Advertisement

ಕಲಿಕೆ ಎದುರು ಇವರಿಗೆ ಬೇರೇನೂ ಇಲ್ಲ

06:30 AM May 19, 2018 | |

ಮುಳ್ಳೇರಿಯ: ಕರ್ನಾಟಕಕ್ಕೆ ಹೊಂದಿಕೊಂಡಿರುವ ಮುಳ್ಳೇರಿಯ ವೋಕೇಶನಲ್‌ ಹೈಯರ್‌ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ, ನೇಪಾಲ ಮೂಲದ ಮನೀಷಾ ಎ ಪ್ಲಸ್‌ ಅಂಕ ಗಳಿಸುವ ಮೂಲಕ ಶ್ಲಾಘನಾರ್ಹ ಸಾಧನೆ ಮಾಡಿದ್ದಾಳೆ.

Advertisement

ಮನೀಷಾ ಎಲ್ಲ ವಿಷಯಗಳಲ್ಲಿಯೂ ಎ ಪ್ಲಸ್‌ ಪಡೆದು ಜಿಲ್ಲೆಯಲ್ಲಿ ಈ ಸಾಧನೆ ಮಾಡಿರುವ ಇಬ್ಬರು ವಿದ್ಯಾರ್ಥಿಗಳಲ್ಲಿ ಒಬ್ಬಳಾಗಿ ಮೂಡಿಬಂದಿದ್ದಾಳೆ. ನೇಪಾಲದ ಧನ್‌ಬಹದ್ದೂರ್‌ – ಸುಜಾ ದಂಪತಿಯ ಹಿರಿಯ ಮಗಳು ಈಕೆ. ಧನ್‌ ಬಹದ್ದೂರ್‌ ಮುಳ್ಳೇರಿಯ ಪೇಟೆಯ ವ್ಯಾಪಾರ ಸಂಸ್ಥೆಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಗೂರ್ಖಾ ಆಗಿ ಕಾವಲು ಕೆಲಸ ಮಾಡುತ್ತಾರೆ. ವರ್ಷದ ಹಲವು ದಿನಗಳಲ್ಲಿ ನಿದ್ದೆಗೆಟ್ಟು ಪತಿಗಾಗಿ ಕಾಯುವ ತಾಯಿಗೆ ಜತೆಯಾಗಿ ತಾನು ಪಠ್ಯಪುಸ್ತಕ ಓದುವುದರಲ್ಲಿ ಮಗ್ನಳಾಗಿರುತ್ತಾಳೆ ಈ ಬಾಲೆ. ಈ ಕುಟುಂಬ ಕಳೆದ 20 ವರ್ಷಗಳಿಂದ ಬೇಂಗತ್ತಡ್ಕದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದೆ. ಯಾರ ಸಹಾಯವೋ ತರಬೇತಿಯೋ ಇಲ್ಲದೆ ಕ್ರಮವರಿತ ಓದು ಮಾತ್ರ ಮನೀಷಾಳ ಈ ಸಾಧನೆಗೆ ಕಾರಣ. 

ಮನೀಷಾ ನೇಪಾಲಿ, ಹಿಂದಿ, ಮಲೆಯಾಳಗಳ ಜತೆಗೆ ಕನ್ನಡ, ತುಳು ಸಹಿತ ಆರು ಭಾಷೆಗಳನ್ನು ಸುಲಲಿತವಾಗಿ ಮಾತನಾಡಬಲ್ಲಳು. 

ನಿರೀಕ್ಷೆ ಇರಲಿಲ್ಲ 
ಇಷ್ಟು ಒಳ್ಳೆಯ ಫ‌ಲಿತಾಂಶದ ನಿರೀಕ್ಷೆ ಇರಲಿಲ್ಲ. ಎಲ್ಲ ವಿಷಯ ಗಳಲ್ಲಿಯೂ ಎ ಪ್ಲಸ್‌ ಬಂದಿರುವುದು ತುಂಬಾ ಖುಷಿಯಾಗಿದೆ. ಅಪ್ಪ- ಅಮ್ಮನಿಗೂ ಸಂತೋಷವಾಗಿದೆ.
– ಮನೀಷಾ

ಯಶೋಗಾಥೆ ತಿಳಿಸಿ
ಹತ್ತಾರು ಕೊರತೆಗಳ ಮಧ್ಯೆ ಪರೀಕ್ಷೆ ಯನ್ನು ಗೆದ್ದು ಸ್ಫೂರ್ತಿಯಾದವರು ಹಲವರಿದ್ದಾರೆ. ಎಸೆಸೆಲ್ಸಿ  ಪರೀಕ್ಷೆಯಲ್ಲಿ ಹೀಗೆಯೇ ನಿಮ್ಮ ಸುತ್ತಮುತ್ತ ಕಷ್ಟದ ಕಲ್ಲು ಮುಳ್ಳುಗಳ ಮಧ್ಯೆಯೇ ಮಹತ್ತರ ಸಾಧನೆ ಮಾಡಿದವರಿದ್ದರೆ ಅವರ ದೂರವಾಣಿ ಸಂಖ್ಯೆ, ಹೆಸರು ತಿಳಿಸಿ. ನಾವು ಅವರ ಬಗ್ಗೆ ಪ್ರಕಟಿಸುತ್ತೇವೆ, ಉಳಿದವರಿಗೂ ಸ್ಫೂರ್ತಿಯಾಗಲಿ. 
ನಮ್ಮ ವಾಟ್ಸಪ್‌ ಸಂಖ್ಯೆ 99641 69554

Advertisement
Advertisement

Udayavani is now on Telegram. Click here to join our channel and stay updated with the latest news.

Next