ನವದೆಹಲಿ : ಜಗತ್ತಿನ ಕ್ರಿಮಿ ಕೀಟಗಳು- ಪ್ರಾಣಿ ಪಕ್ಷಿಗಳ ಸಂಕುಲಗಳಲ್ಲಿ ಏನೇನು ವೈಶಿಷ್ಟ್ಯತೆ ಇದೆ ಎಂದು ಇಲ್ಲಿನವರೆಗೆ ಸಂಪೂರ್ಣವಾಗಿ ತಿಳಿಯಲು ಸಾಧ್ಯವಾಗಿಲ್ಲ. ದಿನಕ್ಕೊಂದು ಸಂಶೋಧನೆಗಳು ನಡೆಯುತ್ತಿದ್ದರೂ ಹೊಸ ಹೊಸ ಆವಿಷ್ಕಾರಗಳು ಆಗುತ್ತಲೇ ಇದೆ. ಇದಕ್ಕೆ ಸಾಕ್ಷಿಯಂಬಂತೆ ಇದೆ ಭಾರತದ ನೆಗೆಯುವ ಇರುವೆಗಳ(Jumping Ants) ಈ ವಿಶೇಷ ಗುಣ ಲಕ್ಷಣ.
ಹೌದು ಭಾರತದ ಕಾಡುಗಳಲ್ಲಿ ಕಾಣಸಿಗುವ ಈ ಇರುವೆಗಳ ಪ್ರಭೇದದಲ್ಲಿ ಒಂದು ವಿಶಿಷ್ಟ ಗುಣ ಲಕ್ಷಣ ಇದೆ. ಅದೇನೆಂದರೆ, ತಮ್ಮ ಮೆದುಳನ್ನು ತನಗೆ ಬೇಕಾದಾಗಿ ಹಿಗ್ಗಿಸುವ ಮತ್ತು ಕುಗ್ಗಿಸುವ ಶಕ್ತಿಯನ್ನು ಹೊಂದಿವೆ. ಇಷ್ಟೇ ಅಲ್ಲದೆ ತನ್ನ ಮೊಟ್ಟೆ ಇಡುವ ಜಾಗ ಅಥವಾ ಜನನಾಂಗವನ್ನು ಹಿಗ್ಗಿಸಿಕೊಳ್ಳುವ ಗುಣವನ್ನೂ ಹೊಂದಿವೆ ಎಂದು ಇತ್ತೀಚೆಗೆ ನಡೆದ ಸಂಶೋಂಧನೆ ವರದಿ ಮಾಡಿದೆ.
ಈ ಜಂಪಿಂಗ್ ಇರುವೆಗಳಲ್ಲಿ ‘ರಾಣಿ’ ಇರುವೆಗೆ ಪ್ರಮುಖವಾದ ಸ್ಥಾನ ಇದೆ. ಈ ಇರುವೆ ಹೇಳಿದಂತೆ ಉಳಿದ ಎಲ್ಲಾ ಇರುವೆಗಳು ಕೇಳಬೇಕು. ಅಲ್ಲದೆ ಈ ರಾಣಿ ಇರುವೆ ಆಗಬೇಕಾದರೆ ತನ್ನ ಮಿದುಳನ್ನು ಕುಗ್ಗಿಸಿಕೊಳ್ಳಬೇಕು.
ಒಂದು ಗುಂಪಿನ ರಾಣಿ ಇರುವೆ ಸತ್ತರೆ ಅದೇ ಗುಂಪಿನ ಮತ್ತೊಂದು ಇರುವೆ ರಾಣಿಯಾಗಬಹುದು. ಈ ವೇಳೆ ಆ ರಾಣಿಯಾಗುವ ಇರುವೆ ಮೆದುಳನ್ನು ಸಣ್ಣದು ಮಾಡಿಕೊಳ್ಳಬೇಕು.
ದಿ ಗಾರ್ಡಿಯನ್ ಅಧ್ಯಯನದ ಪ್ರಕಾರ, ರಾಣಿ ಇರುವೆ ಹೊರತುಪಡಿಸಿ ಉಳಿದ ಇರುವೆಗಳಿಗೆ ಸಹಾಯ ಮಾಡಬೇಕು. ಅಂದರೆ ರಾಣಿ ಇರುವೆಗೆ ಊಟಕ್ಕೆ ವ್ಯವಸ್ಥೆ ಮಾಡಬೇಕು. ಈ ರಾಣಿ ಇರುವೆಯ ಕೆಲಸ ಏನಂದ್ರೆ ಮೊಟ್ಟೆ ಇಟ್ಟು ಮರಿ ಮಾಡುವುದು.
ಈ ನೆಗೆಯುವ ಇರುವೆಗಳ ಮತ್ತೊಂದು ವಿಶೇಷ ಏನಂದ್ರೆ ರಾಣಿ ಇರುವೆಯ ಜನನಾಂಗ ಮಾತ್ರ ದೊಡ್ಡದಿರಬೇಕು ಉಳಿದ ಹೆಣ್ಣು ಇರುವೆಗಳ ಜನನಾಂಗ ಕಡಿಮೆ ಇರಬೇಕು. ಹಾಗೂ ಉಳಿದ ಹೆಣ್ಣು ಇರುವೆಗಳಿಗೆ ಮೊಟ್ಟೆ ಇಡಲು ಅನುಮತಿ ಇಲ್ಲ ಎಂದು ಅಧ್ಯಯನ ತಿಳಿಸಿದೆ.