Advertisement
ಕಳೆದ ಕೆಲವು ವರ್ಷಗಳಿಂದ ಇತ್ತಂಡಗಳೂ ತಂಡದ ಆಯ್ಕೆ ಹಾಗೂ ಇನ್ನಿತರ ಕಾರಣಗಳಿಂದಾಗಿ ಅಸ್ಥಿರ ಪ್ರದರ್ಶನ ನೀಡುತ್ತ ಬಂದಿವೆ. ಎಲ್ಲಿಯೂ ನೆಚ್ಚಿನ ತಂಡಗಳೆಂದು ಗುರುತಿಸಲ್ಪಡಲೇ ಇಲ್ಲ. 2022ರ ಋತುವಿನಲ್ಲಿ ಪಂಜಾಬ್ 6ಕ್ಕೆ ಹಾಗೂ 2 ಬಾರಿಯ ಚಾಂಪಿಯನ್ ಕೆಕೆಆರ್ 7ನೇ ಸ್ಥಾನಕ್ಕೆ ಕುಸಿದಿತ್ತು.
ಎರಡೂ ತಂಡಗಳು ನೂತನ ನಾಯಕರನ್ನು ಹೊಂದಿರುವುದು ವಿಶೇಷ. ಪಂಜಾಬ್ ತಂಡವನ್ನು ಶಿಖರ್ ಧವನ್ ಹಾಗೂ ಕೆಕೆಆರ್ ತಂಡವನ್ನು ನಿತೀಶ್ ರಾಣಾ ಮುನ್ನಡೆಸಲಿದ್ದಾರೆ. ಕಳೆದ ಸೀಸನ್‌ನಲ್ಲಿ ಕ್ರಮವಾಗಿ ಮಾಯಾಂಕ್ ಅಗರ್ವಾಲ್ ಹಾಗೂ ಶ್ರೇಯಸ್ ಅಯ್ಯರ್ ಈ ತಂಡಗಳ ಕಪ್ತಾನರಾಗಿದ್ದರು. ಟ್ರೆವರ್ ಬೇಲಿಸ್ ಮತ್ತು ಚಂದ್ರಕಾಂತ್ ಪಂಡಿತ್ ಈ ಬಾರಿಯ ಕೋಚ್ ಆಗಿದ್ದಾರೆ. ಕಾಗದದಲ್ಲಿ ಕೆಕೆಆರ್‌ಗಿಂತ ಪಂಜಾಬ್ ತಂಡ ತುಸು ಬಲಿಷ್ಠವಾಗಿ ಗೋಚರಿಸುತ್ತಿದೆ. ಆದರೆ ಇಂಗ್ಲೆಂಡ್‌ನ ಪ್ರಮುಖ ಆಟಗಾರ ಜಾನಿ ಬೇರ್‌ಸ್ಟೊ ಈ ಋತುವಿನಿಂದಲೇ ಬೇರ್ಪಟ್ಟಿದ್ದು ಪಂಜಾಬ್ ಪಾಲಿಗೊಂದು ಹಿನ್ನಡೆ. ಇವರ ಸ್ಥಾನವನ್ನು ಆಸ್ಟ್ರೇಲಿಯದ ಮ್ಯಾಥ್ಯೂ ಶಾರ್ಟ್ ತುಂಬಲಿದ್ದಾರೆ. ಇವರು ಧವನ್ ಜತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.
Related Articles
Advertisement
ಆರ್‌ಸಿಬಿಯಂತೆ ಪಂಜಾಬ್ ಕೂಡ ಇನ್ನೂ ಕಪ್ ಎತ್ತಿಲ್ಲ. 2014ರಲ್ಲಿ ಫೈನಲ್ ತಲುಪಿದ್ದೇ ಅತ್ಯುತ್ತಮ ಸಾಧನೆ.
ರಾಣಾ ಅಚ್ಚರಿಯ ನಾಯಕಕೆಕೆಆರ್ ನಿತೀಶ್ ರಾಣಾ ಸಾರಥ್ಯದಲ್ಲಿ ಎಂಥ ಪ್ರದರ್ಶನ ನೀಡೀತು ಎಂಬ ಕುತೂಹಲವಿದೆ. ರಾಣಾ ಅವರನ್ನು ನಾಯಕತ್ವಕ್ಕೆ ಆರಿಸಿದ್ದೇ ಒಂದು ಅಚ್ಚರಿ ಹಾಗೂ ಅನಿರೀಕ್ಷಿತ ಬೆಳವಣಿಗೆ. ಹಾರ್ಡ್ ಹಿಟ್ಟರ್ ಹಾಗೂ ಉತ್ತಮ ದರ್ಜೆಯ ಆಲ್‌ರೌಂಡರ್‌ಗಳನ್ನು ಕೆಕೆಆರ್ ಹೊಂದಿದೆ. ರಸೆಲ್, ಸುನೀಲ್ ನಾರಾಯಣ್, ವೀಸ್, ವೆಂಕಟೇಶ್ ಅಯ್ಯರ್, ಶಕಿಬ್ ಇವರಲ್ಲಿ ಪ್ರಮುಖರು. ಆದರೆ ಬಾಂಗ್ಲಾ ಕ್ರಿಕೆಟಿಗರಾದ ಶಕಿಬ್ ಅಲ್ ಹಸನ್ ಮತ್ತು ಲಿಟನ್ ದಾಸ್ ಆರಂಭಿಕ ಪಂದ್ಯಕ್ಕೆ ಲಭ್ಯರಿಲ್ಲ.
ತಂಡದ ಅಗ್ರ ಕ್ರಮಾಂಕಕ್ಕೆ ವೀಸ್, ರಿಂಕು ಸಿಂಗ್, ರೆಹಮಾನುಲ್ಲ ಗುರ್ಬಜ್; ಬೌಲಿಂಗ್ ವಿಭಾಗಕ್ಕೆ ಸೌಥಿ, ಉಮೇಶ್ ಯಾದವ್, ಶಾರ್ದೂಲ್ ಠಾಕೂರ್, ವರುಣ್ ಚಕ್ರವರ್ತಿ ಆಧಾರವಾಗಬೇಕಿದೆ.