Advertisement

ಮದುವೆಯಾದ ಮರುಕ್ಷಣವೇ ಅಪಘಾತದಲ್ಲಿ ಮೃತಪಟ್ಟರು!

11:01 AM Aug 26, 2019 | Team Udayavani |

ಟೆಕ್ಸಾಸ್:‌ ಅವರು ಆಗ ತಾನೆ ಮದುವೆಯಾದವರು. ಇನ್ನೂ ಮದುವೆ ಧಿರಿಸಿನಲ್ಲೇ ಇದ್ದರು. ಅಷ್ಟರಲ್ಲಿ ಯಮರೂಪಿಯಾಗಿ ಬಂದಪ್ಪಳಿಸಿತ್ತು ಒಂದು ಟ್ರಕ್.‌ ಮದುವೆ ಸಂಭ್ರಮದಲ್ಲಿ ತೇಲಾಡಬೇಕಿದ್ದ ಜೋಡಿ ಹೆಣವಾಗಿ ಮಲಗಿದೆ. ಇಂತಹ ಎದೆನಡುಗಿಸುವ ದುರಂತ ನಡೆದಿದ್ದು ಅಮೇರಿಕಾದ ಟೆಕ್ಸಾಸ್‌ ನ ಆರೆಂಜ್‌ ನಗರದಲ್ಲಿ.

Advertisement

ಹ್ಯಾರ್ಲೇ ಮತ್ತು ರಿಯಾನನ್‌ ಮೋರ್ಗನ್‌ ಆಗ ತಾನೆ ಮದುವೆಯಾದವರು. ಹ್ಯಾರ್ಲೇ ಗೆ 19 ವರ್ಷ. ರಿಯಾನನ್‌ ಗೆ 20. ಆರೆಂಜ್‌ ನಗರದ ನ್ಯಾಯಾಲಯದ ವಿವಾಹವಾಗಿದ್ದರು. ಹ್ಯಾರ್ಲೇಯ ತಾಯಿ ಲಶಾವ್ನ ನವವಿವಾಹಿತರ ಜೊತೆಗಿದ್ದರು ಮತ್ತು ಅವರು ಅಪಘಾತವನ್ನು ಕಣ್ಣಾರೆ ಕಂಡಿದ್ದಾರೆ ಎಂದು ವರದಿಯಾಗಿದೆ.

ನಾನು ನನ್ನ ಮಕ್ಕಳು ಸಾಯುವುದನ್ನು ಕಣ್ಣಾರೆ ಕಂಡೆ. ಜೀವನ ಪೂರ್ತಿ ಈ ದೃಶ್ಯ ನನ್ನ ಕಣ್ಣ ಮುಂದಿರುತ್ತದೆ ಎಂದು ಅಳಲು ತೋಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next