Advertisement
ಅಕ್ಷಯ ತೃತೀಯ ಸಂದರ್ಭ ವಿವಿಧೆಡೆಗಳಿಂದ ಬಟ್ಟೆಗಳನ್ನು ಸಂಗ್ರಹಿಸಿ ದೀನರಿಗೆ ನೀಡುವ ಕಾರ್ಯವನ್ನು ಅವರು ಆರಂಭಿಸಿದ್ದು, ಅದನ್ನೀಗ ದೊಡ್ಡ ಮಟ್ಟದ ಯೋಜನೆಯನ್ನಾಗಿಸಿದ್ದಾರೆ. ಕಳೆದ ವರ್ಷವೂ ಅವರು ಸ್ನೇಹಿತರಿಂದ ಬಟ್ಟೆಗಳನ್ನು ಸಂಗ್ರಹಿಸಿ ಅಗತ್ಯವುಳ್ಳವರಿಗೆ ನೀಡಿದ್ದಾರೆ. ಗಾಂಧೀಜಿಯವರು ಉಡುಪಿಗೆ ಬಂದಿದ್ದಾಗ ಅವರಿಗೆ ಚಿನ್ನ ದಾನ ಮಾಡಿದ್ದ 10 ವರ್ಷದ ಬಾಲಕಿ ಪಾಂಗಾಳದ ನಿರುಪಮಾ ನಾಯಕ್ ಅವರ “ಸಿರಿವಂತಿಕೆಯನ್ನು ಪ್ರದರ್ಶಿಸ ಬಾರದು. ಅದು ಇತರರಿಗೆ ಮತ್ಸರ ಪಡುವಂತಿರಬಾರದು’ ಎಂಬ ಮಾತು ಗಳನ್ನು ಆದರ್ಶವಾಗಿ ಪರಿಗಣಿಸಿ, ಬಟ್ಟೆ ಹಂಚುವ ಕಾಯಕವನ್ನು ಸುನಿಲ್ ಅವರು ಮುಂದುವರಿಸಿದ್ದಾರೆ. ಅಕ್ಷಯ ತದಿಗೆಯಂದು ಸುನಿಲ್ ಅವರು ಮನೆಗಳಿಗೆ ಹೋಗಿ ಬಟ್ಟೆ ಸಂಗ್ರಹಿಸುತ್ತಾರೆ. ಬಳಿಕ ತಮ್ಮ ಕಾರಿನಲ್ಲಿ ಅವುಗಳನ್ನು ತುಂಬಿ ದಾರಿ ಮಧ್ಯೆ ಅಗತ್ಯವಿದ್ದವರಿಗೆ ಮುಕ್ತವಾಗಿ ಹಂಚುತ್ತಾರೆ. ಅವರ ಈ ಕಾರ್ಯಕ್ಕೆ ಬೆಂಬಲವಾಗಿ ಹಲವರು ಬಟ್ಟೆಗಳನ್ನು ನೀಡಿದ್ದಾರೆ. ಜತೆಗೆ ಅವರ ಬೆಂಬಲವಾಗಿಯೂ ನಿಂತಿದ್ದಾರೆ.
“ಹೋದ ವರ್ಷ ನನಗೆ ಬರುತ್ತಿದ್ದ ದೂರವಾಣಿ ಕರೆಗಳು ಈಗಲೂ ಬರುತ್ತಿವೆ. ಜನರು ತುಂಬ ಸಂತೋಷದಿಂದ ತಮ್ಮ ಹೆಚ್ಚುವರಿ ಬಟ್ಟೆಗಳನ್ನು ಕೊಡುತ್ತಿದ್ದಾರೆ. ಇದನ್ನು ಅಗತ್ಯದ ಜನರಿಗೆ ಮುಟ್ಟಿಸುವಲ್ಲಿ ಅತೀವ ಸಂತೃಪ್ತಿ ಇದೆ. ಬಟ್ಟೆಯನ್ನು ಕೊಟ್ಟಾಗ ಅದರ ಅಗತ್ಯದವರಿಗೆ ಆಗುವ ಆನಂದಕ್ಕೆ ಬೆಲೆ ಕಟ್ಟಲಾಗದು’ .
– ಸುನಿಲ್