Advertisement

ಥರ್ಮೋಮೀಟರ್‌ ಬಳಕೆ ವಿವಾದ: ಬಂಟ್ವಾಳ ಪುರಸಭೆ ಪರಿಸರ ಎಂಜಿನಿಯರ್‌ಗೆ ನೋಟಿಸ್‌

07:01 AM Apr 25, 2020 | mahesh |

ಬಂಟ್ವಾಳ: ಕೋವಿಡ್ ಸೋಂಕು ವ್ಯಾಪಕವಾಗಿರುವ ಈ ಸಂದರ್ಭ ಬಂಟ್ವಾಳ ಪುರಸಭೆಯ ಪರಿಸರ ಎಂಜಿನಿಯರ್‌ ಅವರು ಪುರಸಭೆಯ ಪೌರ ಪ್ರತಿಯೊಬ್ಬ ಕಾರ್ಮಿಕರ ಬಾಯಿಗೆ ಥರ್ಮೋಮೀಟರ್‌ ಇಟ್ಟು ಆರೋಗ್ಯ ತಪಾಸಣೆ ನಡೆಸಿರುವ ವಿವಾದಕ್ಕೆಡೆಯಾಗಿದ್ದು, ಪುರಸಭೆಯ ಮುಖ್ಯಾಧಿಕಾರಿಯವರು ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದ್ದಾರೆ.

Advertisement

ಪರಿಸರ ಎಂಜಿನಿಯರ್‌ ಯಾಸ್ಮಿನ್‌ ಸುಲ್ತನಾ ಅವರು ಎ. 22ರಂದು ಪುರಸಭಾ ಕಚೇರಿಯ ಹಿಂಭಾಗದಲ್ಲಿ ಥರ್ಮೋಮೀಟರ್‌ ಮೂಲಕ ಪ್ರತಿಯೊಬ್ಬ ಪೌರಕಾರ್ಮಿಕರ ದೇಹದ ಉಷ್ಣಾಂಶ ತಪಾಸಣೆ ನಡೆಸಿದ್ದರು. ಥರ್ಮೋಮೀಟರನ್ನು ಬಳಸಿದ ಬಳಿಕ ಕುದಿಯುವ ಸೋಂಕು ನಿವಾರಕ ದ್ರಾವಣದಲ್ಲಿ ಅದ್ದಿ ಶುದ್ಧೀಕರಿಸಿ ಇನ್ನೊಬ್ಬ ವ್ಯಕ್ತಿಗೆ ಬಳಸುವುದು ಕ್ರಮ. ಆದರೆ ಇಲ್ಲಿ ಹಾಗೆ ಮಾಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಈ ವಿಚಾರವಾಗಿ ಪರಿಸರ ಎಂಜಿನಿಯರ್‌ಗೆ ನೋಟಿಸ್‌ ಜಾರಿ ಮಾಡಿರುವ ಮುಖ್ಯಾಧಿಕಾರಿ ಲೀಲಾ ಬ್ರಿಟ್ಟೊ ಅವರು, ಪುರಸಭೆಗೆ ಹೊಂದಿಕೊಂಡಿರುವ ಬಂಟ್ವಾಳ ಪೇಟೆಯಲ್ಲಿ ಈಗಾಗಲೇ ಕೋವಿಡ್ ಸೋಂಕು ದೃಢ ಪ್ರಕರಣಗಳು ಕಂಡು ಬಂದಿದ್ದು, ಅದರ ನಿಯಂತ್ರಣದ ಕುರಿತು ತಾವು ಕೂಡ ಕಾರ್ಯ ಪ್ರವೃತ್ತರಾಗಿದ್ದೀರಿ. ಆದರೆ ಇದೀಗ ನೀವು ತನ್ನ ಗಮನಕ್ಕೆ ತಾರದೆ, ಅನುಮತಿ ಪಡೆಯದೆ ತಪ್ಪಾದ ಕ್ರಮದಲ್ಲಿ ಆರೋಗ್ಯ ತಪಾಸಣೆ ನಡೆಸಿರುವುದು ಗಂಭೀರ ವಿಚಾರವಾಗಿದೆ. ಹೀಗಾಗಿ ತಮ್ಮ ವಿರುದ್ಧ ಯಾಕೆ ಕಾನೂನು ಕ್ರಮ ಕೈಗೊಳ್ಳಬಾರದು ಎಂಬುದಾಗಿ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next