Advertisement

ಭಾರತೀಯ ಸೇನೆಗೆ ಮತ್ತಷ್ಟು “ಸ್ವದೇಶಿ’ಬಲ

08:21 PM Aug 16, 2022 | Team Udayavani |

ಭಾರತೀಯ ಸೇನೆಗೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಮಂಗಳವಾರ ಹಲವು ಶಸ್ತ್ರಾಸ್ತ್ರಗಳು ಹಾಗೂ ಯುದ್ಧ ವಾಹನಗಳನ್ನು ವರ್ಗಾಯಿಸುವ ಮೂಲಕ ಬಲ ತುಂಬಿದ್ದಾರೆ. ಇವೆಲ್ಲವೂ ಭಾರತದಲ್ಲಿಯೇ ನಿರ್ಮಿಸಲಾಗಿರುವ ಹೊಸ ಶಸ್ತ್ರಾಸ್ತ್ರಗಳು ಹಾಗೂ ವಾಹನಗಳು ಎಂಬುದು ವಿಶೇಷ.

Advertisement

ಲ್ಯಾಂಡಿಂಗ್‌ ಕ್ರಾಫ್ಟ್ ಅಸಾಲ್ಟ್(ಎಲ್‌ಸಿಎ):
ಭಾರತ-ಚೀನ ಗಡಿ ಪ್ರದೇಶದಲ್ಲಿರುವ ಪಾಂಗಾಂಗ್‌ ತ್ಸೋ ಸರೋವರದಲ್ಲಿ ಸಂಚಾರಕ್ಕೆಂದು ವಿಶೇಷವಾಗಿ ಈ ಎಲ್‌ಸಿಎಯನ್ನುನೀಡಲಾಗಿದೆ. 35 ಯೋಧರನ್ನು ಹೊತ್ತೂಯ್ಯಬಲ್ಲ ಸಾಮರ್ಥ್ಯವಿರುವ ಈ ದೋಣಿಯು ಅತ್ಯಂತ ವೇಗವಾಗಿ ನಿಗದಿತ ಸ್ಥಳಕ್ಕೆ ತಲುಪಬಲ್ಲದು. ಇದನ್ನು ಗೋವಾದ ಅಕ್ವೇರಿಯಸ್‌ ಶಿಪ್‌ಯಾರ್ಡ್‌ ಲಿ. ಸಂಸ್ಥೆ ತಯಾರಿಸಿದೆ.

ಕಮಾಂಡರ್‌ ಥರ್ಮಲ್‌ ಇಮೇಜಿಂಗ್‌ ಸೈಟ್‌:
ಇದನ್ನು ಟಿ-90 ಟ್ಯಾಂಕ್‌ನಲ್ಲಿ ಬಳಸಲೆಂದು ನಿರ್ಮಿಸಲಾಗಿದೆ. ಟ್ಯಾಂಕ್‌ನಲ್ಲಿರುವ ಕಮಾಂಡರ್‌ಗಳಿಗೆ ಹೆಚ್ಚು ದೂರದವರೆಗೆ ದೃಷ್ಟಿ ಹಾಯಿಸಲು ಇದು ನೆರವಾಗುತ್ತದೆ. ಹಾಗೆಯೇ ಎದುರಾಳಿ ಟ್ಯಾಂಕ್‌ ಅಥವಾ ಉಪಕರಣದ ತಾಪಮಾನವನ್ನೂ ಇದು ಅಳೆದು ತಿಳಿಸುತ್ತದೆ. ಇದನ್ನು ಇಂಡಿಯಾ ಆಪ್ಟೆಲ್‌ ಲಿ. ಸಂಸ್ಥೆ ತಯಾರಿಸಿದೆ.

ಫ್ಯೂಚರ್‌ ಇನ್‌ಫ್ಯಾಂಟ್ರಿ ಸೋಲ್ಡರ್‌ ಆ್ಯಸ್‌ ಎ ಸಿಸ್ಟಂ(ಎಫ್-ಐಎನ್‌ಎಸ್‌ಎಎಸ್‌):
ಇದು ಮೂರು ಉಪವ್ಯವಸ್ಥೆಗಳನ್ನು ಹೊಂದಿರುತ್ತದೆ. ಮೊದಲನೇ ವ್ಯವಸ್ಥೆಯಲ್ಲಿ ರೈಫ‌ಲ್‌, ಹಗಲು ರಾತ್ರಿಯ ಹೊಲೊಗ್ರಾಫಿಕ್‌ ಮತ್ತು ರಿಫ್ಲೆಕ್ಸ್‌ ಲೈಟ್ಸ್‌ಗಳು ಇರುತ್ತದೆ. ಇದು ಎದುರಾಳಿಯನ್ನು ಗುರುತಿಸುತ್ತದೆ. ಎರಡನೇ ವ್ಯವಸ್ಥೆಯಲ್ಲಿ ಹೆಲ್ಮೆಟ್‌, ಬುಲೆಟ್‌ಪ್ರೂಫ್ ಜಾಕೆಟ್‌ ಇರುತ್ತದೆ. ಮೂರನೇ ವ್ಯವಸ್ಥೆಯು ಕಣ್ಗಾವಲು ಮತ್ತು ಸಂವಹನ ವ್ಯವಸ್ಥೆ ಹೊಂದಿರುತ್ತದೆ. ಇದರಲ್ಲಿ ಪ್ರತಿ ಯೋಧನಿಗೆ ಹ್ಯಾಂಡ್‌ ಫ್ರೀ ರೇಡಿಯೋ ಸೆಟ್‌ ಕೊಡಲಾಗುವುದು ಮತ್ತು ತಂಡದ ಮುಖ್ಯಸ್ಥರಿಗೆ ಎಲ್ಲ ಯೋಧರನ್ನು ಕಣ್ಗಾವಲು ಹಾಗೂ ಸಂವಹನದಲ್ಲಿಟ್ಟುಕೊಳ್ಳಲು ವಿಶೇಷ ಉಪಕರಣ ನೀಡಲಾಗುವುದು.

ಇನ್‌ಫ್ಯಾಂಟ್ರಿ ಪ್ರೊಟೆಕ್ಟೆಡ್‌ ಮೊಬಿಲಿಟಿ ವೆಹಿಕಲ್‌(ಐಎಂಪಿವಿ):
ಎರಡು ರೀತಿಯ ವಿಶೇಷ ವಾಹನಗಳನ್ನು ಬಳಸಿಕೊಂಡು ತಯಾರಿಸಲಾಗಿರುವ ವಾಹನ. ಇದರಲ್ಲಿ ಯೋಧರಿಗೆ ಹೆಚ್ಚಿನ ರಕ್ಷಣೆ ಸಿಗುತ್ತದೆ.

Advertisement

ಕ್ವಿಕ್‌ ರಿಯಾಕ್ಷನ್‌ ಫೈಟಿಂಗ್‌ ವೆಹಿಕಲ್‌:
ಇದು ಯೋಧರನ್ನು ತುರ್ತಾಗಿ ನಿಯೋಜಿಸಲು ಹಾಗೂ ಅವರು ಅತ್ಯಂತ ವೇಗವಾಗಿ ಕಾರ್ಯ ಆರಂಭಿಸಲು ಸಹಾಯ ಮಾಡುವಂತಹ ವಾಹನ.

Advertisement

Udayavani is now on Telegram. Click here to join our channel and stay updated with the latest news.

Next