Advertisement

ಜೈಲಿನಲ್ಲಿದ್ದ  ಕಳವು ಆರೋಪಿ ವಿಚಾರಣೆ; ತಪ್ಪೊಪ್ಪಿಗೆ

11:10 AM Oct 06, 2018 | Team Udayavani |

ಸುಬ್ರಹ್ಮಣ್ಯ: ಮನೆ ಹಾಗೂ ಮಂದಿರಗಳಲ್ಲಿ ಕಳವು ನಡೆಸಿ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿ ಶಿಕ್ಷೆ ಅನುಭವಿಸುತ್ತಿದ್ದ ಪ್ರಖ್ಯಾತ ಚೋರ ತುಮಕೂರು ಮೂಲದ ನವೀನ್‌ (26) ಕುಲ್ಕುಂದ  ಶ್ರೀ ಬಸವನಮೂಲೆ ಬಸವೇಶ್ವರ ದೇವಸ್ಥಾನ ಮತ್ತು ಬಿಳಿನೆಲೆಯ  ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಇಚಿಲಂ ಪಾಡಿ ಚರ್ಚ್‌ನಲ್ಲಿ ಕಳವು ನಡೆಸಿದ್ದನ್ನು  ಪೊಲೀಸರಲ್ಲಿ ಒಪ್ಪಿಕೊಂಡಿದ್ದಾನೆ.

Advertisement

ಕಡಬ ಹಾಗೂ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ದೇವಸ್ಥಾನ ಹಾಗೂ ಚರ್ಚ್‌ ಕಳ್ಳತನಕ್ಕೆ ಸಂಬಂಧಿಸಿ ತನಿಖೆ ನಡೆಸು ತ್ತಿದ್ದ ಪೊಲೀಸರಿಗೆ ಮೊದಲೇ ಈತನ ಮೇಲೆ ಅನುಮಾನವಿತ್ತು. ಅದೀಗ ನಿಜವಾಯಿತು. ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿದ ಪೊಲೀಸರಿಗೆ ಈ ಎಲ್ಲ ಕಳ್ಳತನದಲ್ಲೂ ಈತ ಭಾಗಿಯಾಗಿರುವುದು  ದೃಢಪಟ್ಟಿದೆ.

ಪೊಲೀಸರು  ನವೀನ್‌ನನ್ನು ಶುಕ್ರವಾರ  ರಾತ್ರಿ  ಬಸವನಮೂಲೆ ಬಸವೇಶ್ವರ ದೇವಸ್ಥಾನ, ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಹಾಗೂ ಕಡಬದ ಇಚಿಲಂಪಾಡಿ ಚರ್ಚ್‌ಗೆ ಕರೆ ತಂದು ತನಿಖೆ ನಡೆಸಿದ್ದಾರೆ.  ಕದ್ದ ವಸ್ತುಗಳನ್ನು  ಮಾರಾಟ ಮಾಡಿ ಮೋಜು ಮಸ್ತಿ ಮಾಡುತ್ತಿದ್ದ ಬಗ್ಗೆ ಆತ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.
ಶೋಕಿ ಜೀವನಕ್ಕಾಗಿ ಕಳ್ಳತನವನ್ನು ಹವ್ಯಾಸವಾಗಿಸಿಕೊಂಡ ಈತ ಇದು ವರೆಗೆ ರಾಜ್ಯ ಹಾಗೂ ಹೊರರಾಜ್ಯಗಳ 54ಕ್ಕೂ ಮಿಕ್ಕಿದ  ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಕುರಿತು  ಪೊಲೀಸರ ಮುಂದೆ ಹೇಳಿದ್ದಾನೆ. ಈತನಲ್ಲಿ ಎಂಟು ಬುಲೆಟ್‌  ಸಹಿತ ದುಬಾರಿ ಬೆಲೆಯ  ಹತ್ತಕ್ಕೂ ಅಧಿಕ ಬೈಕ್‌ಗಳಿದ್ದು, ಇವೆಲ್ಲ ವನ್ನು  ನಂಬರ್‌ ಪ್ಲೇಟ್‌ ಬದಲಾಯಿಸಿ  ಕಳ್ಳತನಕ್ಕೆ ಬಳಸುತ್ತಿದ್ದ. ಈತನನ್ನು ತನಿಖೆಗಾಗಿ ಸುಬ್ರಹ್ಮಣ್ಯ ಠಾಣೆಯಲ್ಲಿ ಇರಿಸಿಕೊಂ ಡಿದ್ದು, ಪೊಲೀಸರು  ತನಿಖೆ ಮುಂದುವರಿಸಿದ್ದಾರೆ. ಬಸವನಮೂಲೆ ಮತ್ತು ಬಿಳಿನೆಲೆ ದೇವಸ್ಥಾನ ಹಾಗೂ ಇಚಿಲಂಪಾಡಿ ಚರ್ಚ್‌ನಲ್ಲಿ 2017ರ ಅಕ್ಟೋಬರ್‌ನಲ್ಲಿ ಕಳವು ನಡೆದಿತ್ತು.

ಸರಣಿ ವರದಿ  ಪ್ರಕಟಿಸಿತ್ತು
ಆರಾಧನಾಲಯಗಳಲ್ಲಿ ಕಳವು ಸಂಬಂಧಿಸಿ  ತನಿಖೆ ವಿಳಂಬವಾಗುತ್ತಿರುವ  ಬಗ್ಗೆ ಭಕ್ತರ ಅಸಮಾಧಾನದ ಕುರಿತು ಇತ್ತೀಚೆಗೆ ಉದಯವಾಣಿ ಪದೇಪದೆ ವರದಿ ಪ್ರಕಟಿಸಿತ್ತು.  

ಮರಕತ ಪ್ರಕರಣದಲ್ಲಿ ಭಾಗಿಯಾಗಿಲ್ಲ?
ಸುಬ್ರಹ್ಮಣ್ಯ  ಠಾಣಾ ವ್ಯಾಪ್ತಿಯ ಮರಕತ  ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲೂ ಇದೇ ಅವಧಿಯಲ್ಲಿ ಕಳವು ನಡೆದಿತ್ತು. ಇದರಲ್ಲಿ ತಾನು ಭಾಗಿಯಾಗಿಲ್ಲ ಎಂದು ನವೀನ್‌ ಪೊಲೀಸರಲ್ಲಿ ಹೇಳಿಕೊಂಡಿದ್ದಾನೆ. ಈತ ಈ ಪ್ರಕರಣದಲ್ಲಿ ಭಾಗಿಯಾಗಿರುವ ಸಾಧ್ಯತೆ ಕಡಿಮೆ ಎಂದು  ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next