Advertisement

Thief Case ಮಲಗಿದ್ದ ವೃದ್ಧೆಯ ಕಿವಿಯ ಆಭರಣ ಕಳವು

11:08 PM Jul 08, 2024 | Team Udayavani |

ವಿಟ್ಲ: ಮನೆಯಲ್ಲಿ ಮಲಗಿದ್ದ ವೃದ್ಧೆಯೊಬ್ಬರ ಬಾಯಿಯನ್ನು ಮುಚ್ಚಿ ಕಿವಿಯ ಚಿನ್ನಾಭರಣವನ್ನು ಕಿತ್ತು ಪರಾರಿಯಾದ ಘಟನೆ ವಿಟ್ಲಪಟ್ನೂರು ಗ್ರಾಮದಲ್ಲಿ ನಡೆದಿದೆ. ಪಳ್ಳಿಗದ್ದೆ ನಿವಾಸಿ ಬಿ.ಎಂ. ಇಬ್ರಾಹಿಂ ವಿಟ್ಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Advertisement

ರವಿವಾರ ರಾತ್ರಿ ಇಬ್ರಾಹಿಂ ಅವರ ಸಹೋದರನ ಮನೆಯ ಹಿಂಬಾಗಿಲ ಕಿಟಕಿಯ ಸರಳನ್ನು ಯಾವುದೋ ಸಾಧನ ಬಳಸಿ ಮುರಿದ ಕಳ್ಳರು ಅನಂತರ ಅದೇ ಕಿಟಕಿಯ ಮೂಲಕ ಯಾವುದೋ ಸಾಧನದಿಂದ ಮನೆಯ ಹಿಂಬಾಗಿಲನ್ನು ತೆರೆದು ಒಳಗೆ ಪ್ರವೇಶಿಸಿದ್ದರು.

ಬಳಿಕ ಕೋಣೆಯಲ್ಲಿ ಮಲಗಿದ್ದ ತಾಯಿ ಐಸಮ್ಮ ಅವರ ಕಿವಿಯಲ್ಲಿದ್ದ ಅಂದಾಜು 8 ಗ್ರಾಂ ತೂಕದ 48 ಸಾವಿರ ರೂ. ಮೌಲ್ಯದ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿದ್ದಾರೆ. ಕಳ್ಳರು ಬಲಾತ್ಕಾರದಿಂದ ಚಿನ್ನವನ್ನು ಕಿತ್ತಿರುವ ಕಾರಣ ವೃದ್ಧೆ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಬೆಳಗಾದ ಮೇಲಷ್ಟೇ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next