಕ್ತ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಕೊಡಗು ಜಾನಪದ ಉತ್ಸವ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಿಮ್ಮೇಗೌಡ ಜಾನಪದ ಸಂಸ್ಕೃತಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಜಾನಪದ ಸಾಹಿತ್ಯ ಪಠ್ಯ ಕ್ರಮದಲ್ಲಿ ಅಳವಡಿಸುವುದು ಅವಶ್ಯವೆಂದು ಅಭಿಪ್ರಾಯಪಟ್ಟರು.

ಪ್ರಧಾನ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದ ಪ‌ುತ್ತೂರಿನ ಕೃಷ್ಣ ಉಪಾಧ್ಯಾಯ, ಭಾರತದ ಧರ್ಮ, ಸಂಸ್ಕೃತಿಗಳು ಉಳಿಯಬೇಕಾದರೆ ಜಾನಪದದ ಉಳಿವು ಅಗತ್ಯವೆಂದರು. ಈ ದೇಶದ ಧರ್ಮ ಸಂಸ್ಕೃತಿಗಳ ತಿಳಿವಳಿಕೆಗಳು ಜನಸಾಮಾನ್ಯರ ಅಂತರಾಳಕ್ಕೆ ಇಳಿದಿರುವುದು ಜಾನಪದದಿಂದ. ಜಾನಪದ ಹಾಡು ಮತ್ತು ಸಾಹಿತ್ಯದಲ್ಲಿ ಮೌಲ್ಯಗಳು ತುಂಬಿಕೊಂಡಿರುವುದಾಗಿ ತಿಳಿಸಿದರು.ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್‌ ಮಾತನಾಡಿ ಯುವ ಸಮೂಹ ದೃಶ್ಯ ಮಾಧ್ಯಮಗಳಿಂದ ದೂರವಾಗಿ ಜಾನಪದ ಕಲಾ ಸಂಸ್ಕೃತಿಯತ್ತ ಆಸಕ್ತರಾಗಬೇಕೆಂದು ತಿಳಿಸಿದರು.

ಸಾಧಕರಿಗೆ ಸಮ್ಮಾನ
ಇದೇ ಸಂದರ್ಭ ಸಂಗೀತ ಕ್ಷೇತ್ರದ ಸಾಧಕ ಚೆಕ್ಕೇರ ತ್ಯಾಗರಾಜ್‌, ಕನ್ನಡ ಭಾಷಾ ಸಾಧಕ ಬಿ.ಎಸ್‌. ಲೋಕೇಶ್‌ಸಾಗರ್‌ ಹಾಗೂ ಸಾಹಿತ್ಯ ಸೇವೆಗಾಗಿ ಮನೆಮನೆ ಕವಿಗೋಷ್ಠಿ ಖ್ಯಾತಿಯ ವೈಲೇಶ್‌ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ‌ ಟಿ. ತಿಮ್ಮೇಗೌಡ, ಕೊಡಗು ಜಾನಪದ ಪರಿಷತ್ತಿನ ಅಧ್ಯಕ್ಷ ಮಡಿಕೇರಿ ತಾಲೂಕು ಜಾನಪದ ಪರಿಷತ್‌ ಅಧ್ಯಕಕ್ಷ ಅನಿಲ್‌ ಎಚ್‌.ಟಿ. ಅವರನ್ನು ಸಮ್ಮಾನಿಸಲಾಯಿತು.

ಜಾನಪದ ಪರಿಷತ್ತಿನ ಸಿರಿ ಎನ್ನುವ ಪತ್ರಿಕೆಯನ್ನು ಗಣ್ಯರು ಇದೇ ಸಂದರ್ಭ ಅನಾವರಣಗೊಳಿಸಿದರು.

Advertisement

ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ರಾಬಿನ್‌ ದೇವಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್‌, ವೀರಾಜಪೇಟೆ ತಾಲ್ಲೂಕು ಜಾನಪದ ಪರಿಷತ್‌ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್‌ ನಾಚಯ್ಯ, ಸೋಮವಾರಪೆೇಟೆ ತಾಲ್ಲೂಕು ಜಾನಪದ ಪರಿಷತ್‌ ಅಧ್ಯಕ್ಷ ಎಂ.ಎನ್‌. ಚಂದ್ರಮೋಹನ್‌, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಆರ್‌.ಬಿ. ರವಿ, ಪ್ರಮುಖರಾದ ಸುಮಿ ಸುಬ್ಬಯ್ಯ, ಸುಜಲಾ ದೇವಿ, ಎಂ.ಬಿ. ಜೋಯಪ್ಪ, ಎಸ್‌.ಡಿ. ಪ್ರಶಾಂತ್‌ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next