Advertisement

2020ರಲ್ಲಿ ಕೋಟಿಗಟ್ಟಲೇ ಜನರು ಬಳಸಿದ ಅತಿ ಕೆಟ್ಟ ಪಾಸ್ ವರ್ಡ್ ಗಳಿವು !:

08:31 PM Nov 21, 2020 | Mithun PG |

ನವದೆಹಲಿ: ಡಿಜಿಟಲ್ ಯುಗದಲ್ಲಿ ‘ಪಾಸ್ ವರ್ಡ್ ’ ಎಂಬುದು ಅತೀಮುಖ್ಯವಾದುದು. ಫೇಸ್ ಬುಕ್, ಟ್ವಿಟ್ಟರ್, ಜಿಮೇಲ್ ಸೇರಿದಂತೆ ಎಲ್ಲಾ ಮಾದರಿಯ ಅಪ್ಲಿಕೇಶನ್ ಅಥವಾ ಅನ್ ಲೈನ್ ಸೇವೆಗಳಿಗೂ ಪಾಸ್ ವರ್ಡ್ ಮತ್ತು ಓಟಿಪಿ  ನಮೂದಿಸಿಯೇ ಪ್ರವೇಶ ಪಡೆಯಬೇಕಾಗುತ್ತದೆ.

Advertisement

ಆದರೇ ಹಲವರು ಎಲ್ಲಾ ಅಕೌಂಟ್ ಗಳಿಗೂ ಒಂದೇ ಮಾದರಿಯ  ಪಾಸ್ ವರ್ಡ್ ಬಳಕೆ ಮಾಡಿರುತ್ತಾರೆ. ಯಾವುದೇ ಒಂದು ಪಾಸ್ ವರ್ಡ್ ಹ್ಯಾಕರ್ ಗಳ ಕೈಗೆ ಸಿಕ್ಕರೂ ನಿಮ್ಮ ಸಂಪೂರ್ಣ  ಮಾಹಿತಿ ಅವರ  ಪಾಲಾಗುವುದು ಸುಳ್ಳಲ್ಲಾ.

ಪಾಸ್ ವರ್ಡ್ ಮ್ಯಾನೇಜರ್ ಸಂಸ್ಥೆಗಳಲ್ಲಿ ಒಂದಾದ ನಾರ್ಡ್ ಪ್ರೆಸ್ ಜಗತ್ತಿನ ಜನರು 2020ರಲ್ಲಿ ಬಳಕೆ ಮಾಡಿದ ಅತೀ ಕೆಟ್ಟ ಪಾಸ್ ವರ್ಡ್ ಗಳನ್ನು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಾತ್ರವಲ್ಲದೆ ಇದನ್ನು 12 ವಿಧಗಳಾಗಿ ವಿಂಗಡಿಸಿದೆ.

ಪ್ರಮುಖವಾಗಿ ನಾರ್ಡ್ ಪ್ರೆಸ್ 200 ಅತೀ ಕೆಟ್ಟ ಪಾಸ್ ವರ್ಡ್ ಗಳನ್ನು ಗುರುತಿಸಿದೆ. 2020 ರಲ್ಲಿ ‘123456’ ಎಂಬ ಅಂಕೆಯನ್ನು ಸುಮಾರು 23 ಮಿಲಿಯನ್ ಜನರು ಪಾಸ್ ವರ್ಡ್ ಆಗಿ ಬಳಿಸಿಕೊಂಡಿದ್ದಾರೆ. ಇದಲ್ಲದೆ ‘123456789’ ಅಂಕೆಯು ಜಗತ್ತಿನ ಕೆಟ್ಟ ಪಾಸ್ ವರ್ಡ್ ಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.  ಇವುಗಳನ್ನು ಹ್ಯಾಕ್ ಮಾಡಲು ಹ್ಯಾಕರ್ ಗಳಿಗೆ 1 ಸೆಕೆಂಡ್ ಗಿಂತ ಕಡಿಮೆ ಸಮಯ ಸಾಕು ಎಂಬುದು ಗಮನಾರ್ಹ.

ಇದನ್ನೂ ಓದಿ: ಬೆಟ್ಟಿಂಗ್: ಆನ್ ಲೈನ್ ಗೇಮ್ ನಿಷೇಧಿಸಿದ ತಮಿಳುನಾಡು ಸರ್ಕಾರ

Advertisement

ಸಮೀಕ್ಷೆಯ ಪ್ರಕಾರ, ಹಲವು ಜನರು ನೆನಪಿಟ್ಟುಕೊಳ್ಳಲು ಸುಲಭವಾದ ಪಾಸ್ ವರ್ಡ್ ಗಳನ್ನೇ ಬಳಕೆ ಮಾಡಿದ್ದಾರೆ. ಸಮಸ್ಯೆಯೆಂದರೇ ಈ ತೆರನಾದ ಪಾಸ್ ವರ್ಡ್ ಬಳಕೆದಾರರನ್ನು ಹಲವು ಸಮಸ್ಯೆಗಳಿಗೆ ದೂಡುವುದು ಸುಳ್ಳಲ್ಲ.

ಇದನ್ನೂ ಓದಿ:  ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಅನುಪಸ್ಥಿತಿಯಲ್ಲಿ ಈ ಇಬ್ಬರು ಜವಾಬ್ದಾರಿ ಹೊರಬೇಕು: ಗಾವಸ್ಕರ್

ಹಾಗಾದರೇ ಯಾವ ಮಾದರಿಯ ಪಾಸ್ ವರ್ಡ್ ಗಳನ್ನು ಬಳಕೆ ಮಾಡಬೇಕು ?

ನಾರ್ಡ್ ಪ್ರೆಸ್ ಪ್ರಕಾರ ಡಿಕ್ಷನರಿ ಪದಗಳು, ಸಂಖ್ಯೆಗಳು ಮುಂತಾದವುಗಳ ಬಳಕೆ ಕಡಿತಗೊಳಿಸಬೇಕು. ಮಾತ್ರವಲ್ಲದೆ ‘aaaa’ ‘123abc’ ಜನ್ಮದಿನಾಂಕ, ಮೊಬೈಲ್ ಸಂಖ್ಯೆ,  ಮುಂತಾದ ಸಾಮಾನ್ಯ ಪದಗಳ ಬಳಕೆಯನ್ನು ನಿಲ್ಲಿಸಬೇಕು.

ಬದಲಾಗಿ ಎಲ್ಲಾ ಮಾದರಿಯ ಅಕೌಂಟ್ ಗಳಿಗೂ ಪ್ರತ್ಯೇಕವಾದ ಪಾಸ್ ವರ್ಡ್ ಬಳಸಿದರೇ ಒಳಿತು. ಜೊತೆಗೆ ನಂಬರ್, ಸಿಂಬಲ್ಸ್, ಕ್ಯಾರೇಕ್ಟರ್ಸ್ ಎಲ್ಲಾ ಮಿಳಿತಗೊಂಡ 12 ಪದಗಳ ಪಾಸ್ ವರ್ಡ್ ಕ್ರಿಯೇಟ್ ಮಾಡುವುದು ಭದ್ರತಾ ದೃಷ್ಟಿಯಿಂದ ಉತ್ತಮ. ಇದರ ಜೊತೆ ಪ್ರತಿ 90 ದಿನಗಳಿಗೊಮ್ಮೆ ಈ ಪಾಸ್ ವರ್ಡ್ ಗಳನ್ನು ಬದಲಾಯಿಸುವುದು ಅತೀ ಮುಖ್ಯ ಎಂದು  ತಿಳಿಸಿದೆ.

ಇದನ್ನೂ ಓದಿ:  ತಮಿಳುನಾಡು: ಅಮಾನತುಗೊಂಡ ಡಿಎಂಕೆ ಮುಖಂಡ ರಾಮಲಿಂಗಂ ಸಿಟಿ ರವಿ ಸಮ್ಮುಖದಲ್ಲಿ ಬಿಜೆಪಿಗೆ

Advertisement

Udayavani is now on Telegram. Click here to join our channel and stay updated with the latest news.

Next