Advertisement

ಕದ್ದ ಬೈಕ್ ಗಳನ್ನೇ ಸಂಬಂಧಿಕರಿಗೆ ಗಿಫ್ಟ್ ಆಗಿ ಕೊಡುತ್ತಿದ್ದ ಚಾಲಾಕಿ ಕಳ್ಳ ಅಂದರ್

01:11 PM Jan 23, 2022 | Team Udayavani |

ಬೆಂಗಳೂರು: ನಕಲಿ ಕೀ ಬಳಸಿ ದ್ವಿಚಕ್ರ ವಾಹನ ಕಳವು ಮಾಡಿ, ಸಂಬಂಧಿಕರಿಗೆ ಉಡುಗೊರೆ ಕೊಡುತ್ತಿದ್ದ ಖತರ್ನಾಕ್‌ ಕಳ್ಳನೊಬ್ಬ ರಾಜಾಜಿನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Advertisement

ರಾಜಾಜಿನಗರದ ಭರತ್‌ (32) ಬಂಧಿತ. ಆರೋಪಿಯಿಂದ 7 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ನಗರದ ವಿವಿಧೆಡೆ ಓಡಾಡಿ ಮನೆ ಮುಂದೆ ನಿಂತಿರುವ ವಾಹನಗಳನ್ನು ಗುರುತಿಸುತ್ತಿದ್ದ. ವಾಹನಗಳ ನಂಬರ್‌ ಅನ್ನು ತನ್ನ ಮೊಬೈಲ್‌ನಲ್ಲಿ ನೋಂದಾಯಿಸಿಕೊಂಡು ಬೆಂಗಳೂರು ಟ್ರಾಫಿಕ್‌ ಪೊಲೀಸ್‌(ಬಿಟಿಪಿ)ಆ್ಯಪ್‌ ಮೂಲಕ ವಾಹನದ ವಿರುದ್ಧ ಸಂಚಾರಿ ನಿಯಮ ಉಲ್ಲಂಘಣೆ ದಂಡ ಬಾಕಿ ಇದೆಯೇ ಎಂದು ಪರಿಶೀಲಿಸುತ್ತಿದ್ದ. ಒಂದು ವೇಳೆ ದಂಡ ವಿಧಿಸಿದ್ದರೆ ಅಂತಹ ವಾಹನಗಳನ್ನು ಕಳವು ಮಾಡುತ್ತಿರಲಿಲ್ಲ.

ಯಾವುದೇ ಪ್ರಕರಣಗಳಿಲ್ಲದ ವಾಹನಗಳನ್ನು ಕದಿಯುತ್ತಿದ್ದ.ಕದ್ದ ನಂತರ ಬೈಕ್‌ ಮಾರಿದರೆ ಕಳ್ಳತನ ಮಾಡಿರುವುದುತಿಳಿಯಬಹುದು ಎಂದು ಸಂಬಂಧಿಕರಿಗೆ ಉಚಿತವಾಗಿನೀಡುತ್ತಿದ್ದ ಎಂಬುದು ಗೊತ್ತಾಗಿದೆ. ಈ ರೀತಿ ಸುಮಾರುಹತ್ತಕ್ಕೂ ಅಧಿಕ ವಾಹನಗಳನ್ನು ಗಿಫ್ಟ್ ಆಗಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next