ಪಾಟ್ನಾ: ನೀರಾವರಿ ಇಲಾಖೆ ಅಧಿಕಾರಿಗಳಂತೆ ನಟಿಸಿ ಹಳೆಯ 60 ಅಡಿ ಉದ್ದದ ಕಬ್ಬಿಣದ ಸೇತುವೆಯನ್ನೇ ಕದ್ದೊಯ್ದಿರುವ ಘಟನೆ ಬಿಹಾರದ ರೋಹ್ಟಾಸ್ ಜಿಲ್ಲೆಯ ನಸ್ರಿಗಂಜ್ ನ ಅಮಿಯಾವರ್ ನಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:“ನನ್ನ ಮಗ ಜೀವನದಲ್ಲಿ ಏನೂ ಸರಿಯಾದದ್ದನ್ನು ಮಾಡಲಿಲ್ಲ ಸರ್”: ಮಗನನ್ನು ಕೊಂದ ತಂದೆಯ ಮಾತು
ನೀರಾವರಿ ಇಲಾಖೆ ಅಧಿಕಾರಿಗಳಂತೆ ನಟಿಸಿ ಬುಲ್ಡೋಜರ್ಸ್ ಮತ್ತು ಗ್ಯಾಸ್ ಕಟ್ಟರ್ ಗಳೊಂದಿಗೆ ಸೇತುವೆ ಇದ್ದ ಸ್ಥಳಕ್ಕೆ ಬಂದಿದ್ದರು. 1972ರಲ್ಲಿ ಅರಾ ಕಾಲುವೆಗೆ ಈ ಕಬ್ಬಿಣದ ಸೇತುವೆಯನ್ನು ನಿರ್ಮಿಸಲಾಗಿತ್ತು. ಇದು 60 ಅಡಿ ಉದ್ದ, 500 ಟನ್ ತೂಕದ್ದಾಗಿತ್ತು.
ಇದೀಗ ಶಿಥಿಲಗೊಂಡಿದ್ದ ಸೇತುವೆಯನ್ನು ಸರ್ಕಾರಿ ಅಧಿಕಾರಿಗಳಂತೆ ನಟಿಸಿ, ಸ್ಥಳೀಯ ನೀರಾವರಿ ಇಲಾಖೆಯ ಸಿಬ್ಬಂದಿಗಳ ನೆರವಿನೊಂದಿಗೆ ಹಾಡಹಗಲೇ ಇಡೀ ಸೇತುವೆಯನ್ನು ಕದ್ದೊಯ್ದಿರುವುದಾಗಿ ವರದಿ ತಿಳಿಸಿದೆ.
ಜನರು ಈ ಸೇತುವೆಯನ್ನು ಉಪಯೋಗಿಸದೇ ಇದ್ದು, ಹಲವಾರು ದಶಕಗಳಿಂದ ಶಿಥಿಲಗೊಂಡಿತ್ತು. ನಿರುಪಯುಕ್ತ ಕಬ್ಬಿಣದ ಸೇತುವೆಯನ್ನು ತೆರವುಗೊಳಿಸುವಂತೆ ಸ್ಥಳೀಯರು ಹಲವಾರು ಬಾರಿ ಇಲಾಖೆಗೆ ಅರ್ಜಿ ಬರೆದು ಮನವಿ ಮಾಡಿಕೊಂಡಿದ್ದರು.
ಅಧಿಕಾರಿಗಳಂತೆ ನಟಿಸಿ ಗ್ಯಾಸ್ ಕಟ್ಟರ್, ಸ್ಥಳೀಯರು ಹಾಗೂ ಇಲಾಖೆಯ ನೆರವಿನೊಂದಿಗೆ ಸೇತುವೆಯನ್ನು ಕತ್ತರಿಸಿ ವಾಹನದಲ್ಲಿ ತುಂಬಿಸಿಕೊಂಡು ಹೊರಟು ಹೋಗಿದ್ದರು. 60 ಅಡಿ ಉದ್ದದ 12 ಅಡಿ ಎತ್ತರದ, 500 ಕೆಜಿ ತೂಕದ ಕಬ್ಬಿಣದ ಸೇತುವೆಯನ್ನು ಅಧಿಕಾರಿಗಳಂತೆ ನಟಿಸಿ ಕದ್ದೊಯ್ದಿದ್ದಾರೆ ಎಂಬ ನಿಜಾಂಶ ತಿಳಿಯುವ ವೇಳೆ ಕಳ್ಳರು ನಾಪತ್ತೆಯಾಗಿದ್ದರು. ನಂತರ ನೀರಾವರಿ ಇಲಾಖೆ ಅಧಿಕಾರಿಗಳು ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ವರದಿ ತಿಳಿಸಿದೆ.