Advertisement

ಠೀಕ್‌ ನಹೀ ಟೀಕ್‌ ಹೈ !

12:30 AM Jan 21, 2019 | |

ನಮ್ಮಲ್ಲಿ ನೂರಾರು ವರ್ಷಗಳಿಂದ ಅನೇಕ ಮರಗಳ ಬಳಕೆ ಮನೆ ಕಟ್ಟಲು ಆಗುತ್ತಿದೆ. ಮರಗಳು ಚೆನ್ನಾಗಿ ಬಲಿತಿದ್ದರೆ, ಅವುಗಳ ಹೊರ ಭಾಗ – ಸಾಮಾನ್ಯವಾಗಿ ತೆಳು ಬಣ್ಣದ ಮರವನ್ನು ಬಿಟ್ಟು ಹೃದಯ ಭಾಗದ “ಹಾರ್ಟ್‌ ವುಡ್‌’ ಬಳಸಿದರೆ ನೂರಾರು ವರ್ಷ ಈ ಮರಗಳೂ ಬಾಳಿಕೆ ಬರಬಲ್ಲವು. ಇತ್ತೀಚಿನ ದಿನಗಳಲ್ಲಿ ಹೇಗಿದ್ದರೂ ಗೆದ್ದಿಲು ನಿರೋಧಕ ಉಪಚಾರವನ್ನು ಪಾಯದ ಮಟ್ಟದಿಂದಲೇ ನೀಡಲಾಗುತ್ತದೆ. ಹಾಗೆಯೇ, ಈ ಮರಗಳು ಗೋಡೆ ತಾಗುವ ಕಡೆ ಒಂದಷ್ಟು ರಾಸಾಯನಿಕವನ್ನು ಬ್ರಶ್‌ ಮಾಡಿದರೆ, ಹುಳ ಹುಪ್ಪಡಿಯೂ ಸುಲಭದಲ್ಲಿ ಹೊಡೆಯುವುದಿಲ್ಲ. 

Advertisement

ಇತೀ¤ಚಿನ ದಿನಗಳಲ್ಲಿ ಮನೆ ನಿರ್ಮಾಣಕ್ಕೆ ಮರಗಳ ಬಳಕೆ ಕಡಿಮೆ ಆಗುತ್ತಿದ್ದರೂ ಕೆಲವೊಂದಕ್ಕೆ ಈಗಲೂ ಮರವೇ ಬೇಕಾಗುತ್ತದೆ. ನಾವು ಕಾಡನ್ನು ಉಳಿಸಿಕೊಂಡು ಒಂದಷ್ಟು ಪ್ಲಾಂಟೇಷನ್‌ – ಮರ ನೆಡುವ ಕಾರ್ಯವನ್ನು ಜೋರಾಗಿ ಮಾಡಿದರೆ, ಉತ್ತಮ ಮರಗಳು ಕಡಿಮೆ ಬೆಲೆಗೂ ಪರಿಸರ ಸ್ನೇಹಿ ರೂಪದಲ್ಲೇ ದೊರಕಬಲ್ಲವು. ಆದರೆ,

ಸದ್ಯಕ್ಕೆ ಮರ ದುಬಾರಿಯಾಗಿದ್ದು, ಅದನ್ನು ಎಲ್ಲೆಲ್ಲಿ ಅತ್ಯಗತ್ಯವಾಗಿ ಬೇಕೋ ಅಲ್ಲಿ ಮಾತ್ರ ಉಪಯೋಗಿಸುವುದು ಉಳಿತಾಯದ ದೃಷ್ಟಿಯಿಂದ ಮುಖ್ಯವಾಗುತ್ತದೆ. ಜೊತೆಗೆ ಕೆಲ ಮರಗಳು ನೆಡು ತೋಪುಗಳಿಂದ ಬಂದವಾದ ಕಾರಣ ಅವು ಪರಿಸರಸ್ನೇಹಿಯೂ ಹೌದು.  ಮರಗಳನ್ನು ಮನೆಗಳಿಗೆ ಬಳಸುವಾಗ ಅವು ಎಷ್ಟು ಪರಿಸರ ಸ್ನೇ ಹಾಗೂ ದುಬಾರಿ ಎಂಬ ಅಂಶಗಳನ್ನು ಗಮನಿಸಿ ಉಪಯೋಗಿಸುವುದು ಒಳಿತು. 

ಮರಗಳ ಬಗ್ಗೆ ಒಂದಿಷ್ಟು
ನಮ್ಮಲ್ಲಿ ಅತಿ ಹೆಚ್ಚು ಹೆಸರು ಮಾಡಿರುವುದು ತೇಗದ ಮರ. ಪಾಶ್ಚಾತ್ಯ ದೇಶಗಳಲ್ಲಿ ಓಕ್‌ , ಸಿಡಾರ್‌ ಇತ್ಯಾದಿ ಮರಗಳು ಹೆಚ್ಚು ಬಳಕೆಯಲ್ಲಿದ್ದಂತೆ ನಮ್ಮಲ್ಲಿ ತೇಗದ ಮರ ಬಿಟ್ಟರೆ ಇನ್ನಿಲ್ಲ ಎಂತಾಗಲು ನಾನಾ ಕಾರಣಗಳಿವೆ.  ತೇಗದಲ್ಲಿ ಸ್ವಾಭಾವಿಕವಾಗೇ ಮರಗಳನ್ನು ಸಂರಕ್ಷಿಸುವ ಎಣ್ಣೆ ಅಂಶ ಇರುತ್ತದೆ. ಇತರೆ ಮರಗಳನ್ನು ಸಂರಕ್ಷಿಸಲು ನಾವು ಎಣ್ಣೆ ಉಪಚಾರ ನೀಡಬೇಕಾಗಿದ್ದರೂ ತೇಗ ಮಾತ್ರ ಸ್ವಲ್ಪ ಬಲಿತರೂ ಸ್ವಯಂ ಸಂರಕ್ಷಣೆ ಪಡೆಯುವ ಸ್ಥಿತಿಗೆ ಬಂದಿರುತ್ತದೆ. ಜೊತೆಗೆ ನಮ್ಮ ಹವಾಗುಣಕ್ಕೆ, ಮುಖ್ಯವಾಗಿ ವೈಪರೀತ್ಯಗಳಿಗೆ ಸರಿತೂಗಿಸಿಕೊಂಡು ಹೋಗುವ ಗುಣ ತೇಗದ ಮರಕ್ಕಿದೆ. ಬಿಸಿಲಿಗೆ ಹೆಚ್ಚು ಉಬ್ಬದೆ, ಚಳಿಗೆ ಕುಗ್ಗದೆ, ನೆನೆದರೂ ಹೆಚ್ಚು ಬದಲಾಗುವುದಿಲ್ಲ. ಇನ್ನು ಹುಳ ಹುಪ್ಪಟೆಗಳು, ಗೆದ್ದಲೂ ಕೂಡ ಸಾಮಾನ್ಯವಾಗಿ ತೇಗವನ್ನು ಕಾಡುವುದಿಲ್ಲ. ಒಳ್ಳೆಯ ಪಾಲಿಶ್‌ ತೆಗೆದುಕೊಳ್ಳುವುದಾದರೂ ಅದರ ಗ್ರೇನ್ಸ್‌ -ಬೆಳವಣಿಗೆ ಗೆರೆಗಳ ಚಿತ್ತಾರ ಹಾಗೂ ಬಣ್ಣ ಬೀಟೆ – ರೋಸ್‌ ವುಡ್‌, ಇತರೆ ಮರಗಳಿಗೆ ಹೋಲಿಸಿದರೆ ಕಡಿಮೆ ಇದ್ದರೂ, ಟೀಕ್‌ಗೆ ಅದರದೇ ಆದ ಗಾಂಭೀರ್ಯ ಇದೆ. ನೋಡಲು ರಿಚ್‌ ಲುಕ್‌ ಹೊಂದಿರುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಜನ ತೇಗದ ಹಿಂದೆ ಬೀಳುವುದರಿಂದ, ಅದರ ಬೆಲೆ ಗಗನಕ್ಕೇರಿದೆ. ಪರಿಣಾಮವಾಗಿಯೇ,  ಮನೆ ಕಟ್ಟಲು ಹೊರಟವರು, ದೇಗದ ಮರ ಕಟ್ಟುವಾಗ ತೇಗ ಬಳಸುವ ಮೊದಲು ಎರಡುಬಾರಿ ಯೋಚಿಸುವಂತಾಗಿದೆ.

ಹೊನ್ನೆ ಮರ
ನೋಡಲು ತೇಗದ ಮರದಂತೆಯೇ ಗ್ರೇನ್ಸ್‌ ಹೊಂದಿದ್ದು, ಉತ್ತಮ ಪಾಲೀಶ್‌ ಕೂಡ ತೆಗೆದುಕೊಳ್ಳಬಲ್ಲ ಮರವೆಂದರೆ ಹೊನ್ನೆ,  ಈ ಮರ ಉತ್ತಮವಾದ ಬಾಳಿಕೆಯನ್ನೂ ನೀಡಬಲ್ಲದು. ಹೊನ್ನೆ ಮರದ ಮಿತಿ ಎಂದರೆ ನೀರು ಬಿದ್ದರೆ ಇದರಿಂದ ಒಂದು ಬಗೆಯ ಬಣ್ಣ ಹೊರಬಿದ್ದು, ಇದರ ಕಲೆ ಮಾರ್ಬಲ್‌, ತಿಳಿಬಣ್ಣದ ಗ್ರಾನೈಟ್‌, ಮೊಸೈಕ್‌ ಟೈಲ್ಸ್‌ ಇತ್ಯಾದಿಗಳ ಮೇಲೆ ಬಿದ್ದರೆ, ಆಳವಾಗಿ ಇಳಿದು ತೆಗೆಯಲು ಕಷ್ಟವಾಗುತ್ತದೆ. ಹಾಗಾಗಿ, ಹೊನ್ನೆ ಮರವನ್ನು ಉಪಯೋಗಿಸುವ ಮೊದಲು ನೆಲಹಾಸುಗಳ ಬಗ್ಗೆಯೂ ನಿರ್ಧರಿಸ ಬೇಕು. ನೆಲಕ್ಕೆ ವೆಟ್ರಿಫೈಡ್‌, ಅದರಲ್ಲೂ ನುಣ್ಣನೆಯ ಮಾದರಿಯವನ್ನು ಆಯ್ದುಕೊಳ್ಳುವಂತಿದ್ದರೆ, ಹೊನ್ನೆಮರ ಬಿಡುವ ಬಣ್ಣ ತೊಂದರೆಯನ್ನೇನೋ ಮಾಡುವುದಿಲ್ಲ. ಹಾಗೆಯೇ, ಗಾಢಬಣ್ಣದ ಗ್ರಾನೈಟ್‌ ಇಲ್ಲವೇ ಮಣ್ಣುಬಣ್ಣದ ಇತರೆ ವಸ್ತುಗಳನ್ನು ಬಳಸುವಂತಿದ್ದರೆ, ಕಲೆ ಬಿದ್ದರೂ ಹೆಚ್ಚೇನೂ ಕಾಣುವುದಿಲ್ಲ. ಹೊನ್ನೆ ಮರಕ್ಕೆ ಸೂಕ್ತ ಪಾಲೀಶ್‌ ಅಥವಾ ಬಣ್ಣ ಬಳಿಯುವ ಮೂಲಕ ಸಾಕಷ್ಟು ತೊಂದರೆಯನ್ನು ತಪ್ಪಿಸಬಹುದು. ಮರಕ್ಕೆ ಒಂದು ಪದರ ನೀರು ನಿರೋಧಕ ಬಣ್ಣ ಬಳಿದರೆ – ನೀರು ತಾಗಿದಾಗಲೂ ಬಣ್ಣದ ಅಂಶ ಹೊರಸೂಸುವುದಿಲ್ಲ. 

Advertisement

ಸಾಲ್‌ ಮರ
ತೇಗದ ಮರಕ್ಕೆ ಹೋಲಿಸಿದರೆ ಅದಕ್ಕಿಂತ ಗಟ್ಟಿಮುಟ್ಟಾದ ಹಾಗೂ ಭಾರವಾದ ಈ ಮರ, ಫ್ರೆàಮ್‌ -ಕಿಟಕಿ ಬಾಗಿಲುಗಳ ಚೌಕಟ್ಟುಗಳನ್ನು ಮಾಡಲು ಹೆಚ್ಚು ಸೂಕ್ತ. ಚೆನ್ನಾಗಿ ಸೀಸನ್‌ – ಮಾಗಿದ ಮರದಲ್ಲಿ ಸಣ್ಣಸಣ್ಣ ತುಂಡುಗಳಲ್ಲೂ ಜಾಯಿಂಟ್ಸ್‌ – ಬೆಸೆಯುವ ಕೆಲಸ ಮಾಡಬಹುದಾದರೂ, ಇದು ತೇಗದಷ್ಟು ಮೆದುವಲ್ಲದ ಕಾರಣ ಬಿರುಕು ಬಿಡುವ ಸಾಧ್ಯತೆ ಹೆಚ್ಚಿರುತ್ತದೆ. ಸಾಲ್‌ವುರದಲ್ಲಿ ಫ್ರೆàಮ್‌ ಮಾಡಿಕೊಂಡು ಹೊನ್ನೆ ಮರದಲ್ಲಿ ಬಾಗಿಲುಗಳನ್ನು ಮಾಡಿಕೊಳ್ಳುವುದು ವಾಡಿಕೆಯಲ್ಲಿದೆ. ನೀರು ಹಾಕಿ ಕ್ಯೂರ್‌ ಮಾಡುವ ಕಾರ್ಯ ಎಲ್ಲ ಮುಗಿದ ಮೇಲೆ, ಟೈಲ್ಸ್‌ ಫಿಕ್ಸ್‌ ಮಾಡಿದನಂತರ ಹೊನ್ನೆ ಮರದ ಬಾಗಿಲುಗಳನ್ನು ಹಾಕಿದರೆ, ಅವಕ್ಕೆ ನೀರು ಬೀಳುವ ಸಾಧ್ಯತೆ ಕಡಿಮೆ ಇರುತ್ತದೆ. ಅದೇ ಚೌಕಟ್ಟುಗಳನ್ನೂ ಹೊನ್ನೆಮರದಲ್ಲೇ ಮಾಡಿದರೆ, ಟೈಲ್ಸ್‌ಗಳು ಕರೆಕಟ್ಟುವ ಸಾಧ್ಯತೆ ಹೆಚ್ಚಿರುತ್ತದೆ. ಸಾಲ್‌ ಮರಕ್ಕೆ ಸಾಮಾನ್ಯವಾಗಿ ಹುಳುಗಳು ಹೊಡೆಯುವುದಿಲ್ಲವಾದರೂ, ಗೋಡೆಗೆ ತಾಗಿದಂತೆ ಇರುವುದರಿಂದ, ಒಂದು ಪದರ ಗೆದ್ದಿಲು ನಿರೋಧಕ ರಸಾಯನಿಕವನ್ನು ನೀಡಿ ಮುಂದುವರೆಯುವುದು ಉತ್ತಮ.

ಬೇವು, ಮಾವು, ಹಲಸು, ಹೆಬ್ಬಲಸು 
ನಮ್ಮಲ್ಲಿ ನೂರಾರು ವರ್ಷಗಳಿಂದ ಅನೇಕ ಮರಗಳ ಬಳಕೆ ಮನೆ ಕಟ್ಟಲು ಆಗುತ್ತಿದೆ. ಮರಗಳು ಚೆನ್ನಾಗಿ ಬಲಿತಿದ್ದರೆ, ಅವುಗಳ ಹೊರ ಭಾಗ – ಸಾಮಾನ್ಯವಾಗಿ ತೆಳು ಬಣ್ಣದ ಮರವನ್ನು ಬಿಟ್ಟು ಹೃದಯ ಭಾಗದ “ಹಾರ್ಟ್‌ ವುಡ್‌’ ಬಳಸಿದರೆ ನೂರಾರು ವರ್ಷ ಈ ಮರಗಳೂ ಬಾಳಿಕೆ ಬರಬಲ್ಲವು. ಇತ್ತೀಚಿನ ದಿನಗಳಲ್ಲಿ ಹೇಗಿದ್ದರೂ ಗೆದ್ದಿಲು ನಿರೋಧಕ ಉಪಚಾರವನ್ನು ಪಾಯದ ಮಟ್ಟದಿಂದಲೇ ನೀಡಲಾಗುತ್ತದೆ. ಹಾಗೆಯೇ, ಈ ಮರಗಳು ಗೋಡೆ ತಾಗುವ ಕಡೆ ಒಂದಷ್ಟು ರಾಸಾಯನಿಕವನ್ನು ಬ್ರಶ್‌ ಮಾಡಿದರೆ, ಹುಳ ಹುಪ್ಪಡಿಯೂ ಸುಲಭದಲ್ಲಿ ಹೊಡೆಯುವುದಿಲ್ಲ. ಬೇಗೆ ಸ್ವಾಭಾವಿಕವಾಗೇ ಕ್ರಿಮಿ ನಾಶಕ ಗುಣ ಇರುತ್ತದೆ.  ಅದರಲ್ಲೂ, ಚೆನ್ನಾಗಿ ಬಲಿತಿರುವ ಮರದ ತಿರುಳು ಭಾಗವನ್ನು ಉಪಯೋಗಿಸಿದರೆ, ಅತಿ ಕಡಿಮೆ ಬೆಲೆಗೆ ಉತ್ತಮ ಮರ ದೊರಕಿದಂತಾಗುತ್ತದೆ. 

ಹಣ ಕಾಸಿನ ಲೆಕ್ಕಾಚಾರ
ಘನ ಅಡಿಗೆ ಸುಮಾರು ಆರು ಸಾವಿರ ಇರುವ ಟೀಕ್‌ ಎಲ್ಲದಕ್ಕಿಂತ ದುಬಾರಿ. ಎರಡನೆ ಸ್ಥಾನ ಹೊನ್ನೆ ಮರದ್ದೇ. ಮೂರನೆ ಸ್ಥಾನದಲ್ಲಿ ಸಾಲ್‌ ಮರ. ಬೇವು ಇತ್ಯಾದಿ ಇವೆಲ್ಲಾ, ಅತಿ ಕಡಿಮೆ ಬೆಲೆಗೆ ಅಂದರೆ ಸಾವಿರ ರೂಪಾಯಿ ಆಸು ಪಾಸಿನಲ್ಲಿ ದೊರಕುತ್ತವೆ. ಎಲ್ಲಿ ಸ್ವಲ್ಪ ಅಲಂಕಾರಿಕ ಮರದ ಅಗತ್ಯ ಇದೆಯೋ ಅಲ್ಲಿ ಮಾತ್ರ ಅಂದರೆ ಮುಖ್ಯ ದ್ವಾರ, ಅದನ್ನು ಬಿಟ್ಟರೆ ಪೂಜೆಯ ಕೋಣೆಗೆ ಮಾತ್ರ ಟೀಕನ್ನು ಸೀಮಿತ ಗೊಳಿಸಿದರೆ, ಸಾಕಷ್ಟು ಹಣ ಉಳಿತಾಯ ಆಗಬಲ್ಲದು. ಇತರೆ ಮರಗಳು ಕಡಿಮೆ ಬೆಲೆಗೆ ದೊರೆತರೂ, ಅವುಗಳ ಮೆಂಟೆನೆನ್ಸ್‌ – ಕಾಲಕಾಲಕ್ಕೆ ಬಣ್ಣ , ಪಾಲೀಶ್‌ ಮಾಡಲು ಮರೆಯಬಾರದು. ನೀರು, ಬಿಸಿಲು ಹೆಚ್ಚಿಗೆ ತಾಗದಂತೆ ನೀರು ನಿರೋಧಕ ಪದರ, ಸಾಮಾನ್ಯವಾಗಿ ಅದು ಎನಾಮೆಲ್‌ ಬಣ್ಣವೇ ಆಗಿರುತ್ತದೆ.  ಹೀಗೆ ಮಾಡಿದರೆ, ಬಹುತೇಕ ಮರಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಬಲ್ಲವು. 

– ಆರ್ಕಿಟೆಕ್ಟ್ ಕೆ ಜಯರಾಮ್‌

ಮಾಹಿತಿಗೆ -98441 32826

Advertisement

Udayavani is now on Telegram. Click here to join our channel and stay updated with the latest news.

Next