ಮುಂಬಯಿ : ನವಿ ಮುಂಬಯಿಯ ಜುನಿನಗರ್‌ನಲ್ಲಿ ಕಳ್ಳರು ಭಾರೀ ಕೈಚಳಕ ತೋರಿ ಬ್ಯಾಂಕ್‌ಗೆ ಕನ್ನ ಹಾಕಿದ್ದಾರೆ. 25 ಅಡಿ ಸುರಂಗ ಕೊರೆದು ಬ್ಯಾಂಕ್ ಆಫ್ ಬರೋಡಾದ ಲಾಕರ್‌ಗಳಲ್ಲಿದ್ದ ಅಂದಾಜು 40 ಲಕ್ಷ ರೂಪಾಯಿ ಮೌಲ್ಯದ ನಗ ನಗದನ್ನು ಲೂಟಿಗೈದಿದ್ದಾರೆ.
ಶನಿವಾರ ಮತ್ತು ಭಾನುವಾರ ಕಳ್ಳರು ಕೃತ್ಯ ಎಸಗಿದ್ದು, ಸೋಮವಾರ ಮಧ್ಯಾಹ್ನ ಲಾಕರ್ ರೂಮ್‌ಗೆ ಬ್ಯಾಂಕ್ ಸಿಬಂದಿ ತೆರಳಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಉನ್ನತ ಮಟ್ಟದ ತನಿಖೆ ಆರಂಭಿಸಿದ್ದಾರೆ.
ಬ್ಯಾಂಕ್ ಗೋಡೆಗೆ ಹೊಂದಿಕೊಂಡಿದ್ದ ಅಂಗಡಿಯವರು ಘಟನೆಯ ಬಳಿಕ ನಾಪತ್ತೆಯಾಗಿದ್ದು ಅಂಗಡಿಯವರೇ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ.
ಬ್ಯಾಂಕ್‌ನಲ್ಲಿದ್ದ 225 ಲಾಕರ್‌ಗಳ ಪೈಕಿ 30 ಒಡೆಯಯಲಾಗಿದ್ದು ಅಂದಾಜು 40 ಲಕ್ಷದ ಚಿನ್ನಾಭರಣ ಮತ್ತು ಸೊತ್ತುಗಳನ್ನು ಲೂಟಿಗೈಯಲಾಗಿದೆ.
ಕೃತ್ಯಕ್ಕೆ 5 ತಿಂಗಳ ಹಿಂದಿನಿಂದ ಸಂಚು ಹೂಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.