Advertisement

ಅಂಗನವಾಡಿಗೆ ಕನ್ನ : ದವಸ ಧಾನ್ಯ ದೋಚಿ, ಮಲ ಮೂತ್ರ ವಿಸರ್ಜಿಸಿ ವಿಕೃತಿ ಮೆರೆದ ಕಿಡಿಗೇಡಿಗಳು

09:34 PM Jan 04, 2022 | Team Udayavani |

ಕುಳಗೇರಿ ಕ್ರಾಸ್: (ಜಿ.ಬಾಗಲಕೋಟೆ) ಗ್ರಾಮದ ಪೊಲೀಸ್ ಠಾಣೆ ಕೂಗಳತೆಯ ಗ್ರಾಮ ಪಂಚಾಯತ್ ಪಕ್ಕದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಕನ್ನ ಹಾಕಿದ ಕಳ್ಳರು ಅಂಗನವಾಡಿ ಕೇಂದ್ರದಲ್ಲಿರುವ ದವಸ-ಧಾನ್ಯಗಳನ್ನು ಕದ್ದೊಯ್ದಿದ್ದಾರೆ.

Advertisement

ಅಂಗನವಾಡಿ ಕೇಂದ್ರದ ಹಿಂಭಾಗದಲ್ಲಿರುವ ಕಂಪೌಂಡ್ ಜಿಗಿದು ಒಳ ನುಗ್ಗಿದ ಕಳ್ಳರು ಅಂಗನವಾಡಿ ಕೀಲಿ ಮುರಿದು ಮಕ್ಕಳಿಗೆ ಸೇರಬೇಕಿದ್ದ ಧಾನ್ಯಗಳನ್ನು ಕದ್ದು ಪರಾರಿಯಾಗಿದ್ದಾರೆ.

ಜನೆವರಿ ತಿಂಗಳ ರೇಶನ್ 1ನೇ ತಾರಿಕಿಗೆ ಬಂದಿತ್ತು ಆದರೆ ಮಕ್ಕಳಿಗೆ ಸೇರುವ ಮುನ್ನವೇ ಶೇಂಗಾ, ಬ್ಯಾಳಿ, ಸಕ್ಕರೆ ಸೇರಿದಂತೆ ಧಾನ್ಯಗಳನ್ನು ಕದ್ದಿದ್ದಾರೆ ಎಂದು ಅಂಗನವಾಡಿ ಕಾರ್ಯಕರ್ತೆ ಅನೀತಾ ತಳವಾರ ಪತ್ರಿಕೆಗೆ ತಿಳಿಸಿದ್ದಾರೆ.

ಇದೆಂಥ ಕಳ್ಳರು: ಅಂಗನವಾಡಿ ಮಕ್ಕಳ ವಿದ್ಯಾ ಕೇಂದ್ರ ಅನ್ನೋದನ್ನ ಮರೆತ ಕಳ್ಳರು ಅಂಗನವಾಡಿ ಕೇಂದ್ರದಲ್ಲಿ ಮಲ-ಮೂತ್ರ ವಿಸರ್ಜನೆ ಮಾಡಿದ್ದಾರೆ, ಶಾಲೆಯ ತುಂಬೆಲ್ಲಾ ರಾಡಿ ಹಿಡಿಸಿ ರಾತ್ರಿ ಹೊತ್ತು ತಲೆ ವಿಕೃತವಾಗಿ ವರ್ತಿಸಿದ್ದಾರೆ. ಅಲ್ಲದೆ ಕಿಡಿಗೇಡಿಗಳು ಅಲ್ಲೇ ರಾತ್ರಿ ಮಲಗಿರುವ ಸಂಶಯ ಹುಟ್ಟಿಕೊಂಡಿದೆ. ಇದೆಂಥ ಕಳ್ಳರು ಈ ರೀತಿ ಮಾಡಿದ್ದಾರೆ ಎಂದು ಆಶ್ಚರ್ಯಪಟ್ಟ ಕಾರ್ಯಕರ್ತೆಗೆ ಇದನ್ನೆಲ್ಲಾ ಸ್ವಚ್ಛ ಮಾಡುವುದೇ ಪರಾಕಷ್ಠವಾಯಿತು ಎಂದು ಪತ್ರಿಕೆಯ ಮುಂದೆ ತಮ್ಮ ಅಳಲು ಹೇಳಿಕೊಂಡರು.

ಇದನ್ನೂ ಓದಿ : ದಕ್ಷಿಣ ಧ್ರುವ ತಲುಪಿದ ಭಾರತೀಯ ಮೂಲದ ಕ್ಯಾಪ್ಟನ್‌ ಹರ್‌ಪ್ರೀತ್‌ ಚಾಂದಿ!

Advertisement

ಸ್ಥಳಿಯ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇತ್ತೀಚೆಗೆ ಗ್ರಾಮದಲ್ಲಿ ಸಾಕಷ್ಟು ಕಳ್ಳತನ ಪ್ರಕರಣಗಳು ನಡೆದಿವೆ. ಆದರೆ ಕೋರ್ಟ್ ಕಛೇರಿ ಎಂದು ಅಲಿಯೋದ್ಯಾಕೆ ನಮಗ್ಯಾಕೆ ಈ ಉಸಾಬರಿ. ಕಳೆದುಹೋದದ್ದು ಮತ್ತೆ ಸಿಗುವುದೇ ಎಂಬ ಅನುಮಾನದಲ್ಲಿ ಠಾಣೆಗೆ ಕೆಲವರು ದೂರು ಕೊಟ್ಟರೆ ಇನ್ನೂ ಕೆಲವರು ದೂರನ್ನ ಕೊಡುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.