Advertisement

ಜಿಮ್‌ ಪ್ರೇಮಿಗಳು ಪಾಲಿಸಬೇಕಾದ ಸರಳ ಸೂತ್ರಗಳು

11:16 PM Dec 30, 2019 | mahesh |

ಪ್ರತಿದಿನ ಬೆಳಗಾದರೆ ಸಾಕು ಹಲವಾರು ಜನ ಜಿಮ್‌ ಸೆಂಟರ್‌ನತ್ತ ಓಡುವುದನ್ನು ನಾವು ನೋಡಿದ್ದೇವೆ. ಫಿಟ್‌ ಆ್ಯಂಡ್‌ ಸ್ಟೈಲೀಶ್‌ ಆಗಿ ಕಾಣಬೇಕೆಂಬುದೇ ಅವರೆಲ್ಲರ ಒತ್ತಾಸೆ ಆಗಿರುತ್ತದೆ. ಆದರೆ ಕೇವಲ ಜಿಮ್‌ ಸೆಂಟರ್‌ಗೆ ತೆರಳಿದರೆ ಸಾಲುವುದಿಲ್ಲ ಅಲ್ಲಿ ಪಡುವ ಶ್ರಮ ಫ‌ಲ ಕೊಡಬೇಕಾದರೆ ಜಿಮ್‌ ಪ್ರೇಮಿಗಳು ತಮ್ಮ ವರ್ಕೌಟ್‌ ಮಾಡುವುದರೊಂದಿಗೆ ಕೆಲವೊಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟು ಕೊಳ್ಳಬೇಕಾಗುತ್ತದೆ.

Advertisement

ಕಾಲ ಹರಣ ಸಲ್ಲದು
ಜಿಮ್‌ನಲ್ಲಿ ವರ್ಕೌಟ್‌ ಮಾಡುವಾಗ ಏಕಾಗ್ರತೆ ಇರುವುದು ಅಗತ್ಯ. ಇಲ್ಲವಾದಲ್ಲಿ ಜಿಮ್‌ ಇಂಜುರಿಗಳು ಅಥವಾ ಅಪಾಯಗಳಿಗೆ ಕಾರಣವಾಗಬಹುದು. ಅಷ್ಟು ಮಾತ್ರವಲ್ಲ, ನಿಮ್ಮ ಗುರಿಯನ್ನು ತಲುಪಲು ಅಸಾಧ್ಯವಾಗಬಹುದು. ಹಾಗಾಗಿ ಜಿಮ್‌ನೊಳಗೆ ಕೇವಲ ತಮಾಷೆ ಮಾಡುತ್ತಾ ಸ್ನೇಹಿತರೊಂದಿಗೆ ಹರಟುತ್ತಾ ಕಾಲಹರಣ ಮಾಡುವ ಬದಲು ಏಕಾಗ್ರತೆಯಿಂದ ವರ್ಕೌಟ್‌ ಮಾಡಿದರೆ ಗುರಿ ತಲುಪಬಹುದು.

ಡ್ರೆಸ್ಕೋಡ್‌ ಆವಶ್ಯಕ
ಸಡಿಲವಾದ ಉಡುಪುಗಳನ್ನು ಧರಿಸುವುದರಿಂದ ಜಿಮ್‌ನಲ್ಲಿ ವರ್ಕೌಟ್‌ ಮಾಡಲು ಕಷ್ಟಕರವಾಗಬಹುದು. ಆದ್ದರಿಂದ ಜಿಮ್‌ಗೆ ಅಗತ್ಯವಿರುವ ಡ್ರೆಸ್ಕೋಡ್‌ ಧರಿಸುವುದು ಉತ್ತಮ. ಹುಡುಗಿಯರಾದಲ್ಲಿ ಮತ್ತಷ್ಟು ಜಾಗ್ರತೆ ಅವಶ್ಯ. ಎಕ್ಸ್‌ಪೋಸ್‌ ಅಥವಾ ಟ್ರಾನ್ಸ್‌ ಪೆರೆಂಟ್‌ ಅಂಥ ಉಡುಪುಗಳು ನಿಮ್ಮ ಏಕಾಗ್ರತೆಗೆ ಧಕ್ಕೆ ಉಂಟು ಮಾಡಬಹುದು.

ತರಬೇತಿಗೆ ಪ್ರಾಮುಖ್ಯತೆ
ಯಾವುದೇ ವಿಷಯವಾಗಲಿ ಕಲಿಯುವ ಹುಮ್ಮಸ್ಸು ಇರಬೇಕು. ಜಿಮ್‌ನಲ್ಲಿಯೂ ಹಾಗೆ ಇದ್ದ ಸಮಯವನ್ನು ಸದುಪಯೋಗ ಮಾಡಿಕೊಂಡು ಕಲಿಯುವ ಜಾಣ್ಮೆ ಯನ್ನು ಬೆಳೆಸಿಕೊಳ್ಳಿ. ತರಬೇತಿದಾರ ನೀಡುವ ನಿದರ್ಶನಗಳನ್ನು ಪಾಲಿಸಿ. ಜತೆಗೆ ಟ್ರೈನರ್‌ ಬಳಿ ಉತ್ತಮ ಬಾಂಧವ್ಯ ಇರಿಸಿಕೊಳ್ಳಿ. ಜಿಮ್‌ ಸಾಧನಗಳ ಬಗ್ಗೆ ತಿಳಿದುಕೊಳ್ಳಿ. ಅವುಗಳ ನಾನಾ ಉಪಯೋಗಗಳ ಬಗ್ಗೆಯೂ ಚರ್ಚೆ ನಡೆಸಿ. ವರ್ಕೌಟ್‌ ಬಗ್ಗೆಯೂ ಆಗಾಗ್ಗೆ ಚರ್ಚೆ ನಡೆಸಿ. ಇದು ನಿಮ್ಮ ಮುಂದಿನ ಗುರಿಗೆ ಸಹಕಾರಿಯಾಗಬಲ್ಲದು.

ಮೊಬೈಲ್‌ ಬಳಕೆ ಬೇಡ
ಜಿಮ್‌ನಲ್ಲಿ ವರ್ಕೌಟ್‌ ಮಾಡುವಾಗ ಮೊಬೈಲ್‌ ಬಳಕೆ ಬೇಡ. ಇದು ಇತರರಿಗೆ ಡಿಸ್ಟರ್ಬ್ ಮಾಡುತ್ತದೆ ಜತೆಗೆ ಏಕಾಗ್ರತೆಯನ್ನು ಕುಂದಿಸುತ್ತದೆ. ಮೊಬೈಲ್‌ ರಿಂಗ್‌ ಟೋನ್‌ ಆಫ್ ಮಾಡಿ ಲಾಕರ್‌ನಲ್ಲಿಟ್ಟು ವಕೌìಟ್‌ ಮಾಡುವುದು ಉತ್ತಮ.

Advertisement
Advertisement

Udayavani is now on Telegram. Click here to join our channel and stay updated with the latest news.

Next