ಪಣಜಿ: ಸ್ವಾವಲಂಬಿ ಭಾರತ, ಸ್ವಾವಲಂಬಿ ಗೋವಾ ಪರಿಕಲ್ಪನೆಯಡಿ ಇದು ಮೊದಲ 30 ಮೀಟರ್ ಕ್ಯಾಟಮರನ್ ನೌಕೆ. ಈ ನೌಕೆ ನಿರ್ಮಿಸಿದ್ದಕ್ಕಾಗಿ ಗೋವಾನ್ ಶಿಪ್ ಇಂಡಸ್ಟ್ರೀಸ್‍ಗೆ ಅಭಿನಂದನೆಗಳು. ಮೇಕ್ ಇನ್ ಇಂಡಿಯಾದಂತೆ ಮೇಕ್ ಇನ್ ಗೋವಾ ಆಗಿರುವ ಈ ನೌಕೆ ಗೋವಾ ನಿವಾಸಿಗಳಿಗೆ ಹೆಮ್ಮೆಯ ಕ್ಷಣವಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದರು.
ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಸೋಮವಾರ “ತಿಮಾವೇಶಿ” ನೌಕೆ ಉದ್ಘಾಟಿಸಿದರು.
ಈ ನೌಕೆಯನ್ನು ಮಾಲ್ಡೀವ್ಸ್‍ಗೆ ವರ್ಗಾಯಿಸಲಾಗುತ್ತದೆ. ಈ ನೌಕೆಗೆ ಮುಖ್ಯಮಂತ್ರಿ ಸಾವಂತ್ ಹಸಿರು ನಿಶಾನೆ ತೋರಿಸಿದರು. ಈ ಸಂದರ್ಭದಲ್ಲಿ ಶಾಸಕ ಅಲೆಕ್ಸ್ ಸಿಕ್ವೇರಾ ಅವರೊಂದಿಗೆ ಸರ್ಕಾರ ಮತ್ತು ಆಡಳಿತದ ಅಧಿಕಾರಿಗಳು ಮತ್ತು ಗೋವಾ ಶಿಪ್ಪಿಂಗ್ ಉದ್ಯಮಕ್ಕೆ ಸಂಬಂಧಿಸಿದ ಅಧಿಕಾರಿಗಳು ಇದ್ದರು.
ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಅವರು ಶ್ರೀಫಲವನ್ನು ಮೇಲಕ್ಕೆತ್ತಿ ನೌಕೆಗೆ ಹಸಿರು ನಿಶಾನೆ ತೋರಿಸಿದರು. ಈ ವೇಳೆ ತ್ರಿವರ್ಣ ಬಣ್ಣದ ಬಲೂನ್‍ಗಳನ್ನು ಆಕಾಶಕ್ಕೆ ಹಾರಿ ಬಿಡಲಾಯಿತು. ನಂತರ ಮುಖ್ಯಮಂತ್ರಿಯವರು ಸಂಪೂರ್ಣ ನೌಕೆಯನ್ನು ಪರಿಶೀಲಿಸಿದರು.
ಈ ವಿಹಾರ ನೌಕೆಯನ್ನು ವಿಜಯ್ ಮೆರೈನ್ ಶಿಪ್‍ಯಾರ್ಡ್ ನಿರ್ಮಿಸಿದೆ. 30 ಮೀಟರ್ ಕ್ಯಾಟಮರನ್ ಅನ್ನು ಗಸ್ತು ಮತ್ತು ಸಂಶೋಧನೆಗಾಗಿ ಬಳಸಲಾಗುತ್ತದೆ. ನೌಕೆಯನ್ನು ಈಗ ಮಾಲ್ಡೀವ್ಸ್ ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು. ಗೋವಾದಲ್ಲಿ ಹಡಗು ಉದ್ಯಮವು ಸ್ವಾತಂತ್ರ್ಯದ ನಂತರ ರಾಜ್ಯದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ.