Advertisement
ಗ್ರಾಫಿಕ್ ಡಿಸೈನರ್ ಆಗಿರುವ 27 ರ ಹರೆಯದ ಸಿದ್ಧಾರ್ಥ್ ಮೆಹರೋತ್ರಾ ಎಂಬ ಬ್ಯಾಂಕ್ ಮ್ಯಾನೇಜರ್‌ವೊಬ್ಬರ ಮಗ ದೆಹಲಿಯಲ್ಲಿ ನಡೆದ ಹಲವು ಕಳವು ಪ್ರಕರಣಗಳ ಆರೋಪಿಯಾಗಿ ಪೊಲೀಸ್ ಬಲೆಗೆ ಬಿದ್ದಿದ್ದಾನೆ.
Related Articles
Advertisement
ಸಿದ್ದಾರ್ಥ್ ನ ಫೇಸ್ ಬುಕ್ ಪರಿಶೀಲಿಸಿದಾಗ ಪೊಲೀಸರು ಆಘಾತಗೊಂಡಿದ್ದು, ಐಷಾರಾಮಿ ಕಾರಾದ ಫೋರ್ಡ್ ಇಕೋಸ್ಫೋರ್ಟ್ಸ್ ಕಾರಿನ ಎದುರು ಕುಳಿತಿದ್ದು ,ಅಲ್ಲಿ ನಂಬರ್ ಪ್ಲೇಟ್ ಸ್ಪಷ್ಟವಾಗಿ ಕಾಣುತ್ತಿತ್ತು. ಲೇಹ್‌ನಲ್ಲಿ ಕ್ಲಿಕ್ಕಿಸಿಕೊಂಡ ಚಿತ್ರ ಇದಾಗಿತ್ತು. ಕಾರು ವಿಕಾಸ್ ಎಂಬ ಸಿದ್ದಾರ್ಥ್ ನ ಸ್ನೇಹಿತನದ್ದಾಗಿದ್ದು ಪ್ರವಾಸಕ್ಕೆ ಜೊತೆಯಲ್ಲಿ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕುಮಾರ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಪಿತಾಂಪುರ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಸಿದ್ಧಾರ್ಥ್ನನ್ನು ದಾಳಿ ನಡೆಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧನದ ವೇಳೆ ಶೆವರ್ಲೆಟ್ ಕ್ರೂಝ ಕಾರು, ಅಮೆರಿಕದ ನೋಟುಗಳು ಸೇರಿದಂತೆ 10 ದೇಶಗಳ ವಿದೇಶಿ ನೋಟುಗಳು,11 ಚಿನ್ನದ ಸರಗಳು, 4 ಉಂಗುರಗಳು, 2 ಜೊತೆ ಕಿವಿಯೋಲೆಗಳು,2 ಚಿನ್ನದ ಬಳೆಗಳನ್ನು ವಶಕ್ಕೆ ಪಡೆದಿದ್ದಾರೆ. ಇದೆಲ್ಲವನ್ನೂ ಕಳ್ಳತನ ಮಾಡಿರುವುದಾಗಿ ಸಿದ್ದಾರ್ಥ್ ಹೇಳಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
2015 ರಲ್ಲೂ ಸಿದ್ದಾರ್ಥ್ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ.ಆದರೂ ತನ್ನ ಚಾಳಿ ಮುಂದುವರಿಸಿದ್ದ.
ಈತನ ಕೃತ್ಯಕ್ಕೆ ಸಾಥ್ ನೀಡುತ್ತಿದ್ದ ಜಿತೇಂದರ್ ಮತ್ತು ಅನುರಾಗ್ ಸಿಂಗ್ ಎನ್ನುವವರನ್ನೂ ವಶಕ್ಕೆ ಪಡೆಯಲಾಗಿದೆ.