Advertisement

ಸಪ್ಟೆಂಬರ್ ನಿಂದ ಏನೆಲ್ಲಾ ಬದಲಾಗುತ್ತಿದೆ..? ಪ್ರಮುಖ ಬದಲಾವಣೆಗಳ ಮಾಹಿತಿ ಇಲ್ಲಿದೆ..!

06:53 PM Aug 30, 2021 | |

ನವ ದೆಹಲಿ : ಆಗಸ್ಟ್ ತೋಮಗಳು ಮುಗಿಯುತ್ತಿದ್ದಂತೆ ಸಪ್ಟೆಂಬರ್ ಇನ್ನೇನು ಎರಡು ದಿನಗಳಲ್ಲಿ ಬರಲಿದೆ. ಕೆಲವು ರಾಜ್ಯಗಳಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿದ್ದಂತೆ, ಕೆಲವು ಬದಲಾವಣೆಗಳು ಕೂಡ ಜೊತೆಗೆ ನೆರಳಿನಂತೆ ಬರುತ್ತಿದೆ.

Advertisement

ಪ್ರಮುಖವಾಗಿ ನಾವು ಗಮನಿಸುವುದಾದರೇ, ಆಧಾರ್ ಪ್ಯಾನ್ ಲಿಂಕ್ ಹಾಗೂ ಎಲ್ ಪಿ ಜಿ ಅಡುಗೆ ಅನಿಲದ ಬೆಲೆಯಲ್ಲಿ ನಿರೀಕ್ಷಿತ ಏರಿಕೆ ಸೇರಿವೆ. ಸಪ್ಟೆಂಬರ್ ನಲ್ಲಿ ಈ ಬದಲಾವಣೆಯಂತೂ ನಿರೀಕ್ಷಿತವಾಗಿ ಜನರ ಮೇಲೆ ಪ್ರಭಾವ ಬೀರಲಿದೆ.

ಇದನ್ನೂ ಓದಿ : ಮಕ್ಕಳ ಸೈನ್ಯ ಕಟ್ಟಿ ಮದ್ಯಪಾನದ ವಿರುದ್ಧ ಹೋರಾಡಿ ಗೆದ್ದ ಬಾಲಕ ಸುರ್ಜಿತ್‌

ಏನೇನು ಬದಲಾವಣೆ..?

ಪ್ಯಾನ್-ಆಧಾರ್ ಲಿಂಕ್

Advertisement

ಸೆಪ್ಟೆಂಬರ್ 30 ರೊಳಗೆ ತಮ್ಮ ಆಧಾರ್ ಜೊತೆ ತಮ್ಮ ಪ್ಯಾನ್  ಖಾತೆ ಸಂಖ್ಯೆಯನ್ನು ಲಿಂಕ್ ಮಾಡಬೇಕು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಸೂಚನೆ ನೀಡಿದೆ. ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಲಿಂಕ್ ಮಾಡಲಿಲ್ಲವಾದರೇ, ಬ್ಯಾಂಕಿನ ವಹಿವಾಟಿನಲ್ಲಿ ವ್ಯತ್ಯಾಸ ಉಂಟಾಗಲಿದೆ ಎಂದು ಹೇಳಿದೆ.

ಎಲ್ ಪಿ ಜಿ ಅಡುಗೆ ಅನಿಲ ಬೆಲೆಗಳಲ್ಲಿ ಏರಿಕೆ..?

ಸೆಪ್ಟೆಂಬರ್ ತಿಂಗಳಲ್ಲಿ ಎಲ್ ಪಿ ಜಿ ಅಡುಗೆ ಅನಿಲದ ಬೆಲೆಗಳು ಮತ್ತೆ ಹೆಚ್ಚಾಗಲಿವೆ. ಆಗಸ್ಟ್ 18 ರಂದು ಎಲ್ ಪಿ ಜಿ ಬೆಲೆಯನ್ನು ಪ್ರತಿ ಸಿಲಿಂಡರ್ ಗೆ 25 ರೂ.ಗಳಷ್ಟು ಹೆಚ್ಚಿಸಲಾಗಿತ್ತು, ಆದರೆ ಜುಲೈನಲ್ಲಿ 25.50 ರೂ. ನಷ್ಟು ಹೆಚ್ಚಳವಾಗಿತ್ತು.

ಆಧಾರ್ ಹಾಗೂ ಪಿಎಫ್ ಲಿಂಕ್

ಸೆಪ್ಟೆಂಬರ್ ತಿಂಗಳಿನಿಂದ, ನಿಮ್ಮ ಯುಎಎನ್ (ಯುನಿವರ್ಸಲ್ ಅಕೌಂಟ್ ನಂಬರ್) ಮತ್ತು ಆಧಾರ್ ಕಾರ್ಡ್ ಇಷ್ಟವಾಗದಿದ್ದರೆ ನಿಮ್ಮ ಉದ್ಯೋಗದಾತರು ನಿಮ್ಮ ಪಿಎಫ್ ಖಾತೆಗೆ ಹಣವನ್ನು ಕ್ರೆಡಿಟ್ ಮಾಡಲು ಸಾಧ್ಯವಾಗುವುದಿಲ್ಲ. ಇದನ್ನು ಕಾರ್ಯಗತಗೊಳಿಸಲು, ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ ಸಾಮಾಜಿಕ ಭದ್ರತೆ ನೀತಿ 2020 ರ ಸೆಕ್ಷನ್ 142 ನನ್ನು ಪರಿಷ್ಕರಿಸಿದೆ.

ಜಿಎಸ್‌ ಟಿಆರ್ – 1 ಫೈಲಿಂಗ್ ಮಾರ್ಗಸೂಚಿಗಳು

ಸೆಪ್ಟೆಂಬರ್‌ ನಿಂದ, ಸರಕು ಮತ್ತು ಸೇವಾ ತೆರಿಗೆ ಜಾಲ (ಜಿ ಎಸ್‌ ಟಿ ಎನ್) ಜಿಎಸ್‌ ಟಿಆರ್ -1 ಸಲ್ಲಿಸಲು ಕೇಂದ್ರ ಜಿಎಸ್‌ ಟಿ ನಿಯಮಗಳ ನಿಯಮ -59 (6) ಅನ್ವಯಿಸುತ್ತದೆ ಎಂದು ಹೇಳಿದೆ. ನಿಯಮದ ಪ್ರಕಾರ, ಜಿಎಸ್‌ ಟಿಆರ್ -3B ನಮೂನೆಯಲ್ಲಿ ರಿಟರ್ನ್ಸ್ ಸಲ್ಲಿಸದ ಯಾವುದೇ ನೋಂದಾಯಿತ ವ್ಯಕ್ತಿಗೆ ಜಿಎಸ್‌ ಟಿಆರ್ -1 ಫಾರ್ಮ್ ಅನ್ನು ಸಲ್ಲಿಸಲು ಅನುಮತಿಸಲಾಗುವುದಿಲ್ಲ.

ಇದನ್ನೂ ಓದಿ : ಅಧಿಕಾರಕ್ಕೆ ಬಂದ್ರೆ ಶೇ.50 ಆಸ್ತಿತೆರಿಗೆ ರಿಯಾಯಿತಿ : ಡಿ.ಕೆ. ಶಿವಕುಮಾರ

Advertisement

Udayavani is now on Telegram. Click here to join our channel and stay updated with the latest news.

Next